Home
ಸುದ್ದಿಜಾಲ

ಹುವಾವೇ ಎಂಜಾಯ್ 20 SE ಸ್ಮಾರ್ಟ್‌ಫೋನ್ ಅನಾವರಣ: ಬೆಲೆ ಎಷ್ಟು?

ಹುವಾವೇ ಸಂಸ್ಥೆಯು ಈಗಾಗಲೇ ಎಂಜಾಯ್ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಅದರ ಬೆನ್ನಲೇ ಈಗ ಎಂಜಾಯ್ 20 SE ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಹಾಗೂ ಅಧಿಕ ಪ್ರೊಸೆಸರ್‌ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿವೆ.

ಎಂಜಾಯ್

ಹೌದು, ಹುವಾವೇ ಸಂಸ್ಥೆಯು ಎಂಜಾಯ್ 20 SE ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್ Dimensity 720 ಪ್ರೊಸೆಸರ್‌ ಒಳಗೊಂಡಿವೆ. ಹಾಗೆಯೇ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಸಹ ಪಡೆದುಕೊಂಡಿವೆ. ಇನ್ನುಳಿದಂತೆ ಎಂಜಾಯ್ 20 ಮತ್ತು ಎಂಜಾಯ್ 20 ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಎಂಜಾಯ್ 20 SE ಸ್ಮಾರ್ಟ್‌ಫೋನ್ ಅಧಿಕ ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.67-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು ಪಂಚ್‌ ಹೋಲ್‌ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ.

ಪ್ರೊಸೆಸರ್‌ ಕಾರ್ಯ

ಪ್ರೊಸೆಸರ್‌ ಕಾರ್ಯ

ಎಂಜಾಯ್ 20 SE ಸ್ಮಾರ್ಟ್‌ಫೋನ್ ಮೀಡಿಯಾಟೆಕ್ Dimensity 720 SoC ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ 4GB RAM/128GB ಹಾಗೂ 8GB RAM/128GB ಸ್ಟೋರೇಜ್ ಅನ್ನು ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 512GB ಮೆಮೊರಿ ಹೆಚ್ಚಿಸುವ ಅವಕಾಶ ಪಡೆದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಎಂಜಾಯ್ 20 SE ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಕ್ಯಾಮೆರಾ ಕ್ರಮವಾಗಿ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 8 ಎಂಪಿ ಸೆನ್ಸಾರ್‌ ಪಡೆದಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಎಂಜಾಯ್ 20 SE ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದರೊಂದಿಗೆ 22.5W ಸಾಮರ್ಥ್ಯ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ ವಿ 5.1, ಜಿಪಿಎಸ್, ಗ್ಲೋನಾಸ್, ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಎಂಜಾಯ್ 20 SE ಸ್ಮಾರ್ಟ್‌ಫೋನ್ 4GB RAM/128GB ಸ್ಟೋರೇಜ್‌ ವೇರಿಯಂಟ್‌ ಚೀನಾದಲ್ಲಿ Yuan 1,299 (ಭಾರತದಲ್ಲಿ ಅಂದಾಜು 14,600ರೂ.) ಆಗಿದೆ. ಅದೇ ರೀತಿ 8GB RAM/128GB ಸ್ಟೋರೇಜ್‌ ಬೆಲೆಯು Yuan 1,499 (ಭಾರತದಲ್ಲಿ ಅಂದಾಜು 16,900ರೂ).

Best Mobiles in India

English summary
Huawei Enjoy 20 SE with a 6.67-inch full-HD+ hole-punch display, 5,000mAh battery, 22.5W fast charging, launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+