Home
ಸುದ್ದಿಜಾಲ

ಹುವಾವೆ ಕಂಪೆನಿಯ ಮಹಿಳಾ 'ಸಿಎಫ್ಒ' ಅರೆಸ್ಟ್!..ಭಾರತಕ್ಕೆ 2 ಲಕ್ಷ ಕೋಟಿ ಲಾಸ್!!

ಜಗತ್ತಿನಲ್ಲೇ ಅತಿ ಹೆಚ್ಚು ಮೊಬೈಲ್ ತಯಾರಿರಿಸುವ ಮೊಬೈಲ್ ಕಂಪೆನಿ ಎಂದು ಹೆಸರಾಗಿರುವ ಚೀನಾದ ಹುವಾವೆ ಸಿಎಫ್ಒ ಅರೆಸ್ಟ್ ಆಗಿದ್ದಾರೆ. ಚೀನಾದ ಅತಿ ದೊಡ್ಡ ಮೊಬೈಲ್ ಕಂಪನಿಯಾದ ಹುವಾಯಿ ಸಿಎಫ್‌ಒ ಮೆಂಜ್ ವಾಯಿಜೂ ಅವರನ್ನು ಕೆನಡಾ ದೇಶದ ಅಧಿಕಾರಿಗಳು ಬುಧವಾರ ತಡ ರಾತ್ರಿ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ಮೇಲೆ ಅಮೆರಿಕ ಹೇರಿರುವ ನಿಷೇಧವನ್ನು ಚೀನಾದ ಹುವಾಯಿ ಕಂಪನಿ ಉಲ್ಲಂಘಿಸುತ್ತಿತ್ತು. ಹುವಾವೆ ಕಂಪನಿಯು ತನ್ನ ಮೊಬೈಲ್‌ಗಳಲ್ಲಿ ಅಮೆರಿಕದಲ್ಲಿ ಉತ್ಪಾದಿನೆಯಾಗುತ್ತಿದ್ದ ಅಲ್ಲಿನ ಬಿಡಿ ಭಾಗಗಳನ್ನು ಬಳಸುತ್ತಿತ್ತು ಎಂದು ಟೆಲಿಕಾಂ ಕಂಪನಿ ಮೇಲೆ ನಿಗಾವಹಿಸುತ್ತಿದ್ದ ಅಧಿಕಾರಿಗಳು ಆರೋಪಿಸಿ ಮೆಂಜ್ ವಾಯಿಜೂ ಅವರನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ಹುವಾವೆ ಕಂಪೆನಿಯ ಮಹಿಳಾ 'ಸಿಎಫ್ಒ' ಅರೆಸ್ಟ್!..ಭಾರತಕ್ಕೆ 2 ಲಕ್ಷ ಕೋಟಿ ಲಾಸ್!!

ಹುವಾವೆ ಸಿಎಫ್ಒ ಗಿರುವ ಮೆಂಜ್ ವಾಯಿಜೂ ಅವರು ಹುವಾಯಿ ಕಂಪೆನಿಯ ಸಂಸ್ಥಾಪಕರ ಮಗಳೂ ಸಹ ಆಗಿದ್ದಾರೆ. ವಾಯಿಜೂ ಅವರನ್ನು ಅಮೆರಿಕಾದಿಂದ ಗಡೀಪಾರು ಮಾಡಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಪ್ರಸಾರ ಮಾಡಿದ್ದು, ಹಾಗೇನಾದರೂ ಆದರೆ ಅಮೆರಿಕಾ ಹಾಗೂ ಚೀನಾ ನಡುವಿನ ವ್ಯಾಪಾರ ಸೌಹಾರ್ದಕ್ಕೆ ಕಂಟಕ ಎದುರಾಗುವ ಸಾಧ್ಯತೆಗಳಿವೆ.

ಇನ್ನು ವಾಯಿಜು ಬಂದನವಾದ ನಂತರ ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಪಾನ್, ಚೀನಾ, ಸಿಂಗಾಪೂರ್​ ಹಾಗೂ ದಕ್ಷಿಣ ಕೊರಿಯಾದ ಷೇರು ಮಾರುಕಟ್ಟೆ ಶೇ 2.5ರಷ್ಟು ಕುಸಿದಿದೆ. ಇವೆಲ್ಲವಕ್ಕೂ ಕಾರಣ ಮೆಂಜ್ ವಾಯಿಜೂ ಅವರ ಬಂಧನ ಎಂದು ಹೂಡಿಕೆ ತಜ್ಞರು, ಮಾರುಕಟ್ಟೆಯ ವಿಶ್ಲೇಷಕರು ದೂರಿದ್ದಾರೆ.

ಹುವಾವೆ ಕಂಪೆನಿಯ ಮಹಿಳಾ 'ಸಿಎಫ್ಒ' ಅರೆಸ್ಟ್!..ಭಾರತಕ್ಕೆ 2 ಲಕ್ಷ ಕೋಟಿ ಲಾಸ್!!

ಜಾಗತಿಕ ಪೇಟೆಗಳಲ್ಲಿ ತಲ್ಲಣ ಸೃಷ್ಟಿಯಾದ ನಂತರವೇ ಭಾರತ ಕೂಡ ಇದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಮುಂಬೈ ಪೇಟೆಯು ಗುರುವಾರದ ವಹಿವಾಟಿನ ಒಂದೇ ದಿನದಲ್ಲಿ ಸೆನ್ಸೆಕ್ಸ್​ 572 ಅಂಕಗಳ ಕುಸಿದು ಸುಮಾರು ₹ 2 ಲಕ್ಷ ಕೋಟಿಯಷ್ಟು ಹೂಡಿಕೆ ಕರಗಿದೆ ಎಂದು ಅಂದಾಜಿಸಲಾಗುತ್ತಿದೆ. ಓರ್ವ ಮಹಿಳೆಯ ಬಂಧನ ಈಗ ಭಾರೀ ನಷ್ಟಕ್ಕೆ ಕಾರಣವಾಗಿದೆ.

ಓದಿರಿ: ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಮುಳುಗಡೆ!?

Best Mobiles in India

English summary
Huawei founder's daughter and company CFO Meng Wanzhou arrested in Canada. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+