ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಮುಳುಗಡೆ!?

|

ಒಂದೆರಡು ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಿದ್ದ ಜನರು ಯೂಟ್ಯೂಬ್ ತೆರೆದು ನೋಡುವಾಗ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡಲು ಸಾಧ್ಯವೇ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಇಂದಿನ ಮೊಬೈಲ್ ಡೇಟಾ ಬೆಳವಣಿಗೆಯನ್ನು ಯಾರೂ ಕೂಡ ಕನಸಿನಲ್ಲೂ ಊಹಿಸಿರಲಿಲ್ಲ ಎನ್ನಬಹುದು ಅಲ್ಲವೇ.?!

ಆಗ ಮೊಬೈಲ್‌ನಲ್ಲಿ ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಜೊತೆಗೆ ಹೆಚ್ಚು ಹಣ ಬೇಕಾಗುತ್ತಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮೊಬೈಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಟಿವಿಯನ್ನು ಸಹ ಗಂಟೆಗಟ್ಟಲೆ ನೋಡಬಹುದು. ಅದಕ್ಕಾಗಿಯೇ, ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೆ ಏಕೆ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಜಿಯೋ ಇಂತಹ ಹೊಸ ಸಾಧ್ಯತೆ ತೆರೆಯುವಲ್ಲಿ ಮೊದಲ ಸ್ಥಾನದಲ್ಲಿದೆ.

ಕೇಬಲ್‌ಗಿಂತ ಕಡಿಮೆ ಬೆಲೆಯಲ್ಲಿ ಜಿಯೋ 'ಟಿವಿ ಹೋಮ್'!..ಡಿಟಿಹೆಚ್ ಮುಳುಗಡೆ!?

ನಿಮಗೆ ಗೊತ್ತಾ? ಇನ್ನೆರಡು ವರ್ಷಗಳಲ್ಲಿ ಕೇಬಲ್ ಟಿವಿ ಎಂದ ಮಾತೇ ಇರುವುದಿಲ್ಲ ಎನ್ನುತ್ತಿವೆ ವರದಿಗಳು.ಎಲ್‌ಟಿಇ ಮತ್ತು ವಾಯ್ಸ ಓವರ್‌ ಎಲ್‌ಟಿಇ ಎಂಬ ಟೆಕ್ನಾಲಜಿಯನ್ನು ಅವದಿಗೂ ಮೊದಲೇ ಪರಿಚಯಿಸಿ ಯಶಸ್ವಿಯಾದ ಜಿಯೋಯಿಂದಾಗಿ 2019ನೇ ವರ್ಷದಲ್ಲಿ ಟಿವಿ ಮಾರುಕಟ್ಟೆ ಕೂಡ ಭಾರೀ ಬದಲಾಗಲಿದೆ. ಜನರು ಡೇಟಾ ಬಳಸಿ ಟಿವಿ ವೀಕ್ಷಿಸುವ ಕನಸು ನನಸಾಗಲಿದೆ. ಆದರೆ, ಇದಕ್ಕೆ ಪಾವತಿಸಬೇಕಾದ ಹಣ ಮಾತ್ರ ಈಗ ನಾವು ಕೇಬಲ್‌ ಸಂಪರ್ಕ ನೀಡುವವರಿಗೆ ಪಾವತಿಸುವ ಹಣಕ್ಕಿಂತ ಕಡಿಮೆ ಇರಲಿದೆ.!

ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

ಇಎಂಬಿಎಂಎಸ್ ಎಂಬ ತಂತ್ರಜ್ಞಾನ!

ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಇಎಂಬಿಎಂಎಸ್ ಎಂಬ ಇನ್ನೊಂದು ತಂತ್ರಜ್ಞಾನವನ್ನು ಬಳಸಲು ಜಿಯೋ ಪಣತೊಟ್ಟಿದೆ. ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಈ ತಂತ್ರಜ್ಞಾನ ಪರಿಪೂರ್ಣವಾಗಿ ಅಳವಡಿಯಾದರೆ, ಕೇಬಲ್ ಟಿವಿ ಮಾರುಕಟ್ಟೆ ಜೊತೆಗೆ ಡಿಶ್ ಟಿವಿ ಮಾರುಕಟ್ಟೆ ಕೂಡ ಪಾತಾಳಕ್ಕಿಳಿಯುವ ಸೂಚನೆ ಲಭ್ಯವಾಗಿದೆ.

ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

ಏನಿದು ಇಎಂಬಿಎಂಎಸ್ ತಂತ್ರಜ್ಞಾನ?

ಟೆಲಿಕಾಂ ನೆಟ್‌ವರ್ಕನ್ನೇ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಇದಾಗಿದ್ದು, ಮೊಬೈಲ್‌ ಕಮ್ಯೂನಿಕೇಶನ್ ಮತ್ತು ಟಿವಿ ಕಮ್ಯೂನ್ಕೇಶನ್ ವಿಧಾನದ ಮೂಲದಲ್ಲೇ ವ್ಯತ್ಯಾಸವಿರುತ್ತದೆ. ಇದು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ಟೆಲಿಕಾಂ ನೆಟ್‌ವರ್ಕ್‌ ಸಾಮರ್ಥ್ಯವನ್ನು ದುಪ್ಪಟ್ಟಾ ಗಿಸುವ ಹೈಬ್ರಿಡ್‌ ಟೆಕ್ನಾಲಜಿಯಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸಂಪರ್ಕವನದನ್ನು ಈ ತಂತ್ರಜ್ಞಾನ ಒದಗಿಸಲಿದೆ.

ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

ಇಎಂಬಿಎಂಎಸ್ vs ಟೆಲಿಕಾಂ ನೆಟ್‌ವರ್ಕ್

ಈಗಿರುವ ಟೆಲಿಕಾಂ ನೆಟ್‌ವರ್ಕ್ಗೂ, ಇನ್ನೇನು ಬರುತ್ತಿರುವ ಇಎಂಬಿಎಂಎಸ್ ತಂತ್ರಜ್ಞಾನಕ್ಕೂ ವ್ಯತ್ಯಾಸಗಳಿವೆ. ಟೆಲಿಕಾಂ ನೆಟ್‌ವರ್ಕ್‌ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುತ್ತೇವೆಂದಾದರೆ ಈ ಒನ್ ವೇ ಕಮ್ಯೂನಿಕೇಶನ್ ಸಾಕಲ್ಲವೇ ಎಂಬ ಪ್ರಶ್ನೆ ಎದುರಾದಾಗ ಈ ಇಎಂಬಿಎಂಎಸ್ ತಂತ್ರಜ್ಞಾನ ಹುಟ್ಟಿಕೊಂಡಿದೆ. ಮೊಬೈಲ್‌ ಕಮ್ಯೂನಿಕೇಶನ್ ಟು ವೇ ಆಗಿದ್ದರೆ, ಟಿವಿ ಒನ್ ವೇ ಆಗಿರುತ್ತದೆ. ಇದು ಟಿವಿ ಪ್ರಪಂಚವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಲಿದೆ.

ಇಎಂಬಿಎಂಎಸ್ ಏಕೆ ಬೆಸ್ಟ್?

ಇಎಂಬಿಎಂಎಸ್ ಏಕೆ ಬೆಸ್ಟ್?

ನಾವು ಮೊಬೈಲ್‌ನಲ್ಲಿ ಟವರ್‌ನಿಂದ ಡೇಟಾ ಸ್ವೀಕರಿಸುತ್ತೇವೆ ಹಾಗೂ ಕಳುಹಿಸುತ್ತೇವೆ. ಇದನ್ನು ಯೂನಿಕಾಸ್ಟ್‌ ಎನ್ನುತ್ತೇವೆ. ಆದರೆ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲ. ಅಂದರೆ ಒಮ್ಮೆ ಒಂದು ಟ್ರಾನ್ಸ್‌ಪಾಂಡರ್ ಅಥವಾ ಟ್ರಾನ್ಸ್‌ಮಿಟರ್ ಸಂಕೇತಗಳನ್ನು ಕಳುಹಿಸಿದ ಮೇಲೆ ಅವು ಯಾವೇ ಸಂಕೇತಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಇದರಿಂದ ಇಎಂಬಿಎಂಎಸ್ ಸಂಕೇತಗಳ ಸಾಮರ್ಥ್ಯ ಹೆಚ್ಚಿರುತ್ತದೆ.

ನೆಟ್‌ವರ್ಕ್ ಸ್ಲೋ ಆಗೊಲ್ಲಾ!

ನೆಟ್‌ವರ್ಕ್ ಸ್ಲೋ ಆಗೊಲ್ಲಾ!

ಈ ಇಎಂಬಿಎಂಎಸ್ ತಂತ್ರಜ್ಞಾನದ ಮನ್ನೊಂದು ಅನುಕೂಲವೆಂದರೆ ಒಂದೇ ಟವರ್‌ನಡಿ ಸಾವಿರಾರು ಜನರು ಕೂತು ಒಂದೇ ಸಮನೆ ಹೈ ಹೆಚ್‌ಡಿ ಸಿನಿಮಾಗಳನ್ನು ನೋಡಿದರೂ ನೆಟ್‌ವರ್ಕ್‌ ಸ್ಲೋ ಆಗುವುದಿಲ್ಲ. ಈ ಇಎಂಬಿಎಂಎಸ್ ತಂತ್ರಜ್ಞಾನ ಬಳಸಿಕೊಂಡು ಸೆಟ್‌ ಟಾಪ್‌ ಬಾಕ್ಸ್‌ ಅನ್ನು ಟಿವಿಗೆ ಕನೆಕ್ಟ್ ಮಾಡಿದರೆ, ಅತ್ಯದ್ಭುತ ಕ್ಲಾರಿಟಿ ಚಾನೆಲ್‌ಗ‌ಳನ್ನು ನಾವು ಟಿವಿಯಲ್ಲಿ ನೋಡಬಹುದು. ಹಾಗಾಗಿ, ಇದು ಅನಿಯಮಿತ ಮನರಂಜನೆ ಸೇವೆಯನ್ನು ನೀಡಲಿದೆ.

ಇಂಟರ್‌ನೆಟ್ ಅಗತ್ಯವೇ ಇಲ್ಲ!

ಇಂಟರ್‌ನೆಟ್ ಅಗತ್ಯವೇ ಇಲ್ಲ!

ಇಎಂಬಿಎಂಎಸ್ ಕೇವಲ ಒನ್ ವೇ ಕಮ್ಯೂನಿಕೇಶನ್‌ಗೆ ಪರಿವರ್ತಿಸುವ ತಂತ್ರಜ್ಞಾನ ಮಾತ್ರವಲ್ಲ. ಬದಲಾಗಿ, ಇಂಟರ್‌ನೆಟ್‌ ಅಗತ್ಯವೇ ಇಲ್ಲದೆ ಮೊಬೈಲ್‌ ನೆಟ್‌ವರ್ಕ್‌ ಮಾತ್ರ ಬಳಸಿಕೊಂಡು ಟಿವಿ ಚಾನೆಲ್‌ಗ‌ಳನ್ನು ಪ್ರಸಾರ ಮಾಡುವ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನದಲ್ಲಿ ಟಿವಿಯಲ್ಲಿ ನಾವು ಡೇಟಾವನ್ನು ಪಡೆಯುತ್ತೇವಷ್ಟೇ, ಕಳುಹಿಸುವುದಿಲ್ಲವಾದುದರಿಂದ ಅನಿಯಮಿತ ಡೇಟಾವನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಪಡೆಯಬಹುದಾಗಿದೆ.

ಅತ್ಯಂತ ಕಡಿಮೆ ವೆಚ್ಚ!

ಅತ್ಯಂತ ಕಡಿಮೆ ವೆಚ್ಚ!

ಟಿವಿ ವೀಕ್ಷಣೆಗೆ ಹೆಚ್ಚು ಡೇಟಾ ಬೇಕಾಗುತ್ತದೆ. ಇನ್ನು ಟಿವಿಯಲ್ಲಿ ಜನರು ಡೇಟಾ ಬಳಸಿ ಟಿವಿ ವೀಕ್ಷಿಸಬೇಕು ಎಂದಾದರೆ ಅದಕ್ಕೆ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದಲ್ಲಿ ಮೂಲಸೌಕರ್ಯವನ್ನು ಒಗಗಿಸಬೇಕಾಗುತ್ತದೆ. ಟವರ್‌ನಿಂದ ಟವರ್‌ಗೆ ಒಎಫ್‌ಸಿ ಜಾಲ, ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ ಜಾಲ ಹಾಗೂ ಟವರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸಲು ಮೂಲಸೌಕರ್ಯ ಮಿತಿಗಳು ಅಡ್ಡಿಯಾಗುತ್ತಿವೆ. ಆದರೆ, ಈ ಇಎಂಬಿಎಂಎಸ್ ತಂತ್ರಜ್ಞಾನ ಕಡಿಮೆ ವೆಚ್ಚದ್ದಾಗಿದೆ.

ಕೇಬಲ್‌ಗಿಂತ ಕಡಿಮೆ ದರ!

ಕೇಬಲ್‌ಗಿಂತ ಕಡಿಮೆ ದರ!

ಈಗಾಗಲೇ ಫೈಬರ್ ಟು ದಿ ಹೋಮ್ ಮೂಲಕ ಹವಾ ಎಬ್ಬಿಸಿರುವ ಜಿಯೋ, ಟಿವಿ ಮಾರುಕಟ್ಟೆಯಲ್ಲಿ ಮತ್ತೊಮದು ಬದಲಾವಣೆಯನ್ನು ತರಲಿದೆ. ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ಕೇಬಲ್ ಟಿವಿ ಪ್ರಪಂಚವನ್ನು ತನ್ನ ಸುಳಿಯಲ್ಲಿ ಮುಳಿಗಿಸಿಬಿಡುತ್ತದೆ. ಇನ್ನು ಈಗಿರುವ ಕೇಬಲ್ ಸಂಪರ್ಕ ನೀಡುವ ಡಿಟಿಎಚ್ ಕಂಪನಿಗಳ ಕಥೆ ಕೂಡ ಕೊನೆಗೋಳ್ಳಲಿದೆ. 100 ರಿಂದ 200 ರೂಪಾಯಿಗಳಲ್ಲಿ ನಿಮ್ಮ ಮನೆಗೆ ಕೇಬಲ್ ಸಂಪರ್ಕ ಸಿಗಲಿದೆ.!

2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

2 ವರ್ಷದ ಸಂಭ್ರಮದಲ್ಲಿರುವ ಜಿಯೋಗೆ ಮತ್ತೊಂದು ಸಿಹಿಸುದ್ದಿ ನೀಡಿದ ಟ್ರಾಯ್!!

ಭಾರತದ ಟೆಲಿಕಾಂ ಪ್ರಪಂಚವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಜಿಯೋ ವೇಗಕ್ಕೆ ಈಗಲೂ ಸಹ ಸರಿಸಾಟಿ ಯಾರೂ ಇಲ್ಲ ಎಂಬ ಮಾಹಿತಿಯನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಬಿಡುಗಡೆ ಮಾಡಿದೆ. 4G ನೆಟ್​ವರ್ಕ್​ ಲೋಕದಲ್ಲಿ ಸಂಚಲನ ಮೂಡಿಸಿರುವ ಜಿಯೋ 2 ವರ್ಷಗಳ ನಂತರವೂ ಭಾರತದ ಅಂತರ್ಜಾಲ ದಿಗ್ಗಜನಾಗಿ ಮುಂದುವರೆದಿದೆ.

ಹೌದು, ಪ್ರತಿಸ್ಪರ್ಧಿ ನೆಟ್​ವರ್ಕ್​ಗಳ ವೇಗಕ್ಕಿಂತ ಜಿಯೋ ಇಂಟರ್‌ನೆಟ್ ವೇಗ ದುಪ್ಪಟ್ಟಿದ್ದು, ಜಿಯೋ ಡೌನ್​ಲೋಡ್ ವೇಗ 22.3 ಎಂಬಿಪಿಎಸ್ ಇದ್ದರೆ, ಭಾರ್ತಿ ಏರ್​ಟೆಲ್ ಡೌನ್​ಲೋಡ್ ವೇಗ ಕೇವಲ 10 ಎಂಬಿಪಿಎಸ್ ಮಾತ್ರ ಇದೆ. ಇನ್ನು ವೊಡಾಫೋನ್ ಮತ್ತು ಐಡಿಯಾಗಳು ಕ್ರಮವಾಗಿ 6.2 ಮತ್ತು 6.7 ಎಂಬಿಪಿಎಸ್ ವೇಗದ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಟ್ರಾಯ್ ಬಿಡುಗಡೆ ಮಾಡಿರುವ ಈ ಎಲ್ಲಾ ಅಂಕಿಅಂಶಗಳು ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಗೆ ಸಂಬಂಧಿಸಿದ್ದು, ಮಾಹಿತಿ ಪ್ರಕಾರ ಅಪ್​ಲೋಡ್ ವೇಗದಲ್ಲಿ ಐಡಿಯಾ ಪ್ರಾಬಲ್ಯ ಮೆರೆದಿದೆ. 5.9 ಎಂಬಿಪಿಎಸ್ ವೇಗದ ಮೂಲಕ ಇತರೇ ನೆಟ್​ವರ್ಕ್​ಗಳನ್ನು ಹಿಂದಿಕ್ಕಿರುವ ಐಡಿಯಾಕ್ಕೆ ಜಿಯೋ( 4.9 ಎಂಬಿಪಿಎಸ್) ವೇಗ ಕೂಡ ಸಾಟಿಯಾಗದಿರುವುದು ತಿಳಿದುಬಂದಿದೆ.

ಭಾರತದ ಟೆಲಿಕಾಂ ಪ್ರಪಂಚದಲ್ಲಿ ಇತ್ತೀಚಿಗಷ್ಟೆ ಎರಡು ವರ್ಷಗಳನ್ನು ಪೂರೈಸಿದ್ದ ಜಿಯೋಗೆ ಈ ಸುದ್ದಿ ಖುಷಿಯನ್ನು ತಂದಿದೆ. ಕೇವಲ ಎರಡು ವರ್ಷಗಳಲ್ಲೇ ಭಾರತದ ಟೆಲಿಕಾಂನಲ್ಲಿ ಜಿಯೋ ನಿರ್ಮಿಸಿರುವ ದಾಖಲೆಗಳನ್ನು ಸಹ ಜಿಯೋ ಪ್ರಕಟಿಸಿದೆ. ಹಾಗಾದರೆ, ಜಿಯೋ ಈ ಎರಡು ವರ್ಷಗಳಲ್ಲಿ ಸಾಧಿಸಿರುವುದೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಪ್ರಪಂಚದ ಅತಿದೊಡ್ಡ ಸಂಪೂರ್ಣ ಐಪಿ ಜಾಲ:

ಅತ್ಯುನ್ನತ ತಂತ್ರಜ್ಞಾನ ಬಳಸುವ ಸಂಪೂರ್ಣ ಐಪಿ ಜಾಲದ ಬೆಂಬಲ, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್ ಹಾಗೂ 2300 ಮೆಗಾಹರ್ಟ್ಸ್ ಬ್ಯಾಂಡುಗಳನ್ನು ವ್ಯಾಪಿಸಿರುವ ಎಲ್‌ಟಿಇ ತರಂಗಗುಚ್ಛ (ಸ್ಪೆಕ್ಟ್ರಂ) ಹಾಗೂ ಅತಿದೊಡ್ಡ ಫೈಬರ್ ಹೆಜ್ಜೆಗುರುತಿನೊಡನೆ ಜಿಯೋ ಭಾರತದ ಬೇರೆಲ್ಲ ಟೆಲಿಕಾಂ ಸಂಸ್ಥೆಗಳಿಗಿಂತ ದೊಡ್ಡದಾದ ಎಲ್‌ಟಿಇ ಪ್ರಸಾರವ್ಯಾಪ್ತಿಯನ್ನು ಹೊಂದಿದೆ. ಭಾರತದಲ್ಲಿ ಉಚಿತ ಕರೆಗಳ ಕನಸು ನನಸಾಗಿದೆ. ಜಿಯೋ ತನ್ನ ಎಲ್ಲ ಟ್ಯಾರಿಫ್ ಪ್ಲಾನುಗಳ ಜೊತೆಯಲ್ಲಿ ಅಪರಿಮಿತ ಉಚಿತ ಕರೆಗಳನ್ನು ನೀಡಿದೆ.

ಭಾರತಕ್ಕೆ ಈಗ ಮೊದಲ ಸ್ಥಾನ

ಭಾರತಕ್ಕೆ ಈಗ ಮೊದಲ ಸ್ಥಾನ

ಟೆಲಿಕಾಂ ಮಾರುಕಟ್ಟೆ ಬಹಳ ಕ್ಷಿಪ್ರವಾಗಿ ಡೇಟಾದತ್ತ ಸಾಗಿದೆ ಹಾಗೂ ಮತ್ತೊಮ್ಮೆ ಗ್ರಾಹಕರಿಗೆ ಜಯ ದೊರೆತಿದೆ. ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಪ್ರಮಾಣ ತಿಂಗಳಿಗೆ 20 ಕೋಟಿ ಜಿಬಿಯಿಂದ ಸುಮಾರು 370 ಕೋಟಿ ಜಿಬಿಗೆ ತಲುಪಿದೆ. ಈ ಪೈಕಿ ಜಿಯೋ ಗ್ರಾಹಕರೇ ಸುಮಾರು 240 ಕೋಟಿ ಜಿಬಿ ಡೇಟಾ ಬಳಸುತ್ತಿದ್ದಾರೆ. ಮೊಬೈಲ್ ಡೇಟಾ ಬಳಸುವ ರಾಷ್ಟ್ರಗಳ ಸಾಲಿನಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಈಗ ಮೊದಲ ಸ್ಥಾನಕ್ಕೆ ತಲುಪಿದೆ. ಪ್ರತಿ ತಿಂಗಳೂ 100 ಕೋಟಿ ಜಿಬಿಗಿಂತ ಹೆಚ್ಚು ಡೇಟಾ ನಿರ್ವಹಿಸುವ ಜಿಯೋ, ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ವಿಶ್ವದ ಮೊದಲ ಹಾಗೂ ಏಕೈಕ ಎಕ್ಸಾಬೈಟ್ ಟೆಲಿಕಾಂ ಜಾಲವಾಗಿ ಬೆಳೆದಿದೆ.

ನವಯುಗವನ್ನು ಸಾರಿದ ಜಿಯೋಫೋನ್:

ನವಯುಗವನ್ನು ಸಾರಿದ ಜಿಯೋಫೋನ್:

ಫೀಚರ್‌ಗಳನ್ನು ಅಡಕಗೊಳಿಸಿದ ಫೋನ್‌ಗಳ ಬಳಕೆದಾರರಿಗೆ ಭಾರತದ ಹೊಸ ಸ್ಮಾರ್ಟ್ ಫೋನ್ ಎನಿಸಿದ ಜಿಯೋ ಫೋನ್ ಹೊಸದೊಂದು ಯುಗದ ಪ್ರಾರಂಭವನ್ನು ಸಾರುತ್ತಿದೆ. 2018 ಜೂನ್ 30ರ ವೇಳೆಗೆ, 25 ಮಿಲಿಯನ್ ಫೋನುಗಳನ್ನು ಮಾರಾಟಮಾಡಿರುವ ದಾಖಲೆ ಹೊಂದಿರುವ ಜಿಯೋ ಫೋನ್ ಮುಂದಿನ ದಿನಗಳಲ್ಲಿ ಅತಿ ಅಲ್ಪಾವಧಿಯಲ್ಲಿ 100 ಮಿಲಿಯ ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ.

ಜಿಯೋಫೈ ಪರಿಚಯಿಸಿದುದು:

ಜಿಯೋಫೈ ಪರಿಚಯಿಸಿದುದು:

ವೈಯಕ್ತಿಕ ಧ್ವನಿ ಹಾಗೂ ಡಾಟಾ ಹಾಟ್ ಸ್ಪಾಟ್‌ಗಳ ಅಳವಡಿಕೆಯಿಂದಾಗಿ ಗ್ರಾಹಕರು ಜಿಯೋ ಡಿಜಿಟಲ್ ಜೀವನಶೈಲಿಯನ್ನು ಅನ್ನು ಹಲವು ಸಾಧನಗಳ ಮೂಲಕ ಬಳಸುವುದು ಸಾಧ್ಯವಾಗಿದೆ. ಅಲ್ಲದೆ, ವಿಒಎಲ್‌ಟಿಇ ಕರೆಗಳ ಲಾಭವನ್ನು ತಮ್ಮ ಹಳೆಯ 2ಜಿ/3ಜಿ ಮೊಬೈಲ್ ಗಳಿಂದಲೂ ಪಡೆಯುವುದಕ್ಕೆ ಅವಕಾಶವಾಗಿದೆ.

ರೂ. 15ಕ್ಕಿಂತ ಕಡಿಮೆ

ರೂ. 15ಕ್ಕಿಂತ ಕಡಿಮೆ

ಪ್ರತಿ ಜಿಬಿಗೆ ರೂ. 250 - ರೂ. 10,000 ಇದ್ದ ದರಗಳು, ಜಿಯೋ ಪ್ರಾರಂಭದ ನಂತರ ಪ್ರತಿ ಜಿಬಿಗೆ ರೂ. 15ಕ್ಕಿಂತ ಕಡಿಮೆಯಾಗಿದ್ದು ದರಪಟ್ಟಿಗಳು ಜನಸಾಮಾನ್ಯರ ಕೈಗೆಟುಕುವ ಮಟ್ಟಕ್ಕೆ ತಲುಪಿವೆ. ಡೇಟಾ ಪ್ರಜಾತಾಂತ್ರೀಕರಣಕ್ಕೆ ದಾರಿತೋರಿದ ಜಿಯೋ, ವಿವಿಧ ಪ್ಲಾನುಗಳ ಮೂಲಕ ಜಿಯೋ ಗ್ರಾಹಕರು ಇನ್ನೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ.ಭಾರತದಲ್ಲಿ ಟೆಲಿಕಾಂ ಜಾಲಗಳ ಗುಣಮಟ್ಟದ ಮೇಲ್ವಿಚಾರಣೆಯನ್ನು ಅಧಿಕೃತವಾಗಿ ನೋಡಿಕೊಳ್ಳುವ ಟ್ರಾಯ್ ಸ್ಪೀಡ್ಟೆಸ್ಟ್ ಪೋರ್ಟಲ್ ಜಿಯೋ ಅನ್ನು 4ಜಿ ಜಾಲಗಳ ವ್ಯಾಪ್ತಿ, ಬಳಕೆ ಹಾಗೂ ಡೇಟಾ ವೇಗಗಳಲ್ಲಿ ಅಗ್ರಗಣ್ಯವೆಂದು ಸತತವಾಗಿ ಗುರುತಿಸಿದೆ.

ಟ್ಯಾರಿಫ್ ಸರಳೀಕರಣ:

ಟ್ಯಾರಿಫ್ ಸರಳೀಕರಣ:

ಜಿಯೋ ಬರುವ ಮೊದಲು ಮಾರುಕಟ್ಟೆಯಲ್ಲಿ ಸುಮಾರು 22,000 ಪ್ಲಾನುಗಳಿದ್ದವು. ಜಿಯೋ ಬಂದ ನಂತರ ಮೊಬೈಲ್ ಸೇವಾ ಸಂಸ್ಥೆಗಳು ಜಿಯೋ ಮಾದರಿಯನ್ನು ಅನುಸರಿಸುವ ಮೂಲಕ ಪ್ಲಾನುಗಳ ಸಂಖ್ಯೆಯನ್ನು ಕಡಿಮೆಮಾಡಲು ಪ್ರಯತ್ನಿಸುತ್ತಿವೆ. ಕೆಲವೇ ಸರಳ ಪ್ಲಾನುಗಳನ್ನು ಪರಿಚಯಿಸಿರುವ ಜಿಯೋ ಏಕಕಾಲದಲ್ಲಿ ಕೇವಲ ಒಂದೆರಡು ಪ್ಲಾನುಗಳನ್ನಷ್ಟೇ ಪ್ರಮುಖವೆಂದು ಪರಿಗಣಿಸುತ್ತಿದೆ. ಇದರಿಂದಾಗಿ ಗ್ರಾಹಕರ ಬದುಕು ಬಹಳ ಸರಳವಾಗಿದೆ ಹಾಗೂ ತಮಗಾಗಿ ಅತ್ಯುತ್ತಮ ಕೊಡುಗೆಯನ್ನು ಸ್ವತಃ ಅವರೇ ಆಯ್ದುಕೊಳ್ಳುವುದು ಸಾಧ್ಯವಾಗಿದೆ.

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಡಿಜಿಟಲ್ ಇಕೋಸಿಸ್ಟಂನ ಭಾರೀ ಬೆಳವಣಿಗೆ:

ಜಿಯೋ ಪ್ರಾರಂಭದ ನಂತರ ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲ ಪ್ರಮುಖ ಸೋಶಿಯಲ್ ಮೀಡಿಯಾ ವೇದಿಕೆಗಳ ಭಾರತೀಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜಿಯೋ ಪ್ರಾರಂಭದ ಮೊದಲ ವರ್ಷದಲ್ಲೇ ಸುಮಾರು 70 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದಿರುವ ಗೂಗಲ್ ಹಾಗೂ ಫೇಸ್‌ಬುಕ್‌ ಪಾಲಿಗೆ ಭಾರತ ಅತ್ಯಂತ ಸಕ್ರಿಯ ಮಾರುಕಟ್ಟೆಯಾಗಿ ಪರಿಣಮಿಸಿದೆ.

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ದೇಶದ ಡಿವೈಸ್ ಇಕೋಸಿಸ್ಟಂ ವೇಗವರ್ಧನೆ:

ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ಜಿಯೋ, ಇದಕ್ಕಾಗಿಯೇ ರಿಲಯನ್ಸ್ ಜಿಯೋ ಜಿಗಾ ಫೈಬರ್ ಸೇವೆಯನ್ನು ಆಗಸ್ಟ್ 15 ರಂದು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಗಿಗಾ ಫೈಬರ್ ವೊಂದನ್ನು ಪಡೆದುಕೊಂಡರೆ ಸಾಕು ಬಳಕೆದಾರರಿಗೆ ಗಿಗಾ TV ಮತ್ತು ಸ್ಮಾರ್ಟ್‌ ಹೋಮ್‌ಗಳನ್ನು ಲಾಂಚ್ ಮಾಡಲಿದೆ.ರಿಲಯನ್ಸ್ ರೀಟೈಲ್ ನಿಂದ ವಿಒ‌ಎಲ್‌ಟಿಇ ಅಂತರ್ಗತ LYF ಸಾಧನಗಳನ್ನು ಬಿಡುಗಡೆಮಾಡಿದುದರಿಂದ, ಸ್ಮಾರ್ಟ್‌ಫೋನ್ ಬ್ರಾಂಡ್ ಗಳೆಲ್ಲವೂ ಎಲ್‌ಟಿಇ ಶಿಪ್‌ಮೆಂಟ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತಾಯಿತು. ಇದರಿಂದಾಗಿ ಈಗ ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ಗಳೂ ಎಲ್‌ಟಿಇ ಸಾಧನಗಳಾಗಿ ಬದಲಾಗಿರುವ ಸ್ಥಿತಿ ನಿರ್ಮಾಣವಾಗಿದೆ.

ಜಿಯೋ ಗಿಗಾ ಫೈಬರ್‌:

ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲು ಮುಂದಾಗಿರುವ ಜಿಯೋ, ಇದಕ್ಕಾಗಿಯೇ ರಿಲಯನ್ಸ್ ಜಿಯೋ ಜಿಗಾ ಫೈಬರ್ ಸೇವೆಯನ್ನು ಆಗಸ್ಟ್ 15 ರಂದು ಲಾಂಚ್ ಮಾಡಲು ಮುಂದಾಗಿದೆ. ಜಿಯೋ ಗಿಗಾ ಫೈಬರ್ ವೊಂದನ್ನು ಪಡೆದುಕೊಂಡರೆ ಸಾಕು ಬಳಕೆದಾರರಿಗೆ ಗಿಗಾ TV ಮತ್ತು ಸ್ಮಾರ್ಟ್‌ ಹೋಮ್‌ಗಳನ್ನು ಲಾಂಚ್ ಮಾಡಲಿದೆ.

ಆಗಸ್ಟ್‌ 15ಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಲಿರುವ ಅಂಬಾನಿ: ಇನ್‌ ಮುಂದೆ ಕೇಬಲ್‌ಗೆ ಕಾಸಿಲ್ಲ..!

ಆಗಸ್ಟ್‌ 15ಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಲಿರುವ ಅಂಬಾನಿ: ಇನ್‌ ಮುಂದೆ ಕೇಬಲ್‌ಗೆ ಕಾಸಿಲ್ಲ..!

ಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 2016ರಿಂದ ಶುರುವಾದ ಹೊಸ ಜಿಯೋ ಶಕೆಯಲ್ಲಿ ಗ್ರಾಹಕರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಮಾಡಿಕೊಂಡಿದ್ದಾರೆ. ತಮ್ಮನ್ನು ನಂಬಿದ ಗ್ರಾಹಕರಿಗೆ ರಿಲಯನ್ಸ್ ಮಾಲೀಕ ಅಂಬಾನಿ ಎಂದಿಗೂ ಮೋಸವನ್ನು ಮಾಡಿಲ್ಲ, ಮಾರುಕಟ್ಟೆಯಲ್ಲಿಯೇ ಲಭ್ಯವಿರುವ ಅತೀ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ತಲುಪುವಂತೆ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಗ್ರಾಹಕರು ಸಹ ಜಿಯೋ ಮೇಲೆ ಹೆಚ್ಚಿನ ನಂಬಿಕೆಯನ್ನು ಇರಿಸಿದ್ದಾರೆ.

ಇದಲ್ಲದೇ ಜಿಯೋ ಹೆಸರಿನಲ್ಲಿ ಅಂಬಾನಿ ಮುಟ್ಟಿದೆಲ್ಲವೂ ಚಿನ್ನವಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶಿಯ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಇದಲ್ಲದೇ ತಮ್ಮ ಬ್ರಾಡ್ ಬ್ಯಾಂಡ್ ಸೇವೆಯೊಂದಿಗೆ ಬಳಕೆದಾರರಿಗೆ ಉಚಿತವಾಗಿ TV ಸೇವೆಯನ್ನು ನೀಡುತ್ತಿದೆ. ಇದಲ್ಲದೇ ಸ್ಮಾರ್ಟ್‌ ಹೋಮ್ ಪ್ರಾಡೆಕ್ಟ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಎಲ್ಲಾ ಸೇವೆಗಳಿಗೆ ಆಗಸ್ಟ್ 15 ರಂದು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಲಾಭಗಳು:

ಲಾಭಗಳು:

ಒಂದೇ ಒಂದು ಜಿಯೋ ಗಿಗಾ ಫೈಬರ್ ನಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಜಿಯೋ ಗಿಗಾ ಫೈಲರ್ ರೌಟರ್ ಮತ್ತು ಗಿಗಾ ಟಿವಿ ಸೆಟಪ್ ಬಾಕ್ಸ್ ಅನ್ನು ನೀಡಲಿದೆ. ಇದರಿಂದಾಗಿ ನೆಟ್ ಕನೆಕ್ಟಿವಿ ಅನ್ನು ಪಡೆದುಕೊಳ್ಳಬಹುದಾಗಿದೆ ಎಲ್ಲವೇ ವೇಗವ ನೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಉಚಿತ ಟಿವಿ ಸೇವೆಯೂ ದೊರೆಯಲಿದೆ.

ಜಿಯೋ ಗಿಗಾ Tv:

ಜಿಯೋ ಗಿಗಾ Tv:

ಜಿಯೋ ಗಿಗಾ ಫೈಬರ್ ನೊಂದಿಗೆ ಕಾಣಿಸಿಕೊಂಡಿರುವ ಜಿಯೋ ಗಾಗಿ TV ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಡಲಿದೆ. ಇದರಲ್ಲಿ ಬಳಕೆದಾರರು 400ಕ್ಕೂ ಅಧಿಕ ಟಿವಿ ಚಾನಲ್‌ಗಳನ್ನು ಉಚಿತವಾಗಿ ನೋಡಬಹುದಾಗಿದೆ. ಇದಲ್ಲದೇ ಜಿಯೋ ಆಪ್‌ಗಳನ್ನು ಬಳೆಕೆಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ವರ್ಚುವಲ್ ರಿಯಲ್ಟಿ:

ವರ್ಚುವಲ್ ರಿಯಲ್ಟಿ:

ಇದಲ್ಲದೇ ಮುಖೇಶ್ ಅಂಬಾನಿ ಜಿಯೋ ಗಿಗಾ ಫೈಬರ್ ಸೇವೆಯೊಂದಿಗೆ ವರ್ಚುವಲ್ ರಿಯಲ್ಟಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ HD ವಿಡಿಯೋಗಳನ್ನು ನೋಡುವದೊಂದಿಗೆ VR ಕಂಟೆಂಟ್ ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ.

ಸ್ಮಾರ್ಟ್‌ ಹೋಮ್:

ಸ್ಮಾರ್ಟ್‌ ಹೋಮ್:

ಇದಲ್ಲದೇ ಜಜಿಯೋ ಗಿಗಾ ಫೈಬರ್ ನೊಂಂದಿಗೆ ಸ್ಮಾರ್ಟ್ ಹೋಮ್ ವಸ್ತುಗಳನ್ನು ಬಳೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಇದರಿಂದಾಗಿ ವೇಗದ ಇಂಟರ್ನೆಟ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಇದಕ್ಕಾಗಿಯೇ ವೇಗದ ಸೇವೆಯೂ ಲಭ್ಯವಿರಲಿದೆ.

ಫೇಸ್‌ಬುಕ್ ಅನ್ನೇ ಮೀರಿಸಿದ ಜಿಯೋ: ಅಂಬಾನಿಗೆ ಮತ್ತೊಂದು ಗರಿ..!

ಫೇಸ್‌ಬುಕ್ ಅನ್ನೇ ಮೀರಿಸಿದ ಜಿಯೋ: ಅಂಬಾನಿಗೆ ಮತ್ತೊಂದು ಗರಿ..!

ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜಿಯೋದಿಂದಾಗಿಯೇ ಜಗತ್ತು ಭಾರತದ ಕಡೆ ತಿರುಗುವಂತೆ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಖ್ಯಾತ ಟೆಕ್ ಕಂಪನಿಗಳು ಭಾರತಕ್ಕಾಗಿಯೇ ತಮ್ಮ ಯೋಜನೆಯನ್ನು ರೂಪಿಸುವಂತೆ ಮಾಡುವಲ್ಲಿ ಅಂಬಾನಿ ಮಾಲೀಕತ್ವದ ಜಿಯೋ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪಾತ್ರವನ್ನು ವಹಿಸಿದೆ. ಈ ಹಿನ್ನಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಹೊಂದಿದೆ. ಈ ಕುರಿತು ವರದಿಯೊಂದು ಹೊರಬಂದಿದೆ.
ಮಾರುಕಟ್ಟೆಯಲ್ಲಿ ಕೇವಲ ಉಚಿತ ಡೇಟಾವನ್ನು ಮಾತ್ರವೇ ನೀಡುವುದಲ್ಲದೇ ಎಲ್ಲಾ ಮಾದರಿಯಲ್ಲಿಯೂ ಬಳಕೆದಾರರಿಗೆ ಖಚಿತ ಭರವಸೆಯನ್ನು ನೀಡುವ ಮೂಲಕ ನಂಬಿಕೆಗೆ ಪಾತ್ರವಾಗಿದೆ. ಜಿಯೋ ಹೆಸರಿನಲ್ಲಿ ಅಂಬಾನಿ ಆರಂಭಿಸಿದೆಲ್ಲವೂ ಚಿನ್ನವಾಗುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಅನ್ನು ಮೀರಿಸುಂತೆ ಖ್ಯಾತಿಯನ್ನು ಜಿಯೋ ಪಡೆದುಕೊಂಡಿದೆ.

ಟಾಪ್ ಕಂಪನಿ:

ಟಾಪ್ ಕಂಪನಿ:

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಭಾವನ್ನು ಹೊಂದಿರುವ ಟಾಪ್ ಟೆನ್ ಕಂಪನಿಗಳಲ್ಲಿ ಗೂಗಲ್ ಮತ್ತು ಅಮೆಜಾನ್ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಇದೇ ಮಾದರಿಯಲ್ಲಿ ರಿಲಯನ್ಸ್ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್‌ಬುಕ್ ಅನ್ನು ಮೀರಿಸಿರುವ ಜಿಯೋ ಮೂರನೇ ಸ್ಥಾನದಲ್ಲಿದೆ. ಫೇಸ್‌ಬುಕ್ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಪಟ್ಟಿ ಹೀಗಿದೆ:

ಪಟ್ಟಿ ಹೀಗಿದೆ:

ಮೊದಲ ಸ್ಥಾನದಲ್ಲಿ ಗೂಗಲ್ ಕಾಣಿಸಿಕೊಂಡಿದೆ. ನಂತರದಲ್ಲಿ ಅಮೆಜಾನ್, ಜಿಯೋ, ಫೇಸ್‌ಬುಕ್, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್, ಪತಾಂಜಲಿ, ಮೈಕ್ರೋಸಾಫ್ಟ್, ಐಫೋನ್, ಆಪಲ್ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಜಿಯೋ ಪ್ರಭಾವ:

ಜಿಯೋ ಪ್ರಭಾವ:

ಜಿಯೋ ಕೇವಲ ಟೆಲಿಕಾಂ ಕ್ಷೇತ್ರ ಮಾತ್ರವಲ್ಲದೇ ಬ್ರಾಂಡ್ ಬ್ಯಾಂಡ್ ಲೋಕಕ್ಕೂ ಕಾಲಿಟ್ಟಿದೆ. ಇದಲ್ಲದೇ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿದೆ. ಇದಲ್ಲದೇ ಜಿಯೋ ಹೆಸರಿನಲ್ಲಿ ಆನ್‌ಲೈನ್ ಸ್ಟೋರ್ ವೊಂದನ್ನು ತರೆಯುವ ಯೋಜನೆಯೂ ಅಂಬಾನಿ ತಲೆಯಲ್ಲಿ ಇದೆ ಎನ್ನಲಾಗಿದೆ.

ಜಾಗತಿಕವಾಗಿಯೂ ಹೆಸರು:

ಜಾಗತಿಕವಾಗಿಯೂ ಹೆಸರು:

ಜಿಯೋ ಭಾರತದ ಗಡಿಯನ್ನು ದಾಟಿ ಸದ್ದು ಮಾಡಿದೆ. ಇಡೀ ವಿಶ್ವಕ್ಕೆ ಕೇಬಲ್ ಮೂಲಕ ಅಂತರ್ಜಾಲ ಸಂಪರ್ಕವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೇ ದೇಶವನ್ನು ಟಾಪ್ ಒನ್ ಡೇಟಾ ಬಳಸುವ ರಾಷ್ಟ್ರ ಎನ್ನುವ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನುವ ಕಾರಣಕ್ಕೆ ಬಳಷ್ಟು ಖ್ಯಾತಿಯನ್ನು ಸಮುದ್ರದ ಆಚೆಯೂ ಪಡೆದುಕೊಂಡಿದೆ.

Best Mobiles in India

English summary
Breaking News Jio's LTE-Broadcast (eMBMS) technology went live soon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X