Home
ಸುದ್ದಿಜಾಲ

ಹುವಾವೆಯಿಂದ 'ಫ್ರೀಲೆಸ್‌ ನೆಕ್‌ಬ್ಯಾಂಡ್‌' ಮತ್ತು 'ಮಿನಿ ಸ್ಪೀಕರ್' ಲಾಂಚ್!.ಬೆಲೆ?

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಹೆಚ್ಚು ಆಕರ್ಷಕವಾಗಿದ್ದು, ಅದರಲ್ಲಿಯೂ ನೆಕ್‌ಬ್ಯಾಂಡ್‌ ಡಿವೈಸ್‌ಗಳಿಗೆನೇ ಬೇಡಿಕೆ ಅಧಿಕ. ಅದಕ್ಕೆಂದೇ ಪ್ರಮುಖ ಆಡಿಯೊ ಕಂಪನಿಗಳು ನೆಕ್‌ಬ್ಯಾಂಡ್‌ ಮಾದರಿಯ ಇಯರ್‌ಫೋನ್‌ಗಳನ್ನು ಲಾಂಚ್ ಮಾಡುತ್ತಲೇ ಇವೆ. ಈಗ ಇದೇ ಹಾದಿಯಲ್ಲಿ ಹುವಾವೆ ಸಂಸ್ಥೆಯು ಸಹ ಹೆಜ್ಜೆ ಇಟ್ಟಿದ್ದು, ಭಾರತೀಯ ಮಾರುಕಟ್ಟೆಗೆ ಎರಡು ಅತ್ಯುತ್ತಮ ಆಡಿಯೊ ಉಪಕರಣಗಳನ್ನು ಬಿಡುಗಡೆ ಮಾಡಿದೆ.

ಹುವಾವೆ

ಹೌದು, ಜನಪ್ರಿಯ ಹುವಾವೆ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ 'ಫ್ರೀಲೆಸ್‌' ನೆಕ್‌ಬ್ಯಾಂಡ್‌ ಮತ್ತು 'ಮಿನಿ ಸ್ಪೀಕರ್' ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಈ ಎರಡು ಡಿವೈಸ್‌ಗಳು ವಾಯರ್‌ಲೆಸ್‌ ಮಾದರಿಯಲ್ಲಿದ್ದು, ಬ್ಲೂಟೂತ್ ಮೂಲಕ ಕನೆಕ್ಟ್‌ ಆಗಲಿವೆ. ಬ್ಯಾಟರಿ ಲೈಫ್‌ ಸಹ ಅತ್ಯುತ್ತಮ ಆಗಿದ್ದು, ಮೆಟಲ್ ಕೇಬಲ್ ರಚನೆಯನ್ನು ಹೊಂದಿದೆ. ಹಾಗಾದರೇ ಹುವಾವೆ ಫ್ರೀಲೆಸ್‌ ಮತ್ತು ಮಿನಿ ಸ್ಪೀಕರ್ ಡಿವೈಸ್ ಫೀಚರ್ಸ್‌ಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಹುವಾವೆ ಫ್ರೀಲೆಸ್‌ ಡಿಸೈನ್

ಹುವಾವೆ ಫ್ರೀಲೆಸ್‌ ಡಿಸೈನ್

ಹುವಾವೆ ಫ್ರೀಲೆಸ್‌ ಡಿವೈಸ್‌ ವಾಯರ್‌ಲೆಸ್‌ ನೆಕ್‌ಬ್ಯಾಂಡ್‌ ಆಗಿದ್ದು, ಅತೀ ಹಗುರವಾದ ರಚನೆಯನ್ನು ಪಡೆದಿದೆ. ಇದರ ಡಿಸೈನ್ ಸಹ ಆಕರ್ಷಕವಾಗಿದ್ದು, ಕೇವಲ ನಿಖಲ್ ಟೈಟಾನಿಯಮ್ ಮೆಟಲ್‌ನಿಂದ ರಚಿತವಾಗಿದೆ. ಈ ಡಿವೈಸ್‌ ಗ್ರಾಫೈಟ್‌ ಬ್ಲ್ಯಾಕ್‌, ಸನ್‌ರೈಸ್‌, ಗ್ರೀನ್, ಮೂನ್‌ಲೈಟ್‌ ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಹುವಾವೆ ಫ್ರೀಲೆಸ್‌ ಫೀಚರ್ಸ್

ಹುವಾವೆ ಫ್ರೀಲೆಸ್‌ ಫೀಚರ್ಸ್

ಹುವಾವೆ ಫ್ರೀಲೆಸ್‌ ಡಿವೈಸ್‌ ಅತ್ಯುತ್ತಮ ಆಡಿಯೊ ಗುಣಮಟ್ಟವನ್ನು ನೀಡಲಿದೆ. ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಲೈಫ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಈ ಡಿವೈಸ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ವಾಯಿಸ್‌ ಅಸಿಸ್ಟಂಟ್ ಫೀಚರ್‌ ಸಹ ಪಡೆದಿದೆ. ಸೌಂಡ್‌ ಕ್ವಾಲಿಟಿಯು ಕ್ರಿಸ್ಟಲ್ ಕ್ಲಿಯರ್ ಆಗಿದೆ.

ಮಿನಿ ಸ್ಪೀಕರ್

ಮಿನಿ ಸ್ಪೀಕರ್

ಹುವಾವೆ ಮಿನಿ ಸ್ಪೀಕರ್ ಪೋರ್ಟೆಬಲ್ ಮಾದರಿಯಲ್ಲಿದೆ. ಈ ಡಿವೈಸ್‌ ಹಗುರವಾದ ರಚನೆಯನ್ನು ಹೊಂದಿದ್ದು, ಇದರ ತೂಕವು ಕೇವಲ 101ಗ್ರಾಂ ಮಾತ್ರ ಆಗಿದೆ. ಈ ಸ್ಪೀಕರ್ IPX4 ಸಾಮರ್ಥ್ಯದ ವಾಟರ್ ರೆಸಿಸ್ಟೆನ್ಸ್‌ ಸೌಲಭ್ಯವನ್ನು ಪಡೆದಿದ್ದು, ಆಕರ್ಷಕ ಲುಕ್‌ನಲ್ಲಿದೆ. ಎರಡು ಸ್ಪೀಕರ್‌ಗಳನ್ನು ಜೋಡನೆ ಮಾಡುವ ಮೂಲಕ 360 ಡಿಗ್ರಿ ಸ್ಟಿರಿಯೊ ಸೌಂಡ್‌ ಔಟ್‌ಪುಟ್‌ ಪಡೆಯಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೆ ಸಂಸ್ಥೆಯ ಫ್ರೀಲೆಸ್‌ ನೆಕ್‌ಬ್ಯಾಂಡ್ ಮತ್ತು ಮಿನಿ ಸ್ಪೀಕರ್ ಡಿವೈಸ್‌ಗಳು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ ಇವೆ. ಫ್ರೀಲೆಸ್‌ ನೆಕ್‌ಬ್ಯಾಂಡ್ ಬೆಲೆಯು 4,999ರೂ.ಗಳಾಗಿದೆ. ಹಾಗೆಯೇ ಹುವಾವೆ ಮಿನಿ ಸ್ಪೀಕರ್ 1,999ರೂ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಶೇ.10% ಕ್ಯಾಶ್‌ಬ್ಯಾಕ್‌ ಕೊಡುಗೆಯು ಲಭ್ಯವಾಗಲಿದೆ. ಮಿನಿ ಸ್ಪೀಕರ್ ಗ್ರೀನ್‌ ಮತ್ತು ಬ್ಲ್ಯಾಕ್‌ ಬಣ್ಣಗಳಲ್ಲಿ ಸಿಗಲಿದೆ.

Best Mobiles in India

English summary
Huawei has launched two new audio devices in India. Huawei FreeLace and Mini Speaker on Flipkart. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+