Home
ಸುದ್ದಿಜಾಲ

ಶೀಘ್ರದಲ್ಲೇ Huawei Mate XT ಲಾಂಚ್..ಇದು ಅಂತಿಂಥಾ ಫೋನ್‌ ಅಲ್ಲ!

ಹುವಾವೇ (Huawei) ಸಂಸ್ಥೆಯ ಸ್ಮಾರ್ಟ್‌ಫೊನ್‌ಗಳು ಕೂಡಾ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿವೆ. ಭಿನ್ನ ಮಾದರಿಯಲ್ಲಿ ಫೋನ್‌ಗಳನ್ನು ಪರಿಚಯಿಸಿರುವ ಹುವಾವೇ ಸಂಸ್ಥೆಯು ಇದೀಗ ಹೊಸ ಅಚ್ಚರಿಯ ಮುನ್ನುಡಿ ಬರೆಯಲು ಸಜ್ಜಾಗಿದೆ. ಹೌದು, ಹುವಾವೇ ಕಂಪನಿಯು ಹುವಾವೇ ಮೇಟ್ XT (Huawei Mate XT) ಹೆಸರಿನ ಫೋನ್‌ ಅನ್ನು ಬಿಡುಗಡೆ ಮಾಡಲು ತಯಾರಾಗಿದ್ದು, ಇದು ಟ್ರೈ ಫೋಲ್ಡ್‌ (tri-fold phone) ಮಾದರಿಯ ಫೋನ್‌ ಆಗಿರುವುದು ಪ್ರಮುಖ ಹೈಲೈಟ್‌ ಅಂಶವಾಗಿದೆ.

ಹುವಾವೇ (Huawei) ಕಂಪನಿಯು ಹುವಾವೇ ಮೇಟ್ XT (Huawei Mate XT) ಫೋನ್‌ ಅನ್ನು ಇದೇ ಸೆಪ್ಟೆಂಬರ್ 10 ರಂದು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಜ್ಜಾಗಿದೆ. ಅಂದಹಾಗೆ ಈ ನೂತನ ಫೋನ್‌ ಟ್ರೈ-ಫೋಲ್ಡಿಂಗ್ ಮೊಬೈಲ್‌ ಆಗಿದ್ದು, 10 ಇಂಚಿನ ಸ್ಕ್ರೀನ್‌ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಶೀಘ್ರದಲ್ಲೇ Huawei Mate XT ಲಾಂಚ್..ಇದು ಅಂತಿಂಥಾ ಫೋನ್‌ ಅಲ್ಲ!

ಇನ್ನು ಹುವಾವೇ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಫೋನ್‌ ಉತ್ತಮ ಕ್ಯಾಮೆರಾಗಳು, ವೇಗದ ಚಿಪ್‌ಸೆಟ್ ಪ್ರೊಸೆಸರ್‌ ಸೇರಿದಂತೆ ಉನ್ನತ-ಮಟ್ಟದ ಹಾರ್ಡ್‌ವೇರ್‌ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಹುವಾವೇ ಸಂಸ್ಥೆಯ ಸ್ವಾಮ್ಯದ HarmonyOS ಸಪೋರ್ಟ್‌ ನೊಂದಿಗೆ ಕಾರ್ಯ ನಿರ್ವಹಿಸುವ ಈ ಫೋನ್‌ ಮಲ್ಟಿ ಟಾಸ್ಕ್‌ ಕೆಲಸಗಳಿಗೆ ಸಪೋರ್ಟ್‌ ಮಾಡುತ್ತದೆ.

ಹಾಗೆಯೇ ಲೀಕ್ ವರದಿಗಳ ಪ್ರಕಾರ, ಹುವಾವೇ ಮೇಟ್ XT (Huawei Mate XT) ಫೋನ್‌ ಸ್ಕ್ರೀನ್‌ ಗಾತ್ರವು ಸಂಪೂರ್ಣವಾಗಿ ತೆರೆದಾಗ ಸುಮಾರು 10 ಇಂಚುಗಳ ಗಾತ್ರದಲ್ಲಿ ಕಾಣಿಸಲಿದೆ. ಈ ಫೋನ್‌ ತೆರೆದಾಗ ಇದನ್ನು ಟ್ಯಾಬ್ಲೆಟ್‌ಗೆ ಹೋಲಿಸಬಹುದು. ಹುವಾವೇ ಸಂಸ್ಥೆಯ ಈ ಫೋನ್‌ ಮೂರು-ಸ್ಕ್ರೀನ್‌ ವಿಭಜನೆಯಂತಹ ಸುಧಾರಿತ ಬಹುಕಾರ್ಯಕ ಫೀಚರ್ಸ್‌ಗಳನ್ನು ಇದು ಸಪೋರ್ಟ್‌ ಮಾಡುತ್ತದೆ. ಇದು ಸ್ಟೈಲಸ್‌ನೊಂದಿಗೆ ಜೋಡಿಸಿದಾಗ ಟ್ಯಾಬ್ಲೆಟ್ ತರಹದ ಬರವಣಿಗೆಯ ಅನುಭವವನ್ನು ನೀಡುತ್ತದೆ.

ಹಾಗೆಯೇ ಹುವಾವೇ ಸಂಸ್ಥೆಯು ಇತ್ತೀಚಿಗೆ ಹುವಾವೇ ನೋವಾ ಫ್ಲಿಪ್ ಫೋನ್‌ ಪರಿಚಯಿಸಿದ್ದು, ಇದು ಎರಡು ಸ್ಕ್ರೀನ್‌ಗಳ ರಚನೆ ಪಡೆದಿದೆ. ಮೊದಲಯ ಮೇನ್‌ ಸ್ಕ್ರೀನ್‌ 6.94 ಇಂಚಿನಲ್ಲಿ ಇದೆ. ಇದು 1136 x 2690 ಪಿಕ್ಸೆಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಇದು 421PPI, LTPO OLED ಪಡೆದಿದ್ದು, 120Hz ರಿಫ್ರೆಶ್ ರೇಟ್‌ ಸಹ ಪಡೆದಿದೆ. ಇದರೊಂದಿಗೆ ಇದರ ಕವರ್‌ ಡಿಸ್‌ಪ್ಲೇಯು 2.14 ಇಂಚಿನ ರಚನೆ ಪಡೆದಿದ್ದು, ಇದು 480 x 480 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.

ಅಲ್ಲದೇ ಈ ಫೋನ್‌ ಕಿರಿನ್ 8000 SoC ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, HarmonyOS 4.2 ಓಎಸ್‌ ಸಪೋರ್ಟ್‌ ಪಡೆದಿದೆ. ಇದರೊಂದಿಗೆ ಈ ಫೋನ್‌ 256GB, 512GB ಹಾಗೂ 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ.

ಅದೇ ರೀತಿ ಹುವಾವೇ ಮೊಬೈಲ್‌ 4400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 66W ವೈಯರ್ಡ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದು ವೈ-ಫೈ, ಬ್ಲೂಟೂತ್, ಆಯ್ಕೆಗಳು ಇವೆ. ಹಾಗೆಯೇ ಇದು ಫೋನ್ ಕೇವಲ 195 ಗ್ರಾಂ ಅಲ್ಲದೇ ಈ ಫೋನ್‌ ನ್ಯೂ ಗ್ರೀನ್‌, ಸಕುರಾ ಪಿಂಕ್, ಝೀರೋ ವೈಟ್, ಸ್ಟಾರ್ರಿ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯ ಇದೆ.

Best Mobiles in India

English summary
Huawei launch its first tri-fold phone Mate XT on September 10. Expected Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+