Just In
- 3 hrs ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 4 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 5 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 5 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Sports
Ranji Trophy 2023: ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಕರ್ನಾಟಕ
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಹುನಿರೀಕ್ಷಿತ 'ಹುವಾವೆ ಮೇಟ್ 30' ಸರಣಿ ಬಿಡುಗಡೆ!..ಪವರ್‌ಫುಲ್ ಫೀಚರ್ಸ್!
ವಿಶ್ವ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ 'ಹುವಾವೆ' ಕಂಪನಿಯು ಹಲವು ಶ್ರೇಣಿಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಕಂಪನಿ ತನ್ನ ಬಹುನಿರೀಕ್ಷಿತ 'ಹುವಾವೆ ಮೇಟ್ 30 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದ್ದು, ಅದರಲ್ಲಿ 'ಹುವಾವೆ ಮೇಟ್ 30 ಪ್ರೊ 5G' ವೇರಿಯಂಟ್ ಹೆಚ್ಚು ಗಮನಸೆಳೆದಿದೆ.

ಹೌದು, ಹುವಾವೆ ಸಂಸ್ಥೆಯು ನೆನ್ನೆ(ಸೆ.19) ಜರ್ಮನಿಯಲ್ಲಿ ನಡೆದ ಕಾರ್ಯಕ್ರಮಾದಲ್ಲಿ 'ಹುವಾವೆ ಮೇಟ್ 30' ಮತ್ತು 'ಹುವಾವೆ ಮೇಟ್ 30 ಪ್ರೊ' ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಹಾಗೆಯೇ 'ಹುವಾವೆ ಮೇಟ್ 30 ಪ್ರೊ 5G' ವೇರಿಯಂಟ್ ಆಯ್ಕೆಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಹಿಲಿಯೊ ಸಿಲಿಕಾನ್ ಕಿರನ್ 990 5G SoC ಪ್ರೊಸೆಸರ್ ಶಕ್ತಿಯನ್ನು ಪಡೆದಿದ್ದು, OLED Horizon ಡಿಸ್‌ಪ್ಲೇ ಹೊಂದಿದೆ.

'ಹುವಾವೆ ಮೇಟ್ 30' ಬೆಲೆಯು EUR 799 (63,000ರೂ) ಆಗಿದೆ ಮತ್ತು 'ಹುವಾವೆ ಮೇಟ್ 30 ಪ್ರೊ' ಬೆಲೆಯು EUR 1,099 (86,700ರೂ) ಆಗಿದೆ. ಇನ್ನು 'ಹುವಾವೆ ಮೇಟ್ 30 ಪ್ರೊ 5G' ವೇರಿಯಂಟ್ ಬೆಲೆಯು EUR 1,199 (94,600ರೂ) ಬೆಲೆಯನ್ನು ಹೊಂದಿವೆ. ಹಾಗಾದರೇ 'ಹುವಾವೆ ಮೇಟ್ 30' ಮತ್ತು 'ಹುವಾವೆ ಮೇಟ್ 30 ಪ್ರೊ' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹುವಾವೆ ಮೇಟ್ 30 ಡಿಸ್‌ಪ್ಲೇ
ಹುವಾವೆ ಮೇಟ್ 30 ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.62 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದ್ದು, ಫುಲ್‌ವ್ಯೂವ್ ಡಿಸ್‌ಪ್ಲೇಯ ರಚನೆ ಪಡೆದಿದೆ. ಡಿಸ್‌ಪ್ಲೇಯು 19.5:9 ಅನುಪಾತದಲ್ಲಿದ್ದು, DCI-P3 HDR ಕಲರ್ ಮಿಶ್ರಣವನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರವು ಶೇ.65%ರಷ್ಟಿದ್ದು, ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ.

ಹುವಾವೆ ಮೇಟ್ 30 ಪ್ರೊಸೆಸರ್
ಹುವಾವೆ ಮೇಟ್ 30 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಹಿಲಿಯೊ ಸಿಲಿಕಾನ್ ಕಿರನ್ 990 5G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಇತ್ತೀಚಿನ ಹೊಸ 'ಆಂಡ್ರಾಯ್ಡ್ 10' ಆಪರೇಟಿಂಗ್ ಸಿಸ್ಟಮ್ ಬೆಂಬಲ ಹೊಂದಿದೆ. ಇದರೊಂದಿಗೆ 8GB GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದೆ.

ಹುವಾವೆ ಮೇಟ್ 30 ಕ್ಯಾಮೆರಾ
ಹುವಾವೆ ಮೇಟ್ 30 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 40ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ವೈಲ್ಡ್ ಆಂಗಲ್ ಲೆನ್ಸ್ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 8ಎಂಪಿಯ ಟೆಲಿಫೋಟೊ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮತ್ತು ಸೆಲ್ಫಿಗಾಗಿ 24ಎಂಪಿ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.

ಹುವಾವೆ ಮೇಟ್ 30 ಬ್ಯಾಟರಿ
ಹುವಾವೆ ಮೇಟ್ 30 ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಹುವಾವೆ ಕಂಪನಿಯ ಸೂಪರ್‌ಚಾರ್ಜ್ 40w ಮತ್ತು ಸೂಪರ್ ಚಾರ್ಜ್ 27w ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯದ ಬೆಂಬಲ ಪಡೆದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್, ಜಿಪಿಎಸ್, ಸೇರಿದಂತೆ ಇತ್ತೀಚಿನ ಅಗತ್ಯ ಆಯ್ಕೆಗಳನ್ನು ಮತ್ತು ಸೌಲಬ್ಯಗಳನ್ನು ಒಳಗೊಂಡಿದೆ.

ಹುವಾವೆ ಮೇಟ್ 30 ಪ್ರೊ ಡಿಸ್‌ಪ್ಲೇ
ಹುವಾವೆ ಮೇಟ್ 30 ಪ್ರೊ ಸ್ಮಾರ್ಟ್‌ಫೋನ್ 1176x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದ್ದು, OLED Horizon ಡಿಸ್‌ಪ್ಲೇಯ ರಚನೆ ಪಡೆದಿದೆ. ಡಿಸ್‌ಪ್ಲೇಯು 18.4:9 ಅನುಪಾತದಲ್ಲಿದ್ದು, DCI-P3 HDR ಕಲರ್ ಮಿಶ್ರಣವನ್ನು ಹೊಂದಿದೆ. ಡಿಸ್‌ಪ್ಲೇ ಡಿಸೈವ್ ಹೆಚ್ಚು ಆಕರ್ಷಕವಾಗಿ ಇದ್ದು, ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ.

ಹುವಾವೆ ಮೇಟ್ 30 ಪ್ರೊ' ಪ್ರೊಸೆಸರ್
ಹುವಾವೆ ಮೇಟ್ 30 ಪ್ರೊ' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಹಿಲಿಯೊ ಸಿಲಿಕಾನ್ ಕಿರನ್ 990 5G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಈ ಫೋನ್ ಸಹ ಇತ್ತೀಚಿನ ಹೊಸ 'ಆಂಡ್ರಾಯ್ಡ್ 10' ಆಪರೇಟಿಂಗ್ ಸಿಸ್ಟಮ್ ಬೆಂಬಲ ಹೊಂದಿದೆ. ಇದರೊಂದಿಗೆ 8GB GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದೆ.

ಹುವಾವೆ ಮೇಟ್ 30 ಪ್ರೊ' ಕ್ಯಾಮೆರಾ
ಹುವಾವೆ ಮೇಟ್ 30 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 40ಎಂಪಿ ಸಿನಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು ಸಹ 40ಎಂಪಿ ಸೂಪರ್ ವೈಲ್ಡ್ ಆಂಗಲ್ ಲೆನ್ಸ್ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಕ್ಯಾಮೆರಾ 8ಎಂಪಿಯ ಟೆಲಿಫೋಟೊ ಸೆನ್ಸಾರ್ ಸಾಮರ್ಥ್ಯದಲ್ಲಿದೆ ಹಾಗೂ ನಾಲ್ಕನೆಯದ್ದು 3D ಡೆಪ್ತ್ ಸೆನ್ಸಾರ್‌ನಲ್ಲಿದೆ. ಮತ್ತು ಸೆಲ್ಫಿಗಾಗಿ 32 ಎಂಪಿ ಸೆನ್ಸಾರ್ ಪಡೆದಿದೆ.

ಹುವಾವೆ ಮೇಟ್ 30 ಪ್ರೊ' ಬ್ಯಾಟರಿ
ಹುವಾವೆ ಮೇಟ್ 30 ಪ್ರೊ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಈ ಫೋನ್ ಸಹ ಹುವಾವೆ ಕಂಪನಿಯ ಸೂಪರ್‌ಚಾರ್ಜ್ 40w ಮತ್ತು ಸೂಪರ್ ಚಾರ್ಜ್ 27w ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯದ ಬೆಂಬಲ ಪಡೆದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್, ಜಿಪಿಎಸ್, ಸೇರಿದಂತೆ ಇತ್ತೀಚಿನ ಅಗತ್ಯ ಆಯ್ಕೆಗಳನ್ನು ಮತ್ತು ಸೌಲಬ್ಯಗಳನ್ನು ಒಳಗೊಂಡಿದೆ.

ಬೆಲೆ ಎಷ್ಟಿದೆ
'ಹುವಾವೆ ಮೇಟ್ 30' ಬೆಲೆಯು EUR 799 (63,000ರೂ) ಆಗಿದ್ದು, ಸಿಲ್ವರ್, ಬ್ಲೂ, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಮತ್ತು 'ಹುವಾವೆ ಮೇಟ್ 30 ಪ್ರೊ' ಬೆಲೆಯು EUR 1,099 (86,700ರೂ) ಆಗಿದ್ದು, ಲೆದರ್ ಫಾರೆಸ್ಟ್ ಗ್ರೀನ್, ಲೆದರ್ ಆರೆಂಜ್ ಫಿನಿಶ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಇನ್ನು 'ಹುವಾವೆ ಮೇಟ್ 30 ಪ್ರೊ 5G' ವೇರಿಯಂಟ್ ಬೆಲೆಯು EUR 1,199 (94,600ರೂ) ಬೆಲೆಯನ್ನು ಹೊಂದಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470