64ಎಂಪಿ ಕ್ಯಾಮೆರಾದ ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ ಬಿಡುಗಡೆ!

|

ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹುವಾವೇ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಸಿದೆ. ಇದೀಗ ಕಂಪನಿಯು ತನ್ನ ಬಹುನಿರೀಕ್ಷಿತ ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಹುವಾವೇ ಮೇಟ್ X ಸರಣಿಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ.

ಹುವಾವೇ

ಹೌದು, ಹುವಾವೇ ಸಂಸ್ಥೆಯು ನೂತನವಾಗಿ ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ಹೈ ಎಂಡ್‌ ಫೀಚರ್ಸ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆಕ್ಟಾ ಕೋರ್ ಕಿರನ್ 990E SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಫೋನ್ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಪಡೆದಿದೆ. ಇದರೊಂದಿಗೆ 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನುಳಿದಂತೆ ಹುವಾವೇ ಮೇಟ್ 40E ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್ ಹೇಗಿದೆ

ಡಿಸ್‌ಪ್ಲೇ ಡಿಸೈನ್ ಹೇಗಿದೆ

ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ 1,080x2,376 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ರೀಫ್ರೇಶ್‌ ರೇಟ್ 90Hz ಆಗಿದ್ದು, 240Hz ಸ್ಯಾಂಪ್ಲಿಂಗ್ ಟಚ್ ರೇಟ್ ಆಗಿದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯ 19.8:9 ಅನುಪಾತದ ರಚನೆಯನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕಿರನ್ 990E SoC ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಬೆಂಬಲವನ್ನು ಪಡೆದಿದೆ. ಇದರೊಂದಿಗೆ ಈ 8GB + 128GB ಮತ್ತು 8GB + 256GB ಆಂತರೀಕ ಸ್ಟೋರೇಜ್‌ನ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ತ್ರಿವಳಿ ಕ್ಯಾಮೆರಾ ಸೆನ್ಸಾರ್‌

ತ್ರಿವಳಿ ಕ್ಯಾಮೆರಾ ಸೆನ್ಸಾರ್‌

ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ f/1.9 ಲೆನ್ಸ್‌ನೊಂದಿಗೆ 64 ಮೆಗಾ ಪಿಕ್ಸೆಲ್‌ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ ಎಫ್/2.2 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಬೆಂಬಲದೊಂದಿಗೆ 16ಎಂಪಿಯ ಸೆನ್ಸಾರ್‌ನಲ್ಲಿದೆ. ಇನ್ನು ಮೂರನೇ ಕ್ಯಾಮೆರಾವು ಟೆಲಿಸ್ಕೋಪ್‌ ಲೆನ್ಸ್‌ ಹೊಂದಿದ್ದು, 8ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ 4,200mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್ ಅನ್ನು ಹೊಂದಿದ್ದು, 40W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಈ ಫೋನ್ 188ಗ್ರಾಂ ತೂಕವನ್ನು ಪಡೆದಿರುವುದರೊಂದಿಗೆ ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.2, GPS / A-GPS, NFC, ಇನ್ಫ್ರಾರೆಡ್ (ಐಆರ್), ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ಫೋನಿನ ಬೆಲೆ ಎಷ್ಟು?

ಫೋನಿನ ಬೆಲೆ ಎಷ್ಟು?

ಹುವಾವೇ ಮೇಟ್ 40E ಸ್ಮಾರ್ಟ್‌ಫೋನ್ 8GB + 128GB ವೇರಿಯಂಟ್ ಬೆಲೆ ಚೀನಾದಲ್ಲಿ CNY 4,599 (ಭಾರತದಲ್ಲಿ ಅಂದಾಜು 51,500ರೂ. ಆಗಿದೆ). ಅದೇ ರೀತಿ 8GB + 256GB ವೇರಿಯಂಟ್‌ ಬೆಲೆಯು CNY 5,099 (ಭಾರತದಲ್ಲಿ ಅಂದಾಜು 57,100ರೂ.ಗಳು ಆಗಿದೆ). ಇನ್ನು ಈ ಫೋನ್ ಬ್ರೈಟ್‌ ಬ್ಲ್ಯಾಕ್, ಗ್ಲಾಜ್‌ ವೈಟ್‌ ಮತ್ತು ಸೆಕ್ರೆಟ್ ಸಿಲ್ವರ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಭಾರತದಲ್ಲಿ ಯಾವಾಗ ಲಾಂಚ್ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
The phone also comes with a triple rear camera setup that houses a 64-megapixel primary sensor with an f/1.9 lens, 16-megapixel secondary sensor and an 8-megapixel tertiary sensor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X