Home
ಸುದ್ದಿಜಾಲ

ಹುವಾವೇ ನೋವಾ 11 SE ಲಾಂಚ್‌ ಡೇಟ್‌ ಪ್ರಕಟ! ಟೆಕ್‌ ವಲಯದಲ್ಲಿ ಶುರುವಾಯ್ತು ಕಂಪನ!

ಹುವಾವೇ ಕಂಪೆನಿ ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ಸ್ಟೈಲಿಶ್‌ ಫೋನ್‌ಗಳಿಂದ ಗಮನಸೆಳೆದಿರುವ ಹುವಾವೇ ಇದೀಗ ಮತ್ತೊಂದು ಹೊಸ ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಇದನ್ನು ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಎಂದು ಗುರುತಿಸಲಾಗಿದ್ದು, ಇದರ ಬಿಡುಗಡೆ ದಿನಾಂಕವನ್ನು ಅಧಿಕೃತಗೊಳಿಸಿದೆ.

ಹೌದು, ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಅಕ್ಟೋಬರ್ 3 ರಂದು ಲಾಂಚ್‌ ಆಗಲಿದೆ. ಇದು ಟೆಕ್‌ ವಲಯದಲ್ಲಿ ತನ್ನ ಸ್ಟೈಲಿಶ್‌ ಡಿಸೈನ್‌ನಿಂದ ಮಾತ್ರವಲ್ಲದೆ ವಿಭಿನ್ನ ಫೀಚರ್ಸ್‌ಗಳಿಂದಲೂ ಧೂಳೆಬ್ಬಿಸುವ ಸೂಚನೆ ನೀಡಿದೆ. ಹಾಗಾದ್ರೆ ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ನೋವಾ 11 SE ಲಾಂಚ್‌ ಡೇಟ್‌ ಪ್ರಕಟ! ಟೆಕ್‌ ವಲಯದಲ್ಲಿ ಶುರುವಾಯ್ತು ಕಂಪನ!

ಹುವಾವೇ ನೋವಾ 11 SE ಡಿಸ್‌ಪ್ಲೇ ರಚನೆ ನಿರೀಕ್ಷೆ?
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರುವ ನಿರೀಕ್ಷೆಯಿದೆ. ಇನ್ನು ಡಿಸ್‌ಪ್ಲೇ 100% P3 ವೈಡ್ ಕಲರ್ ಗ್ಯಾಮಟ್ ಮತ್ತು 91.85% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರಲಿದೆ. ಇದಲ್ಲದೆ ಡಿಸ್‌ಪ್ಲೇ 1.07 ಬಿಲಿಯನ್ ಕಲರ್‌ಗಳನ್ನು ನೀಡಲಿದ್ದು, ಹೆಚ್ಚಿನ ಬ್ರೈಟ್‌ನೆಸ್‌ ಉತ್ತಮವಾಗಿರುತ್ತದೆ ಮತ್ತು ಮಂದ ಬೆಳಕಿನಲ್ಲಿ ಬಳಸಿದಾಗ ಅದು 18 ನಿಟ್‌ಗಳಷ್ಟು ಕಡಿಮೆಯಾಗುತ್ತದೆ.

ಹುವಾವೆ ನೋವಾ 11 SE ಪ್ರೊಸೆಸರ್‌ ಯಾವುದು?
ಹುವಾವೆ ನೋವಾ 11 SE ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಬರುವ ನಿರೀಕ್ಷೆಯಿದೆ. ಇದು 2.2GHz ನಲ್ಲಿ ನಾಲ್ಕು CPU ಕೋರ್‌ಗಳು ಮತ್ತು 1.9GHz ನಲ್ಲಿ ನಾಲ್ಕು CPU ಕೋರ್‌ಗಳೊಂದಿಗೆ ಸಜ್ಜುಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹುವಾವೇ ನೋವಾ 11 SE ಲಾಂಚ್‌ ಡೇಟ್‌ ಪ್ರಕಟ! ಟೆಕ್‌ ವಲಯದಲ್ಲಿ ಶುರುವಾಯ್ತು ಕಂಪನ!

ಹುವಾವೇ ನೋವ 11 SE ಕ್ಯಾಮೆರಾ ಸೆಟ್‌ಅಪ್‌ ಏನಿರಬಹುದು?
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರಲಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ನೀಡಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು ಎಂದು ವರದಿಯಾಗಿದೆ.

ಹುವಾವೇ ನೋವಾ 11 SE ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಇದು 66W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌,ಬ್ಲೂಟೂತ್‌, ವೈಫೈ, ಹೆಡ್‌ಫೋನ್‌ ಜ್ಯಾಕ್‌, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಹುವಾವೇ ನೋವಾ 11 SE ಲಾಂಚ್‌ ಡೇಟ್‌ ಪ್ರಕಟ! ಟೆಕ್‌ ವಲಯದಲ್ಲಿ ಶುರುವಾಯ್ತು ಕಂಪನ!

ಹುವಾವೇ ನೋವ 11 SE ಬೆಲೆ ಮತ್ತು ಲಭ್ಯತೆ
ಹುವಾವೇ ನೋವ 11 SE ಸ್ಮಾರ್ಟ್‌ಫೋನ್‌ನ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಇದು ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕಪ್ಪು, ಬಿಳಿ ಮತ್ತು ಹಸಿರು ಮುಂತಾದ ಕಲರ್‌ ಆಯ್ಕೆಗಳಲ್ಲಿ ಬರುವ ನಿರೀಕ್ಷೆಯಿದೆ.

ಇನ್ನು ಹುವಾವೇ ಕಂಪೆನಿ ಇತ್ತೀಚಿಗೆ ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ ಕಿರಿನ್ 9000s SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 88W ಫಾಸ್ಟ್ ಚಾರ್ಜಿಂಗ್ ನೊಂದಿಗೆ ಬರಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Huawei Nova 11 SE Smartphone launch date announced: expected specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+