'ಐಫೋನ್ 11 ಪ್ರೊ' ಲುಕ್‌ನಲ್ಲಿ ಬರಲಿದೆ 'ಹುವಾವೆ ನೋವಾ 6 SE' ಸ್ಮಾರ್ಟ್‌ಫೋನ್!
ಆಪಲ್ ಐಫೋನ್‌ಗಳು ಅಂದರೇನೇ ಹಾಗೇ, ಅವುಗಳ ಡಿಸೈನ್ ಬಹುಬೇಗನ ನೋಡುಗರ ಗಮನಸೆಳೆಯುತ್ತವೆ. ಅದರಲ್ಲಿಯೂ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ನೂತನ 'ಐಫೋನ್ 11' ಸರಣಿಯ ಡಿಸೈನ್ ಅಂತೂ ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಿದೆ. ಬಹುತೇಕ 'ಐಫೋನ್ 11' ಅನ್ನೇ ಹೋಲುವ ಡಿಸೈನಿನ ಸ್ಮಾರ್ಟ್‌ಫೋನ್‌ವೊಂದು ಮಾರುಕಟ್ಟೆಗೆ ಬರಲಿದ್ದು, ಜನಪ್ರಿಯ ಹುವಾವೆ ಸಂಸ್ಥೆಯು ಲಾಂಚ್ ಮಾಡಲಿದೆ.

ಹೌದು, ಹುವಾವೆ ಸಂಸ್ಥೆಯ ಹೊಸ 'ಹುವಾವೆ ನೋವಾ 6 SE' ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಆದ್ರೆ, ಇದೀಗ ಲೀಕ್ ಆಗಿರುವ 'ನೋವಾ 6 SE' ಇಮೇಜ್‌ಗಳು ಈ ಸ್ಮಾರ್ಟ್‌ಫೋನ್ ನೋಡಲು ಐಫೋನ್ 11 ಲುಕ್ ಪಡೆದಿರುವ ಸೂಚನೆ ನೀಡಿವೆ. ಹುವಾವೆ ನೋವಾ 6 SE ಸ್ಮಾರ್ಟ್‌ಫೋನ್ ಕ್ಯಾಮೆರಾ ಡಿಸೈನ್ ನೋಡಲು ಐಫೋನ್ 11 ಪ್ರೊ ಕ್ಯಾಮೆರಾದಂತೆ ಕಾಣಿಸುತ್ತದೆ ಎನ್ನಲಾಗಿದೆ.

ಐಫೋನ್ 11 ಪ್ರೊ ಫೋನ್ ಹಿಂಬದಿಯಲ್ಲಿ ಮೂರು ರಂಧ್ರಗಳಂತೆ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಇದೇ ರೀತಿಯ ಡಿಸೈನ್‌ನಲ್ಲಿ ಹುವಾವೆಯು ನಾಲ್ಕು ಕ್ಯಾಮೆರಾ ಸೆಟ್‌ಅಪ್ ನೀಡಲಿದೆ ಎನ್ನುವ ಸುಳಿವನ್ನು ಲೀಕ್ ಚಿತ್ರಗಳು ತಿಳಿಸಿವೆ. ಹಾಗೆಯೇ ಕ್ಯಾಮೆರಾ ಜೊತೆಗೆ LED ಫ್ಲ್ಯಾಶ್ ಲೈಟ್ ಸಹ ನೀಡಲಿದ್ದು, ಡಿಸ್‌ಪ್ಲೇ ಸುತ್ತಲೂ ಬ್ಲ್ಯಾಕ್ ಬಾರ್ಡರ್ ಇರಲಿದ್ದು, ಹಿಂಬದಿ ಗ್ರೇಡಿಯಂಟ್ ಪಿಂಕ್ ಫಿನಿಶ್ ಹಾಗೂ ಗೋಲ್ಡ್ ಫ್ರೇಮ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಇನ್ನು ಹುವಾವೆ ನೋವಾ 6SE ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಬಹುಶಃ LCD ಪ್ಯಾನಲ್ ಹೊಂದಿರಲಿದ್ದು, ಡಿಸ್‌ಪ್ಲೇ ಮೇಲ್ಬಾಗದ ಎಡಭಾಗದ ಮೂಲೆಯಲ್ಲಿ ಪಂಚ್‌ಹೋಲ್ ರಚನೆ ಇರಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಕಿರನ್ 810 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಜೊತೆಗೆ 40W ಸೂಪರ್‌ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಹೊಂದಿರಲಿದೆ.

ಈ ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಹೊಂದಿರಲಿದ್ದು, ಸೇಡ್‌ನಲ್ಲಿಯೇ ವ್ಯಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ಸಹ ಇರಲಿವೆ. 5G ವೇರಿಯಂಟ್ ಮಾದರಿಯಲ್ಲಿಯೂ ಬಿಡುಗಡೆ ಆಗುವ ಸಾಧ್ಯತೆಗಳಿದ್ದು, ಭಾರತದಲ್ಲಿ ಯಾವಗ ಲಭ್ಯ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಟ್ಟಾರೇ ಲೀಕ್ ಇಮೇಜ್‌ಗಳಿಂದ ಭಾರಿ ಕುತೂಹಲ ಮೂಡಿಸಿರುವ 'ಹುವಾವೆ ನೋವಾ 6SE' ಸ್ಮಾರ್ಟ್‌ಫೋನ್ ಮೀಡ್ ರೇಂಜ್ ಪ್ರೈಸ್‌ಟ್ಯಾಗ್ ಹೊಂದಿರಲಿದೆ ಎಂದು ನಿರೀಕ್ಷಿಸಲಾಗುತ್ತದೆ.


Click it and Unblock the Notifications