Home
ಸುದ್ದಿಜಾಲ

ಹುವಾವೇ ನೋವಾ 8 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ!..ಹೈ ಎಂಡ್‌ ಕ್ಯಾಮೆರಾ ಫೀಚರ್ಸ್‌!

ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹುವಾವೇ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಸಿದೆ. ಇದೀಗ ಕಂಪನಿಯು ನೂತನವಾಗಿ ನೋವಾ 8 ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯು ಹುವಾವೆ ನೋವಾ 8 ಪ್ರೊ ಹಾಗೂ ಹುವಾವೆ ನೋವಾ 8 5G ಮಾಡೆಲ್‌ಗಳನ್ನು ಒಳಗೊಂಡಿದೆ.

ಹುವಾವೇ

ಹೌದು, ಹುವಾವೇ ಸಂಸ್ಥೆಯು ನೂತನವಾಗಿ ನೋವಾ 8 ಸ್ಮಾರ್ಟ್‌ಫೋನ್ ಸರಣಿಯನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸರಣಿಯಲ್ಲಿ ಹುವಾವೆ ನೋವಾ 8 ಪ್ರೊ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಫೋನ್ ಕಿರನ್ 985 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದರೊಂದಿಗೆ 4,000mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 66W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ಹುವಾವೆ ನೋವಾ 8 ಪ್ರೊ ಸ್ಮಾರ್ಟ್‌ಫೋನ್ 1,236x2,676 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ 120Hz ರೀಫ್ರೇಶ್ ರೇಟ್‌ ಅನ್ನು ಪಡೆದಿದೆ.

ಯಾವ ಪ್ರೊಸೆಸರ್‌

ಯಾವ ಪ್ರೊಸೆಸರ್‌

ಹುವಾವೆ ನೋವಾ 8 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕಿರನ್ 985 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲವನ್ನು ಪಡೆದಿದೆ. ಇದರೊಂದಿಗೆ ಈ ಫೋನ್ದ 8GB RAM ಮತ್ತು 128GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಹುವಾವೆ ನೋವಾ 8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ಸೆನ್ಸಾರ್ ಅನ್ನು ಹೊಂದಿದ್ದು, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿವೆ. ಹಾಗೆಯೇ ಸೆಲ್ಫಿಗಾಗಿ ಡ್ಯುಯಲ್‌ ಕ್ಯಾಮೆರಾ ಇದ್ದು, ಒಂದು 32-ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ ಇನ್ನೊಂದು 16ಎಂಪಿ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹುವಾವೆ ನೋವಾ 8 ಪ್ರೊ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್ ಅನ್ನು ಹೊಂದಿದ್ದು, 66W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ ಡ್ಯುಯಲ್-ಬ್ಯಾಂಡ್, ಬ್ಲೂಟೂತ್ 5.0, ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್, 3.5mm ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್‌ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಹುವಾವೆ ನೋವಾ 8 ಪ್ರೊ ಸ್ಮಾರ್ಟ್‌ಫೋನ್ 8GB RAM + 128GB ವೇರಿಯಂಟ್ ಬೆಲೆ ಚೀನಾದಲ್ಲಿ CNY 3,999 (ಭಾರತದಲ್ಲಿ ಅಂದಾಜು 45,100ರೂ. ಎನ್ನಲಾಗಿದೆ) ಹಾಗೆಯೇ 8GB RAM + 256GB ವೇರಿಯಂಟ್ ದರವು CNY 4,399 (ಭಾರತದಲ್ಲಿ 49,600ರೂ. ಎಂದು ಅಂದಾಜಿಸಲಾಗಿದೆ).

Best Mobiles in India

English summary
Huawei Nova 8 Pro houses a 4,000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+