ಬಿರುಗಾಳಿಯಂತೆ ಎಂಟ್ರಿ ಕೊಟ್ಟ Huawei Nova Flip ಫೋನ್!..ಇದು ಸಖತ್ ಸ್ಟೈಲಿಶ್!
ಹುವಾವೇ ಮೊಬೈಲ್ ಸಂಸ್ಥೆಯು ಈಗಾಗಲೇ ನೋವಾ ಸರಣಿಯಲ್ಲಿ ಕೆಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಈಗ ಹುವಾವೇ ನೋವಾ ಫ್ಲಿಪ್ (Huawei Nova Flip) ಲಾಂಚ್ ಮಾಡಿದೆ. ಅಂದಹಾಗೆ ಇದು ಸಂಸ್ಥೆಯ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದ್ದು, ಬಲು ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಿದೆ. ಇನ್ನು ಇದು ಇತ್ತೀಚಿನ ಕಿರಿನ್ 8000 SoC ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದುಕೊಂಡಿದೆ.
ಹೌದು, ಹುವಾವೇ ಮೊಬೈಲ್ ಕಂಪನಿಯು ಹೊಸದಾಗಿ ಹುವಾವೇ ನೋವಾ ಫ್ಲಿಪ್ (Huawei Nova Flip) ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ತೆಳ್ಳನೇ ರಚನೆಯನ್ನು ಪಡೆದಿದ್ದು, ಹಾಗೆಯೇ ಇದು 256 GB, 512 GB ಹಾಗೂ 1TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇಲ್ಲದೇ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ.

ಇನ್ನು ಈ ಫೋನ್ 4400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 66W ವೈಯರ್ಡ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇದು ನ್ಯೂ ಗ್ರೀನ್, ಸಕುರಾ ಪಿಂಕ್, ಝೀರೋ ವೈಟ್, ಸ್ಟಾರ್ರಿ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಆಗಲಿದೆ. ಹಾಗಾದರೇ ಹುವಾವೇ ನೋವಾ ಫ್ಲಿಪ್ (Huawei Nova Flip) ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹುವಾವೇ ನೋವಾ ಫ್ಲಿಪ್ - ಫೀಚರ್ಸ್
ಹುವಾವೇ ನೋವಾ ಫ್ಲಿಪ್ ಫೋನ್ ಎರಡು ಸ್ಕ್ರೀನ್‌ಗಳ ರಚನೆ ಪಡೆದಿದ್ದು, ಮೊದಲಯ ಮೇನ್ ಸ್ಕ್ರೀನ್ 6.94 ಇಂಚಿನಲ್ಲಿ ಇದೆ. ಇದು 1136 x 2690 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಇದು 421PPI, LTPO OLED ಪಡೆದಿದ್ದು, 120Hz ರಿಫ್ರೆಶ್ ರೇಟ್ ಸಹ ಪಡೆದಿದೆ. ಇದರೊಂದಿಗೆ ಇದರ ಕವರ್ ಡಿಸ್‌ಪ್ಲೇಯು 2.14 ಇಂಚಿನ ರಚನೆ ಪಡೆದಿದ್ದು, ಇದು 480 x 480 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಅಲ್ಲದೇ ಇದು LTPO OLED ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿದೆ.
ಹುವಾವೇ ನೋವಾ ಫ್ಲಿಪ್ ಫೋನ್ ಕಿರಿನ್ 8000 SoC ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, HarmonyOS 4.2 ಓಎಸ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಈ ಫೋನ್ 256GB, 512GB ಹಾಗೂ 1TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ.
ಹುವಾವೇ ನೋವಾ ಫ್ಲಿಪ್ ಫೋನ್ 4400 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, 66W ವೈಯರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ತೂಕವನ್ನು ಪಡೆದಿದ್ದು, ವೈ-ಫೈ, ಬ್ಲೂಟೂತ್, ಆಯ್ಕೆಗಳು ಇವೆ. ಹಾಗೆಯೇ ಇದು ಫೋನ್ ಕೇವಲ 195 ಗ್ರಾಂಅಲ್ಲದೇ ಈ ಫೋನ್ ನ್ಯೂ ಗ್ರೀನ್, ಸಕುರಾ ಪಿಂಕ್, ಝೀರೋ ವೈಟ್, ಸ್ಟಾರ್ರಿ ಬ್ಲಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಹುವಾವೇ ನೋವಾ ಫ್ಲಿಪ್ ಫೋನಿನ 256GB ವೇರಿಯಂಟ್ ಬೆಲೆ CNY 5,288 ಆಗಿದೆ.


Click it and Unblock the Notifications








