ಹುವಾವೇ ಯಿಂದ 'ಹುವಾವೇ ಪಿ ಸ್ಮಾರ್ಟ್‌ಪ್ರೊ' ಸ್ಮಾರ್ಟ್‌ಫೋನ್‌ ಲಾಂಚ್‌!

|

ಇಂದಿನ ಡಿಜಿಟಲ್‌ ಲೋಕದಲ್ಲಿ ಎಲ್ಲಾ ಕಡೆ ಸ್ಮಾರ್ಟ್‌ಫೋನ್‌ ಗಳ ಹಾವಳಿ ಜೋರಾಗಿಯೇ ಇದೆ. ಅಷ್ಟೇ ಅಲ್ಲ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೂ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಲೇ ಇದ್ದು ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆಯೇನು ಕಡಿಮೆಯಾಗಿಲ್ಲ. ಸದಾ ಗ್ರಾಹಕರಿಗೆ ಹೊಸ ಫೀಚರ್ಸ್‌ಗಳನ್ನ ನೀಡುವುದಕ್ಕೆ ಬಯಸುತ್ತಿರೋ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳು ಭಿನ್ನ ವಿಭಿನ್ನ ಮಾದರಿಯ ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಸದ್ಯ ಹುವಾವೇ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಅನ್ನ ಮಾರುಕಟ್ಟೆಗೆ ಲಾಂಚ್‌ ಮಾಡಿದೆ.

ಹುವಾವೇ

ಹೌದು ಹುವಾವೇ ಇದೀಗ 'ಹುವಾವೇ ಪಿ ಸ್ಮಾರ್ಟ್ ಪ್ರೊ' ಸ್ಮಾರ್ಟ್‌ಫೋನ್‌ ಅನ್ನ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದು ಇದು ಇತ್ತೀಚೆಗೆ ಬಿಡುಗಡೆಯಾಗಿದ್ದ ಹುವಾವೇ Y9 ಸ್ಮಾರ್ಟ್‌ಫೋನ್‌ ಮಾದರಿಯನ್ನೆ ಹೋಲುವಂತಿದೆ. ಈ ಸ್ಮಾರ್ಟ್‌ಫೋನ್‌ 16ಮೆಗಾಪಿಕ್ಸೆಲ್‌ ಪಾಪ್‌ ಆಪ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಹುವಾವೇ ಪಿ ಸ್ಮಾರ್ಟ್ ಪ್ರೊ ನ ಇನ್ನಷ್ಟು ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಹುವಾವೇ ಪಿ ಸ್ಮಾರ್ಟ್ ಪ್ರೊ ಸ್ಮಾರ್ಟ್‌ಫೋನ್‌ 235 x 1080 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರೋ 6.59 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಎಲ್‌ಸಿಡಿ ಪ್ಯಾನೆಲ್‌ ಹೊಂದಿದ್ದು ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವವನ್ನ ನೀಡುತ್ತೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಗ್ಲಾಸ್ ಬ್ಯಾಕ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಸ್ಕ್ರೀನ್-ಟು-ಬಾಡಿ ಅನುಪಾತ 84.7% ಆಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಹುವಾವೇಯ ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಹುವಾವೇ KIRIN 710F ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ ಪೈ EMUI 9.1 ನ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯವನ್ನ ಹೊಂದಿದ್ದು ಮೆಮೊರಿಕಾರ್ಡ್‌ ಮೂಲಕ 512GB ವರೆಗೂ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಹುವಾವೇ ಪಿ ಸ್ಮಾರ್ಟ್ ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌ ಸೆನ್ಸಾರ್‌ ಜೊತೆಗೆ f/1.8 ವೈಡ್‌ಲೆನ್ಸ್‌ ಅನ್ನ ಹೊಂದಿದೆ. ಎರಡನೇ ಕ್ಯಾಮೆರಾ 8ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು f/2.4 ಲೆನ್ಸ್ ಜೊತೆಗೆ 120 ಡಿಗ್ರಿ ಫಿಲ್ಡ್‌ವ್ಯೂ ಅನ್ನ ಒಳಗೊಂಡಿದೆ. ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಸೆನ್ಸಾರ್‌ ಜೊತೆಗೆ f/2.4 ಲೆನ್ಸ್‌ನ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಅಲ್ಲದೆ 16ಮೆಗಾಪಿಕ್ಸೆಲ್‌ ಪಾಪ್‌-ಆಪ್‌-ಸೆಲ್ಫಿ ಕ್ಯಾಮೆರಾವನ್ನ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 4,000mAh ಬ್ಯಾಟರಿ ಪ್ಯಾಕಪ್‌ ಅನ್ನ ಹೊಂದಿದ್ದು 10W ಚಾರ್ಜಿಂಗ್‌ ಬೆಂಬಲ ಹೊಂದಿದೆ. ಅಲ್ಲದೆ ಯುಎಸ್‌ಬಿ ಟೈಫ್‌ -ಸಿ ಪೋರ್ಟ್‌ ಚಾರ್ಜಿಂಗ್‌ ಅನ್ನ ಬೆಂಬಲಿಸುತ್ತದೆ. ಇನ್ನು ವೈಪೈ,ಬ್ಲೂಟೂತ್‌,ಕನೆಕ್ಟಿವಿಟಿ ಆಯ್ಕೆಯನ್ನ ಒಳಗೊಂಡಿದ್ದು, ಎಫ್‌ಎಂ ರೆಡಿಯೋ ಆಯ್ಕೆಯನ್ನು ಸಹ ನೀಡಿದೆ. ಜಿಪಿಎಸ್‌ ಆಯ್ಕೆಯು ಸಹ ಲಭ್ಯವಿದೆ.

ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌!
ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ಪಿ ಸ್ಮಾರ್ಟ್ ಪ್ರೊ ಬಲ್ಗೇರಿಯಾ, ಕ್ರೊಯೇಷಿಯಾ, ಗ್ರೀಸ್, ಪೋಲೆಂಡ್, ಉಕ್ರೇನ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಲಭ್ಯವಿದ್ದು. ಈ ಮಾರುಕಟ್ಟೆಗಳಲ್ಲಿ ಸುಮಾರು € 350 (ಸುಮಾರು 27,700ರೂ) ಬೆಲೆಗೆ ಲಭ್ಯವಿದೆ. ಬಲ್ಗೇರಿಯಾದಲ್ಲಿ, BGN 680(27,441ರೂ)ಬೆಲೆಯನ್ನ ಹೊಂದಿದೆ. ಪೋಲೆಂಡ್‌ನಲ್ಲಿ,PLN 1,400(25916ರೂ)ಬೆಲೆಯನ್ನ ಹೊಂದಿದ್ದು, ಮಿಡ್ನೈಟ್ ಬ್ಲ್ಯಾಕ್,ಮತ್ತು ಬ್ರೀಥಿಂಗ್ ಕ್ರಿಸ್ಟಲ್ ಬಣ್ಣಗಳಲ್ಲಿ ಆಯ್ಕೆಗೆ ಲಭ್ಯವಿದೆ.

Best Mobiles in India

Read more about:
English summary
Huawei is silently adding a new smartphone to its lineup in several European markets. Called Huawei P smart Pro, the device is identical to the recently launched Huawei Y9s.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X