ಹುವಾವೇ P40 4G ಸ್ಮಾರ್ಟ್‌ಫೋನ್ ಬಿಡುಗಡೆ: 50ಎಂಪಿ ಕ್ಯಾಮೆರಾ ಸೆನ್ಸಾರ್!
ಪ್ರತಿಷ್ಠಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹುವಾವೇ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಸಿದೆ. ಇದೀಗ ಕಂಪನಿಯು ತನ್ನ ಬಹುನಿರೀಕ್ಷಿತ ಹುವಾವೇ P40 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 50ಎಂಪಿ ಸೆನ್ಸಾರ್‌ನ ಕ್ಯಾಮೆರಾ ಆಯ್ಕೆಯಿಂದ ಗಮನ ಸೆಳೆದಿದೆ.

ಹೌದು, ಹುವಾವೇ ಸಂಸ್ಥೆಯು ನೂತನವಾಗಿ ಹುವಾವೇ P40 4G ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ಹೈ ಎಂಡ್ ಫೀಚರ್ಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಆಕ್ಟಾ ಕೋರ್ ಕಿರನ್ 990 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದರೊಂದಿಗೆ 8GB + 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನುಳಿದಂತೆ ಹುವಾವೇ P40 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ಹುವಾವೇ P40 ಸ್ಮಾರ್ಟ್‌ಫೋನ್ 1080x2400 ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.1 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು OLED ಮಾದರಿಯ ವಿನ್ಯಾಸವನ್ನ ಹೊಂದಿದ್ದು 60Hz ರೀಫ್ರೇಶ್ ರೇಟ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಈ ಡಿಸ್‌ಪ್ಲೇಯು ಫುಲ್ ಹೆಚ್‌ಡಿ ಡಿಸ್‌ಪ್ಲೆ ಅಗಿದೆ.

ಪ್ರೊಸೆಸರ್ ಕಾರ್ಯ
ಹುವಾವೇ P40 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕಿರನ್ 990 SoC ಪ್ರೊಸೆಸರ್ ವೇಗವನ್ನ ಹೊಂದಿದ್ದು, ಇತ್ತೀಚಿಗಿನ ಆಂಡ್ರಾಯ್ಡ್ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟಫೋನ್ 8GB + 128GB ಆಂತರೀಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ
ಹುವಾವೇ P40 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 16 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಹುವಾವೇ P40 ಸ್ಮಾರ್ಟ್‌ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 22.5W ಫಾಸ್ಟ್ ಚಾರ್ಜಿಂಗ್‌ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 4G LTE, ಬ್ಲೂಟೂತ್ 5.1, ಜಿಪಿಎಸ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ.

ಬೆಲೆ ಮತ್ತು ಲಭ್ಯತೆ
ಹುವಾವೇ P40 ಸ್ಮಾರ್ಟ್‌ಫೋನ್ ಬೆಲೆಯು ಚೀನಾದಲ್ಲಿ CNY 3,988 (ಭಾರತದಲ್ಲಿ ಅಂದಾಜು 45,250ರೂ.ಗಳು ಎನ್ನಲಾಗಿದೆ) ಡಾರ್ಕ್ ಬ್ಲೂ ಮತ್ತು ಫ್ರಾಸ್ಟ್ ಸಿಲ್ವರ್ ಬಣ್ಣ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications