ಆಯತಾಕಾರದ ವಿನ್ಯಾಸದಲ್ಲಿ ಹುವಾವೇ ವಾಚ್ ಫಿಟ್ ಸ್ಮಾರ್ಟ್‌ವಾಚ್ ಬಿಡುಗಡೆ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಜೊತೆಗೆ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಸಹ ಡಿಮ್ಯಾಂಡ್ ಪಡೆಯುತ್ತಿವೆ ಹಾಗೂ ಅಗತ್ಯ ಸಹ ಅನಿಸುತ್ತಿವೆ. ಆ ಪೈಕಿ ಫಿಟ್ನೆಸ್‌ ಬ್ಯಾಂಡ್ ಹಾಗೂ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಹುವಾವೇ ಸಂಸ್ಥೆಯು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ್ದು, ಇದೀಗ ಹುವಾವೇ ವಾಚ್ ಫಿಟ್ ಹೆಸರಿನ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಅನ್ನು ತನ್ನ ಲಿಸ್ಟ್‌ಗೆ ಸೇರ್ಪಡೆ ಮಾಡಿದೆ.

ಹುವಾವೇ ವಾಚ್

ಹೌದು ಹುವಾವೇ ಕಂಪೆನಿ ಇದೀಗ ಹುವಾವೇ ವಾಚ್ ಫಿಟ್ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಆಯತಾಕಾರದ ವಿನ್ಯಾಸವನ್ನು ಹೊಂದಿರುವ ಈ ಡಿವೈಸ್ ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಜೊತೆ 12 ಭಿನ್ನ ಅನಿಮೇಡೆಡ್ ವರ್ಕ್‌ಔಟ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ GPS ಸೌಲಭ್ಯವನ್ನು ಒಳಗೊಂಡಿದ್ದು, ದಿನದ 24 ಗಂಟೆಗಳ ಕಾಲ ಹಾರ್ಟ್‌ ರೇಟ್ ಮಾನಿಟರಿಂಗ್ ಮಾಡುವ ವ್ಯವಸ್ಥೆಯನ್ನು ಪಡೆದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆಯತಾಕಾರದ ಡಿಸ್‌ಪ್ಲೇ ವಿನ್ಯಾಸ

ಆಯತಾಕಾರದ ಡಿಸ್‌ಪ್ಲೇ ವಿನ್ಯಾಸ

ಹುವಾವೇ ವಾಚ್ ಫಿಟ್ ಡಿವೈಸ್ 1.4 ಇಂಚಿನ -ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, 280x456 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326ppi ಆಗಿದ್ದು, ಸ್ಕ್ರೀನ್ ಟು ಬಾಡಿ ಶೇ.70% ಅನುಪಾತ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು ಆಯತಾಕಾರದ ವಿನ್ಯಾಸ ಪಡೆದಿದ್ದು, ಈ ಡಿಸ್‌ಪ್ಲೇಯು 2.5D ಕರ್ವ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಹುವಾವೇ ವಾಚ್ ಫಿಟ್ ಡಿವೈಸ್ ಹುವಾವೇ ಟ್ರೂಸೀನ್ 4.0 ಹೃದಯ ಬಡಿತ ಮಾನಿಟರಿಂಗ್ ತಂತ್ರಜ್ಞಾನವನ್ನು ಆಧರಿಸಿದ್ದು, 24 ಗಂಟೆ ಹಾರ್ಟ್‌ ರೇಟ್ ಮಾನಿಟರಿಂಗ್ ಮಾಡುವ ಸೌಲಭ್ಯ ಹೊಂದಿದೆ. ಹಾಗೆಯೇ ರಕ್ತದ ಆಮ್ಲಜನಕದ ಶುದ್ಧತ್ವ (ಎಸ್‌ಪಿಒ 2) ಮಟ್ಟವನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ನಿದ್ರೆಯ ಗುಣಮಟ್ಟದ ನೈಜ-ಸಮಯದ ವಿಶ್ಲೇಷಣೆಗಾಗಿ ಹುವಾವೇ ಟ್ರೂಸ್ಲೀಪ್ 2.0 ಸ್ಲೀಪ್ ಟ್ರ್ಯಾಕಿಂಗ್ ತಂತ್ರಜ್ಞಾನವೂ ಇದೆ. ಇದಲ್ಲದೆ, ಇದು ಹವಾಮಾನ, ಅಲಾರ್ಮ್, ಟೈಮರ್ ಮತ್ತು ಸ್ಟಾಪ್‌ವಾಚ್ ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಅಲ್ಲದೆ ರನ್ನಿಂಗ್‌, ಸ್ವಿಮ್ಮಿಂಗ್‌, ಸೈಕ್ಲಿಂಗ್‌ನಂತಹ 11 ರೀತಿಯ ವ್ಯಾಯಾಮಗಳನ್ನು ಸಹ ಇದು ಟ್ರ್ಯಾಕ್ ಮಾಡಲಿದೆ.

ಸೌಲಭ್ಯಗಳು

ಸೌಲಭ್ಯಗಳು

ಹುವಾವೇ ವಾಚ್ ಫಿಟ್ SMS ಸಂದೇಶಗಳು, ಒಳಬರುವ ಕರೆಗಳು ಮತ್ತು ಕ್ಯಾಲೆಂಡರ್ ಅಪ್ಲಿಕೇಶನ್‌ಗಳಿಗೆ ಎಚ್ಚರಿಕೆಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಂದ ಸಂದೇಶ ಅಧಿಸೂಚನೆಗಳನ್ನು ಒದಗಿಸುತ್ತದೆ. ವಾಚ್ ರಿಮೋಟ್ ಶಟರ್ ಆಗಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಸಹ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಡಿವೈಸ್‌ ಇನ್‌ಬಿಲ್ಟ್‌ ಬ್ಯಾಟರಿಯನ್ನು ಹೊಂದಿದ್ದು, ಇದು 10 ದಿನಗಳ ವಿಶಿಷ್ಟ ಬಳಕೆಯನ್ನು ಅಥವಾ 12 ಗಂಟೆಗಳ ಬ್ಯಾಕಪ್ ಅನ್ನು ಜಿಪಿಎಸ್ ಮೋಡ್‌ನಲ್ಲಿ ತಲುಪಿಸಲು ರೇಟ್ ಮಾಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ವಾಚ್ ಫಿಟ್ ಡಿವೈಸ್ ಬೆಲೆ AED 399 (ಭಾರತದಲ್ಲಿ ಅಂದಾಜು 7,900ರೂ. ಎನ್ನಲಾಗಿದೆ). ಸೆಪ್ಟೆಂಬರ್ 3 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಸ್ಮಾರ್ಟ್ ವಾಚ್ ಖರೀದಿಗೆ ಲಭ್ಯವಿರುತ್ತದೆ. ಈ ಡಿವೈಸ್ ಕಪ್ಪು, ಗುಲಾಬಿ ಮತ್ತು ಕೆಂಪು ಮೂರು ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Huawei Watch Fit is claimed to deliver up to 10 days of battery life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X