ಸಖತ್ ಹವಾ ಎಬ್ಬಿಸಲಿದೆ 'ಹುವಾವೆ ನೊವಾ' ಬ್ಲೂಟೂತ್ ಸ್ಪೀಕರ್!

|

ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಹುವಾವೆ ಟೆಕ್‌ ಕಂಪನಿಗೆ ಇತ್ತೀಚಿಗೆ ಅಮೆರಿಕಾ ತಾಂತ್ರಿವಾಗಿ ಬೆಂಬಲ ನೀಡುವುದನ್ನು ನಿಲ್ಲಿಸಿದೆ. ಈ ನಿಟ್ಟಿನಲ್ಲಿ ಕಂಗೆಟ್ಟಿರುವ ಹುವಾವೆ ಏಕಾಂಗಿ ಹೋರಾಟಕ್ಕೆ ಈಗ ಸಿದ್ಧವಾಗಿದ್ದು, ಸ್ವಂತ ಓಎಸ್‌ ಪರಿಚಯಿಸುವುದಾಗಿ ಘೋಷಿಸಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿದೆ. ಅದರ ಬೆನ್ನಲ್ಲೇ ಇದೀಗ ವಾಯರ್‌ಲೆಸ್‌ ಬ್ಲೂಟೂತ್ ಸ್ಪೀಕರ್‌ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಸಖತ್ ಹವಾ ಎಬ್ಬಿಸಲಿದೆ 'ಹುವಾವೆ ನೊವಾ' ಬ್ಲೂಟೂತ್ ಸ್ಪೀಕರ್!

ಹೌದು, ಜನಪ್ರಿಯ ಹುವಾವೆ ಕಂಪನಿಯು ನೊವಾ 5 ಸರಣಿಯಲ್ಲಿ ಹೊಸದಾಗಿ ವಾಯರ್‌ಲೆಸ್‌ ಬ್ಲೂಟೂತ್ ಸ್ಪೀಕರ್‌ ರಿಲೀಸ್ ಮಾಡಲು ಉತ್ಸುಕವಾಗಿದ್ದು, ಈ ಸ್ಪೀಕರ್‌ ಅನ್ನು ಇಂದೇ ಘೋಷಿಸಲಿದೆ ಎನ್ನಲಾಗಿದೆ. ಹುವಾವೆ ಕಂಪನಿಗೆ ಸಂಬಧಿಸಿದ ಸಮಾಚಾರಗಳನ್ನು ಹೆಚ್ಚಾಗಿ ಪೋಸ್ಟ್‌ ಮಾಡುವ @RODENT950 ಖಾತೆಯ ಟ್ವಿಟರ್‌ನಲ್ಲಿ ನೊವಾ ವಾಯರ್‌ಲೆಸ್‌ ಬ್ಲೂಟೂತ್ ಸ್ಪೀಕರ್‌ ಫೋಟೊ ಲೀಕ್ ಮಾಡಲಾಗಿದೆ.

ಸಖತ್ ಹವಾ ಎಬ್ಬಿಸಲಿದೆ 'ಹುವಾವೆ ನೊವಾ' ಬ್ಲೂಟೂತ್ ಸ್ಪೀಕರ್!

ಹೊಸ ನೊವಾ ಸ್ಪೀಕರ್‌ ಸಿಲಿಂಡರ್ ಆಕಾರದ ರಚನೆಯನ್ನು ಪಡೆದುಕೊಂಡಿದ್ದು, ಮೇಲ್ಭಾಗದ ಸುತ್ತಲೂ ಗ್ರೀಲ್‌ ಆಕಾರದ ರಚನೆಯನ್ನು ನೀಡಲಾಗಿದೆ. ಎರಡು ಬಣ್ಣಗಳ ಸಮ್ಮಿಶ್ರಣವನ್ನು ಒಳಗೊಂಡಿದ್ದು, ಮೇಲ್ಭಾಗವು ಅಲ್ಯುಮಿನಿಯಮ್ ರಚನೆಯನ್ನು ಹೊಂದಿದೆ ಹಾಗೂ ಬಾಟಮ್ ರಚನೆಯು ರಬ್ಬರ್‌ ಅಥವಾ ಪ್ಲಾಸ್ಟಿಕ್‌ನಿಂದ ರಚನೆಯಾಗಿದೆ ಎಂಬುದು ಸ್ಪೀಕರ್‌ ಗಮನಿಸಿದಾಗ ಮೇಲ್ನೋಟಕ್ಕೆ ಕಂಡುಬರುತ್ತದೆ.

ಸಖತ್ ಹವಾ ಎಬ್ಬಿಸಲಿದೆ 'ಹುವಾವೆ ನೊವಾ' ಬ್ಲೂಟೂತ್ ಸ್ಪೀಕರ್!

ಹುವಾವೆ ಸಂಸ್ಥೆಯು ಬಿಡುಗಡೆ ಮಾಡಲಿರುವ ನೊವಾ ಬ್ಲೂಟೂತ್ ಸ್ಪೀಕರ್‌ ಹೊಸ ಲೊಗೊ ಪಡೆದುಕೊಂಡಿದ್ದು, ಗ್ರೇ ಬಣ್ಣದಲ್ಲಿ ಕಂಪನಿಯ ಹೆಸರನ್ನು ನಮೂದಿಸಲಾಗಿದೆ. ಸ್ಪೀಕರ್‌ ಬಾಟಮ್ ಭಾಗದಲ್ಲಿ ಪವರ್‌ ಬಟನ್‌ ನೀಡಲಾಗಿದ್ದು, ಅದರ ಪಕ್ಕದಲ್ಲಿ LED ಲೈಟ್‌ ಇಂಡಿಕೇಟರ್‌ ನೀಡಲಾಗಿದೆ. ಈ ಲೈಟ್‌ ಸ್ಪೀಕರ್‌ ಆನ್‌ ಇದ್ದಾಗ, ಚಾರ್ಜಿಂಗ್ ಮಾಡುವಾಗ ಮತ್ತು ಚಾರ್ಜಿಂಗ್ ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ.

ಓದಿರಿ : ಏರ್‌ಟೆಲ್‌ನಿಂದ ಅನಿಯಮಿತ 'ಹಲೋ ಟ್ಯೂನ್' ಆಯ್ಕೆ!..ಜಿಯೋಗೆ ನೇರಾನೇರ ಫೈಟ್! ಓದಿರಿ : ಏರ್‌ಟೆಲ್‌ನಿಂದ ಅನಿಯಮಿತ 'ಹಲೋ ಟ್ಯೂನ್' ಆಯ್ಕೆ!..ಜಿಯೋಗೆ ನೇರಾನೇರ ಫೈಟ್!

ಹುವಾವೆ ಕಂಪನಿಯ ವಾಯರ್‌ಲೆಸ್‌ ಸ್ಪೀಕರ್‌ ಅತ್ಯುತ್ತಮ ಸೌಂಡ್‌ ಗುಣಮಟ್ಟ ಮತ್ತು ಆಕರ್ಷಕ ರಚನೆಯನ್ನು ಪಡೆದುಕೊಂಡಿದೆ. ಬಿಡುಗಡೆ ನಂತರ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸಖತ್‌ ಹವಾ ಕ್ರಿಯೆಟ್‌ ಮಾಡುವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಡಿವೈಸ್‌ ಬೆಲೆಯು 1,391ರೂ.ಗಳು ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಇ ಕಾಮರ್ಸ್‌ ಜಾಲತಾಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಓದಿರಿ : ಪಬ್‌ಜಿ ಲೈಟ್‌ ವರ್ಷನ್ ಪ್ರಿ ರಿಜಿಸ್ಟ್ರೇಷನ್ ಮಾಡಿ ಪಡೆಯಿರಿ ಬೆಸ್ಟ್‌ ರಿವಾರ್ಡ್ಸ್‌! ಓದಿರಿ : ಪಬ್‌ಜಿ ಲೈಟ್‌ ವರ್ಷನ್ ಪ್ರಿ ರಿಜಿಸ್ಟ್ರೇಷನ್ ಮಾಡಿ ಪಡೆಯಿರಿ ಬೆಸ್ಟ್‌ ರಿವಾರ್ಡ್ಸ್‌!

Best Mobiles in India

English summary
When Huawei announces the Nova 5 series today, it will also unveil a cute little speaker under the Nova brand. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X