Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಹುವಾವೆ Y9 ಪ್ರೈಮ್' ಸ್ಮಾರ್ಟ್‌ಫೋನ್ ಬಿಡುಗಡೆ!.ಭರ್ಜರಿ ಲಾಂಚ್ ಆಫರ್!
ವಿಶ್ವದ ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ಹುವಾವೆಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಉತ್ತಮ ಮಾರಾಟವನ್ನು ಕಂಡಿವೆ. ಅದರಲ್ಲಿಲೂ ಕಂಪನಿಯ Y ಸರಣಿಯ ಫೋನ್‌ಗಳು ಬಜೆಟ್ ಬೆಲೆಯಲ್ಲಿ ಗುರುತಿಸಿಕೊಂಡಿವೆ. ಆ ಸರಣಿಗೆ ಈಗ ಕಂಪನಿಯು 'ಹುವಾವೆ Y9 ಪ್ರೈಮ್' ಹೆಸರಿನ ಹೊಸ ಸ್ಮಾರ್ಟ್‌ಫೋನ್ ಅನ್ನು ಸೇರ್ಪಡೆ ಮಾಡಿದ್ದು, ಈ ಫೋನ್ ಸಹ ಬೆಸ್ಟ್ ಫೀಚರ್ಸ್‌ಗಳೊಂದಿಗೆ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿದೆ.

ಹೌದು, ಹುವಾವೆ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಇಂದು (ಅಗಷ್ಟ 1) ಹೊಸದಾಗಿ 'ಹುವಾವೆ Y9 ಪ್ರೈಮ್' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಇದೇ ಅಗಷ್ಟ 7 ರಿಂದ ಸೇಲ್ (ಅಮೆಜಾನ್ ಪ್ರೈಮ್ ಸದಸ್ಯರಿಗೆ) ಆರಂಭಿಸಲಿದೆ. ಗ್ರಾಹಕರು ಅಗಷ್ಟ 8ರಿಂದ ಅಮೆಜಾನ್ ಜಾಲತಾಣದಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. ಹಾಗೆಯೇ ಆಫ್‌ಲೈನ್ ಮೊಬೈಲ್ ಸ್ಟೋರ್‌ಗಳಲ್ಲಿಯೂ ದೊರೆಯಲಿದೆ.

ಈ ಸ್ಮಾರ್ಟ್‌ಫೋನ್ 15,990ರೂ.ಗಳ ಬೆಲೆಯನ್ನು ಹೊಂದಿದ್ದು, ಗ್ರಾಹಕರು 'ಅಮೆಜಾನ್ ಪೇ' ಯಿಂದ ಹಣಪಾವತಿಸಿದರೇ ಲಾಂಚ್ ಆಫರ್ ಆಗಿ 500ರೂ. ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಮತ್ತು ಎಸ್‌ಬಿಐ ಗ್ರಾಹಕರಿಗೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಸೀಗಲಿದೆ. ಹಾಗಾದರೇ ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.59 ಇಂಚಿನ ಹೆಚ್‌ಡಿ ಪ್ಲಸ್ TFT ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಅನುಪಾತವು 19.5:9ರಷ್ಟಾಗಿದೆ. ಹಾಗೆಯೇ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 391ppi ಆಗಿದ್ದು, 163.5x77.3x8.8mm ಸುತ್ತಳತೆಯನ್ನು ಪಡೆದುಕೊಂಡಿದೆ. 196.8ಗ್ರಾಂ ತೂಕ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
'ಆಕ್ಟಾ ಕೋರ್ ಹಿಸಿಲಿಕಾನ್ ಹಿಲಿಯೊ 710F SoC' ಪ್ರೊಸೆಸರ್ ಶಕ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಮತ್ತು EMUI 9.0 ಸೌಲಬ್ಯಗಳ ಬೆಂಬಲ ಪಡೆದಿದೆ. 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೂ ಮೆಮೊರಿ ವಿಸ್ತರಿಸಬಹುದಾಗಿದೆ.

ತ್ರಿವಳಿ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ರಿಯರ್ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದ್ದು, ಅಪರ್ಚರ್ f/1.8 ಆಗಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಅಲ್ಟ್ರಾವೈಲ್ಡ್ ಸೆನ್ಸಾರ್ ಮತ್ತು f/2 ಅಪರ್ಚರ್ ಸಾಮರ್ಥ್ಯದಲ್ಲಿದೆ. ಹಾಗೂ ತೃತೀಯ ಕ್ಯಾಮೆರಾವು 2ಎಂಪಿ ಡೆಪ್ತ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಪಡೆದಿದೆ.

ಸೆಲ್ಫಿ ವಿಶೇಷತೆ
ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ ಮುಂಬದಿಯಲ್ಲಿ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಅದು 16ಎಂಪಿ ಸಾಮರ್ಥ್ಯದಲ್ಲಿದೆ. ಈ ಕ್ಯಾಮೆರಾವು 8 ವಿವಿಧ ಸೆನ್ಸ್ ಗ್ರಹಿಕೆಯ ಸಾಮರ್ಥ್ಯವನ್ನು ಪಡೆದಿದ್ದು, ಬಿದ್ದರೇ ಪಾಪ್‌ಅಪ್ ಕ್ಯಾಮೆರಾವು ಧಕ್ಕೆಯಿಂದ ರಕ್ಷಣೆ ಪಡೆಯುವ ಸೆನ್ಸಾರ್ ಹೊಂದಿದೆ. ಲೋ ಲೈಟ್ ಉತ್ತಮ ಫೋಟೊಗ್ರಫಿ ಮೂಡುವ ತಂತ್ರಜ್ಞಾನವನ್ನು ನೀಡಲಾಗಿದೆ.

ಬ್ಯಾಟರಿ ಪವರ್
ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಟೈಪ್-ಸಿ ಪೋರ್ಟ್, ಬ್ಲೂಟೂತ್, ವೈಫೈ, ಜಿಪಿಎಸ್, ಆಂಬಿಯಂಟ್ ಲೈಟ್ ಸೆನ್ಸಾರ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿದಂತೆ ಹಲವು ಅಗತ್ಯ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

ಬೆಲೆ ಮತ್ತು ಲಭ್ಯತೆ
ಹುವಾವೆ ವೈ9 ಪ್ರೈಮ್ ಸ್ಮಾರ್ಟ್‌ಫೋನ್ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್‌ನಲ್ಲಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 15,990ರೂ.ಗಳು ಆಗಿದ್ದು, ಇದೇ ಅಗಷ್ಟ 8ರಂದು ಅಮೆಜಾನ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಅಗಷ್ಟ 7 ರಂದು ದೊರೆಯಲಿದೆ. ಹಾಗೆಯೇ ಕ್ರೋಮ್, ಪೂರ್ವಿಕಾ, ಸೇರಿದಂತೆ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಲಭ್ಯವಾಗಲಿದೆ. ಪ್ರಿ-ಬುಕ್ ಮಾಡುವ ಗ್ರಾಹಕರಿಗೆ ಹುವಾವೆ ಸ್ಪೋರ್ಟ್ಸ್ ಹೆಡ್‌ಫೋನ್ ಮತ್ತು 15,600mAh ಸಾಮರ್ಥ್ಯದ ಪವರ್‌ಬ್ಯಾಂಕ್ ಲಭ್ಯವಾಗುವ ಸಾಧ್ಯತೆಗಳಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470