Subscribe to Gizbot

ಹ್ಯಾಕರ್ಸ್‌ಗಳ ಹೊಸ ದಾರಿ ಬ್ಲೂಟೂತ್: ಸೇಫ್‌ ಅಲ್ಲ ನಿಮ್ಮ ಫೋನ್

Written By:

ಇಂದಿನ ದಿನದಲ್ಲಿ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ಸಾಧನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ಹ್ಯಾಕರ್ಸ್‌ಗಳು ಸಹ ಇಂಟರ್‌ನೆಟ್, ವೈ-ಫೈ ಬಿಟ್ಟು ಸದ್ಯದ ದಿನದಲ್ಲಿ ಬ್ಲೂಟೂತ್ ಕಡೆಗೆ ಮುಖ ಮಾಡಿದ್ದು, ಬ್ಲೂಟೂತ್‌ನಿಂದಲೇ ನಿಮ್ಮ ಫೋನ್‌, ಡೆಸ್ಕ್‌ಟಾಪ್, ಸೇರಿದಂತೆ ವಿವಿಧ ವಸ್ತುಗಳನ್ನು ಹ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.

 ಹ್ಯಾಕರ್ಸ್‌ಗಳ ಹೊಸ ದಾರಿ ಬ್ಲೂಟೂತ್: ಸೇಫ್‌ ಅಲ್ಲ ನಿಮ್ಮ ಫೋನ್

ಓದಿರಿ: ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ ಯಾಕೆ ಹೀಗೆ.?

ಈಗಾಗಲೇ ವಿಶ್ವದಲ್ಲಿ 8 ಬಿಲಿಯನ್ ಡಿವೈಸ್‌ಗಳು ಬ್ಲೂಟೂತ್ ಮೂಲಕ ಹ್ಯಾಕ್‌ಗೆ ಗುರಿಯಾಗಿದೆ ಎನ್ನುವ ಮಾಹಿತಿಯೂ ಸದ್ಯ ಹೊರ ಬಿದ್ದಿದೆ. ಇದಲ್ಲದೇ ಇನ್ನು ಅನೇಕ ಡಿವೈಸ್‌ಗಳು ಇನ್ನುವ ಹ್ಯಾಕ್ ಆಗಿರುವುದು ಅವರಿಗೆ ತಿಳಿದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲೂಬೊರ್ನೆ ಆಟ್ಯಾಕ್:

ಬ್ಲೂಬೊರ್ನೆ ಆಟ್ಯಾಕ್:

ಬ್ಲೂಟೂತ್ ಮೂಲಕ ನಡೆಯುತ್ತಿರುವ ಹ್ಯಾಕಿಂಗ್‌ಗೆ ಬ್ಲೂಬೊರ್ನೆ ಆಟ್ಯಾಕ್ ಎಂದು ಕರೆಯಲಾಗುತ್ತಿದೆ. ಇದು ನಿಮ್ಮ ಕಂಪ್ಯೂಟರ್ ಇಲ್ಲವೇ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ಹಾಳು ಮಾಡಲಿದೆ.

ದಾಳಿಯಿಂದ ದೂರ ಉಳಿಯುವುದು ಹೇಗೆ?

ದಾಳಿಯಿಂದ ದೂರ ಉಳಿಯುವುದು ಹೇಗೆ?

ಈಗಾಗಲೇ ಈ ದಾಳಿಯೂ ವಿಶ್ವದ ನಾನಾ ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಈ ದಾಳಿಯಿಂದ ದೂರ ಉಳಿಯಲು ಇರುವ ದಾರಿ ಎಂದರೆ ನೀವು ನಿಮ್ಮ ಓಎಸ್ ಆಪ್ ಡೇಟ್ ಮಾಡುವುದು ಮತ್ತು ಬ್ಲೂಟೂತ್ ಅನ್ನು ಬಂದ್ ಮಾಡಿ ಕಾರ್ಯನಿರ್ವಹಿಸುವುದು.

ಎಲ್ಲಾ ಮಾಹಿತಿಯನ್ನು ಕದಿಯುವ ಸಾಧ್ಯತೆ:

ಎಲ್ಲಾ ಮಾಹಿತಿಯನ್ನು ಕದಿಯುವ ಸಾಧ್ಯತೆ:

ಒಮ್ಮೆ ಹ್ಯಾಕರ್ಸ್ ನಿಮ್ಮ ಕಂಪ್ಯೂಟರ್ ಇಲ್ಲವೇ ಮೊಬೈಲ್ ಸಾಧನವನ್ನು ಪ್ರವೇಶಿದಿದರೆ ಸಾಕು. ನಿಮ್ಮಲ್ಲಿರುವ ಎಲ್ಲಾ ಮಾಹಿತಿಯನ್ನು ಕದಿಯುವ ಸಾಧ್ಯತೆಯೂ ಅಧಿಕವಾಗಿರಲಿದೆ. ನಿಮ್ಮ ಕಾಂಟೆಕ್ಟ್, ಫೋಟೋ, ಕಾರ್ಡ್ ಮಾಹಿತಿ ಸೇರಿದಂತೆ ಎಲ್ಲಾ ವಿಷಯಗಳು ಹ್ಯಾಕರ್ಸ್ ಪಾಲಾಗಲಿದೆ.

ಹ್ಯಾಕ್ ಆಗುವುದು ಹೇಗೆ? ವಿಡಿಯೋ ನೋಡಿ:

ನೀವು ಸಹ ಬ್ಲೂಟೂತ್ ಮೂಲಕ ಹ್ಯಾಕಿಂಗ್ ಮಾಡುವುದು ಹೇಗೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದರೆ ನೀವು ಒಮ್ಮೆ ಈ ವಿಡಿಯೋವನ್ನು ನೋಡಿ. ನಂತರದಲ್ಲಿ ಅದೇ ನಿಮ್ಮ ಅರಿವಿಗೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BlueBorne is a new way of attacking and getting complete control of the desktop, mobile, and IoT platforms using a Bluetooth vulnerability. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot