ಒನ್‌ಪ್ಲಸ್ ಫೋನ್ ಖರೀದಿಸುವ ಗ್ರಾಹಕರಿಗೆ ಇದುವೇ ಬೆಸ್ಟ್ ಆಫರ್!..ತಡ ಮಾಡಬೇಡಿ!
ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಅದರಲ್ಲಿಯೂ ಕೆಲವು ಸಂದರ್ಭಗಳಲ್ಲಿ ಮೊಬೈಲ್ ಫೋನ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಿತ್ತದೆ. ಸದ್ಯ ಒನ್‌ಪ್ಲಸ್ 10T 5G ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ದಸರಾ ಹಬ್ಬ ಸೇಲ್ ಲೈವ್ ಇದ್ದು, ಒನ್‌ಪ್ಲಸ್ 10T 5G (OnePlus 10T 5G) ಸ್ಮಾರ್ಟ್‌ಫೋನ್ ಶೇ. 20% ರಷ್ಟು ಬೊಂಬಾಟ್ ಡಿಸ್ಕೌಂಟ್ ನಲ್ಲಿ ಕಾಣಿಸಿಕೊಂಡಿದೆ.

8GB RAM + 128 GB ಸ್ಟೋರೇಜ್ ವೇರಿಯಂಟ್ ಫೋನ್ 39,999ರೂ. ಗಳ ಪ್ರೈಸ್‌ಟ್ಯಾಗ್ ಪಡೆದಿದೆ. ಇದಲ್ಲದೇ ಗ್ರಾಹಕರಿಗೆ ಕೆಲವು ಆಯ್ದ ಬ್ಯಾಂಕ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಸಹ ದೊರೆಯುತ್ತವೆ. ಲಭ್ಯ ಇರುವ ಎಲ್ಲ ಕೊಡುಗೆ ಸೇರಿ ಗ್ರಾಹಕರು 34,999ರೂ. ಗೆ ಖರೀದಿ ಮಾಡಬಹುದು.
ಇನ್ನು ಒನ್‌ಪ್ಲಸ್ ಕಂಪನಿಯ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಸಪೋರ್ಟ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಹಾಗಾದರೆ ಒನ್‌ಪ್ಲಸ್ 10T ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೀಗಿದೆ
ಒನ್‌ಪ್ಲಸ್ 10T ಮೊಬೈಲ್ 6.7 ಇಂಚಿನ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 2,412 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬಲವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 10 ಬಿಟ್ ಕಲರ್, RGB ಬಣ್ಣದ ಹರವು ಮತ್ತು HDR10+ ಜೊತೆಗೆ 120hz ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಸಹ ಒದಗಿಸಲಿದೆ. ಇದಲ್ಲದೆ 394ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರುವ ಈ ಡಿಸ್‌ಪ್ಲೇ 360Hz ವರೆಗಿನ ಹಾರ್ಡ್‌ವೇರ್ ಟಚ್ ರೆಸ್ಪಾನ್ಸ್ ಮತ್ತು 720Hz ನ ಸಾಫ್ಟ್‌ವೇರ್ ಟಚ್ ರೆಸ್ಪಾನ್ಸ್ ಅನ್ನು ಪಡೆದಿದೆ.
ವೇಗದ ಪ್ರೊಸೆಸರ್ ಸೌಲಭ್ಯ
ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್ 12 ಬೆಂಬಲ ಕೂಡಾ ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 16GB RAM ಮತ್ತು 256GB ಆಂತರೀಕ ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ.

ಬೊಂಬಾಟ್ ಕ್ಯಾಮೆರಾ ಸೆನ್ಸಾರ್ ಆಯ್ಕೆ
ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಪಡೆದಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಹೊಂದಿದ್ದು, ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್
ಒನ್‌ಪ್ಲಸ್ 10T ಫೋನ್ 4800mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದ್ದು, 150W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರೊಂದಿಗೆ ಸ್ಮಾರ್ಟ್ ಬ್ಯಾಟರಿ ಹೆಲ್ತ್ ಅಲ್ಗಾರಿದಮ್, ಬ್ಯಾಟರಿ ಹೀಲಿಂಗ್ ಟೆಕ್ನಾಲಜಿ, ಚಾರ್ಜಿಂಗ್ ನಿರ್ವಹಿಸಲು ಕಸ್ಟಮೈಸ್ ಮಾಡಿದ ಸ್ಮಾರ್ಟ್ ಚಿಪ್ ಮತ್ತು ಇತರೆ ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ಸಹ ಪಡೆದಿದೆ.


Click it and Unblock the Notifications








