Home
ಸುದ್ದಿಜಾಲ

ಅಮೆಜಾನ್‌ನಲ್ಲಿ ಈ ಒನ್‌ಪ್ಲಸ್ ಫೋನ್‌ಗೆ ಬೊಂಬಾಟ್‌ ಆಫರ್‌; ಈ ಸದಾವಕಾಶ ನಿಮಗಾಗಿ!

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಬೇಡಿಕೆ ನಿರ್ಮಾಣ ಆಗಿದ್ದು, ಈ ಕಾರಣಕ್ಕಾಗಿಯೇ ಒನ್‌ಪ್ಲಸ್‌ ತನ್ನ ಸ್ಮಾರ್ಟ್‌ಫೋನ್‌ ಸರಣಿಯನ್ನು ವಿಸ್ತರಿಸುವ ಮೂಲಕ ಹೊಸ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರ ನಡುವೆ ನೀವು ಕೈಗೆಟಕುವ ದರದಲ್ಲಿ ಒನ್‌ಪ್ಲಸ್‌ನ ಈ ಫೋನ್ ಅನ್ನು ಖರೀದಿ ಮಾಡಬಹುದು.

ಹೌದು, ಒನ್‌ಪ್ಲಸ್ 11R 5G ಸ್ಮಾರ್ಟ್‌ಫೋನ್‌ ಕೆಲವು ವಾರಗಳ ಹಿಂದಷ್ಟೇ ಲಾಂಚ್‌ ಆಗಿದ್ದು, ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದರಂತೆ ಈ ಹಿಂದೆ ಲಾಂಚ್‌ ಆಗಿದ್ದ ಒನ್‌ಪ್ಲಸ್ 10R 5G ಸ್ಮಾರ್ಟ್‌ ಫೋನ್‌ ಇದೀಗ ಬೊಂಬಾಟ್‌ ಡಿಸ್ಕೌಂಟ್‌ ಪಡೆದುಕೊಂಡಿದ್ದು, ಈ ಮಿಡ್‌ರೇಂಜ್‌ ಫೋನ್‌ ಅನ್ನು ನೀವು 18,400 ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು ಎಂದರೆ ನಂಬಲೇಬೇಕು. ಹಾಗಿದ್ರೆ, ಇದರ ಸಾಮಾನ್ಯ ದರ ಹಾಗೂ ಈ ಫೋನ್‌ ಖರೀದಿ ಮೇಲೆ ಇರುವ ಬ್ಯಾಂಕ್‌ ಆಫರ್‌ಗಳ ವಿವರವನ್ನು ಗಮನಿಸಿ.

ಅಮೆಜಾನ್‌ನಲ್ಲಿ ಈ ಒನ್‌ಪ್ಲಸ್ ಫೋನ್‌ಗೆ ಬೊಂಬಾಟ್‌ ಆಫರ್‌; ಈ ಸದಾವಕಾಶ ನಿಮಗಾಗಿ!

ಒನ್‌ಪ್ಲಸ್ 10R 5G ಫೋನ್‌ ಖರೀದಿ ಮಾಡಲು ಸಕಾಲ

ಒನ್‌ಪ್ಲಸ್ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ಬರುವ ಫೋನ್‌ಗಳನ್ನು ನಿರ್ಮಾಣ ಮಾಡುವುದರಿಂದ ಅವುಗಳ ಬೆಲೆ ಸಹ ಹೆಚ್ಚಿರುತ್ತದೆ. ಹೀಗಾಗಿ ಕೆಲವರಿಗೆ ಇದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಈ ಆಫರ್‌ ಮೂಲಕ ಯಾರೂ ಬೇಕಾದರೂ ಈ ಒನ್‌ಪ್ಲಸ್‌ ಫೋನ್‌ ಅನ್ನು ಖರೀದಿ ಮಾಡಬಹುದು. ಅಂತೆಯೇ ಈ ಫೋನ್ 38,999 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, ಅಮೆಜಾನ್‌ ನಲ್ಲಿ 15% ಡಿಸ್ಕೌಂಟ್‌ ಪಡೆದಿಕೊಂಡಿದೆ. ಈ ಮೂಲಕ 32,999 ರೂ. ಗಳ ಬೆಲೆಯೊಂದಿಗೆ ಕಾಣಿಸಿಕೊಂಡಿದೆ.

ಅದಾಗ್ಯೂ ನೀವು ಇನ್ನೂ ಹೆಚ್ಚಿನ ಆಫರ್‌ ಮೂಲಕ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಬಹುದಾಗಿದ್ದು, ಇದಕ್ಕಾಗಿ ಬ್ಯಾಂಕ್‌ ಕೊಡುಗೆ ಹಾಗೂ ವಿನಿಮಯ ಆಫರ್‌ ಕಡೆ ಕಣ್ಣಾಯಿಸಬೇಕಿದೆ. ಅಂದರೆ ನೀವು ಬ್ಯಾಂಕ್‌ ಆಫರ್‌ ಹಾಗೂ ಈ ವಿನಿಯಮ ಆಫರ್‌ ಎರಡೂ ಸೇರಿದರೆ ಕನಿಷ್ಠ ಅಂದರೂ 18,400 ರೂ. ಗಳ ರಿಯಾಯಿತಿ ಈ ಫೋನ್‌ಗೆ ಸಿಗಲಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಈ ಅತ್ಯುತ್ತಮ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಅಮೆಜಾನ್‌ನಲ್ಲಿ ಈ ಒನ್‌ಪ್ಲಸ್ ಫೋನ್‌ಗೆ ಬೊಂಬಾಟ್‌ ಆಫರ್‌; ಈ ಸದಾವಕಾಶ ನಿಮಗಾಗಿ!

ಒನ್‌ಪ್ಲಸ್‌ 10R 5G ಫೀಚರ್ಸ್‌

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2412 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ 394ppi ಪಿಕ್ಸೆಲ್ ಸಾಂದ್ರತೆ ಸಹ ಇದರಲ್ಲಿ ಕಂಡುಬರುತ್ತದೆ. ಇನ್ನುಳಿದಂತೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.

ಹಾಗೆಯೇ ಮೀಡಿಯಾಟೆಕ್‌ ಡೈಮೆನ್ಸಿಟಿ 8100 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಂಟ್ರೋಲ್ ಆಗಲಿದೆ. ಇದರ ಜೊತೆಗೆ ಮಾಲಿ G610 MC6 GPU ಅನ್ನು ಫೋನ್‌ ಬಳಕೆಯನ್ನು ಇನ್ನಷ್ಟು ಸುಧಾರಣೆ ಮಾಡಿದೆ. ಹಾಗೆಯೇ 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಫೋನ್ ಕಾಣಿಸಿಕೊಂಡಿದೆ.

ಅಮೆಜಾನ್‌ನಲ್ಲಿ ಈ ಒನ್‌ಪ್ಲಸ್ ಫೋನ್‌ಗೆ ಬೊಂಬಾಟ್‌ ಆಫರ್‌; ಈ ಸದಾವಕಾಶ ನಿಮಗಾಗಿ!

ಈ ಒನ್‌ಪ್ಲಸ್‌ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು,ಇದರಲ್ಲಿ 50MP f/1.8 ವೈಡ್ ಆಂಗಲ್ ಕ್ಯಾಮೆರಾ, 8MP f/2.2 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2MP f/2.4 ಮ್ಯಾಕ್ರೋ ಸೆನ್ಸರ್ ವಿಶೇಷವಾಗಿದೆ. ಜೊತೆಗೆ ಸೆಲ್ಫಿಗಾಗಿ 16MP ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

Best Mobiles in India

English summary
Big discount offer has been announced for OnePlus 10R 5G smartphone in Amazon, which can be purchased at this budget price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+