ಒನ್‌ಪ್ಲಸ್‌ನ ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ: ಖರೀದಿಗೆ ಇದು ಬೆಸ್ಟ್ ಟೈಮ್!
ಒನ್‌ಪ್ಲಸ್ ಫೋನ್‌ಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇದ್ದು, ಅದರಂತೆ ಹೆಚ್ಚಿನ ಬೆಲೆ ಸಹ ಹೊಂದಿರುತ್ತವೆ. ಅದಾಗ್ಯೂ ನೀವು ಕೆಲವು ಸಂದರ್ಭಗಳಲ್ಲಿ ಮೂಲ ಬೆಲೆಗಿಂತ ಕಡಿಮೆ ಬೆಲೆಗೆ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅದರಂತೆ ನೀವು 21% ರಿಯಾಯಿತಿಯಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.
ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ತನ್ನ ಫೋನ್‌ಗಳ ಅತ್ಯುತ್ತಮ ಕಾರ್ಯಕ್ಷಮತೆಯಿಂದ ಹೆಚ್ಚು ಜನಮನ್ನಣೆ ಗಳಿಸಿಕೊಂಡಿದೆ. ಇದರ ನಡುವೆ ಬಹುಬೇಡಿಕೆಯ ಒನ್‌ಪ್ಲಸ್ 9 5G (OnePlus 9 5G) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತಗೊಳಿಸಿದ್ದು, ಈ ಮೂಲಕ ಕೈಗೆಟಕುವ ದರದಲ್ಲಿ ಈ ಫೋನ್ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆಫರ್ ವಿಷಯಕ್ಕೂ ಮುನ್ನ ಫೋನ್ ಪ್ರಮುಖ ಫೀಚರ್ಸ್ ತಿಳಿಯೋಣ ಬನ್ನಿ.

ಒನ್‌ಪ್ಲಸ್ 9 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.55ಇಂಚಿನ ಲಿಕ್ವಿಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಿದೆ. ಈ ಮೂಲಕ ಎಂತಹುದೇ ಪ್ರಖರತೆಯಲ್ಲೂ ಡಿಸ್‌ಪ್ಲೇ ನಲ್ಲಿ ಸ್ಟಷ್ಟ ಮಾಹಿತಿ ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ 1080x2400 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಇದರಲ್ಲಿದೆ. ಇದೆಲ್ಲದರ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆ ಪಡೆದುಕೊಂಡಿದೆ.
ಒನ್‌ಪ್ಲಸ್ 9 5G ಪ್ರೊಸೆಸರ್ ವಿವರ: ಸ್ನಾಪ್‌ಡ್ರಾಗನ್ 888 CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಅಡ್ರಿನೊ 660 ಜಿಪಿಯು ನೊಂದಿಗೆ ಉತ್ತಮವಾದ ಕಾರ್ಯಕ್ಷಮತೆ ನೀಡಲಿದೆ. ಜೊತೆಗೆ ಈ ಫೋನ್ 12 GB RAM ಮತ್ತು 256 GB ಇಂಟರ್ ಸ್ಟೋರೇಜ್ ಹಾಗೂ 8 GB RAM ಮತ್ತು 128 GB ಇಂಟರ್ ಸ್ಟೋರೇಜ್‌ನ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ.
ಒನ್‌ಪ್ಲಸ್ 9 5G ಕ್ಯಾಮೆರಾ ರಚನೆ: ಈ ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 48 MP ಪ್ರಾಥಮಿಕ ಕ್ಯಾಮೆರಾ, 50 MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 MP ತೃತೀಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿಗಾಗಿ 16 MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒನ್‌ಪ್ಲಸ್ 9 5G ಬ್ಯಾಟರಿ ಸಾಮರ್ಥ್ಯ: ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 1% ರಿಂದ 100% ವರೆಗೆ ಚಾರ್ಜ್ ಮಾಡಲು ಕೇವಲ 29 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಈ ಫೋನ್ 65W ವೇಗದ ಅಡಾಪ್ಟರ್ ಅನ್ನು ಹೊಂದಿದೆ. ಹಾಗಿದ್ರೆ, ಇದರ ಆಫರ್ ಬೆಲೆ ಎಷ್ಟಿದೆ ಎನ್ನುವುದನ್ನು ತಿಳಿಯೋಣ ಬನ್ನಿ.
ಒನ್‌ಪ್ಲಸ್ 9 5G ಫೋನ್‌ಗೆ ಆಫರ್ ಏನು? : ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್‌ನ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್‌ಗೆ 54,999 ರೂ. ಗಳ ಸಾಮಾನ್ಯ ಬೆಲೆ ಇದ್ದು, ಇದೀಗ ಈ ಫೋನ್‌ಗೆ 21% ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಈ ಮೂಲಕ ನೀವು 42,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಹಾಗೆಯೇ 8GB RAM ಹಾಗೂ 128GB ಇಂಟರ್ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ ಅನ್ನು 37,999 ರೂ. ಗಳಿಗೆ ಖರೀದಿ ಮಾಡಬಹುದಾಗಿದ್ದು, ಈ ಫೋನ್‌ನ ಸಾಮಾನ್ಯ ದರ 49,999 ರೂ.ಗಳಾಗಿದೆ. ಹಾಗೆಯೇ ಈ ಎರಡೂ ಫೋನ್‌ಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ಮೊಬಿಕ್ವಿಕ್ ಮೂಲಕ 2,000 ರೂ. ಗಳ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಅಂತೆಯೇ ಈ ಫೋನ್ ಅನ್ನು ಅಧಿಕೃತ ಒನ್‌ಪ್ಲಸ್ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








