Home
ಸುದ್ದಿಜಾಲ

ಭಾರೀ ಬೇಡಿಕೆ ಇದ್ದ ರೆಡ್ಮಿ 11 ಪ್ರೈಮ್ ಫೋನ್‌ಗೆ ಈಗ 36% ಡಿಸ್ಕೌಂಟ್!

ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ಫೋನ್‌ಗಳ ಜನಪ್ರಿಯತೆ ಕಾರಣ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ ಇರುವುದು. ಈ ನಡುವೆ ರೆಡ್ಮಿ ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಅನಾವರಣ ಮಾಡಿದೆ. ಅದರಂತೆ ಈಗ ಭಾರೀ ಬೇಡಿಕೆ ಸೃಷ್ಟಿಸಿದ್ದ ಫೋನ್‌ಗೆ ದೊಡ್ಡ ರಿಯಾಯಿತಿ ನೀಡಲಾಗಿದೆ.

ಹೌದು, ರೆಡ್ಮಿ ಕಂಪೆನಿಯ ರೆಡ್ಮಿ 11 ಪ್ರೈಮ್ (Redmi 11 Prime) ಫೋನ್‌ಗೆ ಇದೀಗ 36% ಡಿಸ್ಕೌಂಟ್‌ (Discount) ನೀಡಲಾಗಿದೆ. ಈ ಫೋನ್ 90Hz ನ ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಮೂಲಕ ಆಕರ್ಷಕ ನೋಟ ಪಡೆದುಕೊಂಡಿದೆ. ಜೊತೆಗೆ ಮೀಡಿಯಾ ಟೆಕ್‌ ಹಿಲಿಯೋ G99 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಗಮನಿಸೋಣ ಬನ್ನಿ.

ಭಾರೀ ಬೇಡಿಕೆ ಇದ್ದ ರೆಡ್ಮಿ 11 ಪ್ರೈಮ್ ಫೋನ್‌ಗೆ ಈಗ 36% ಡಿಸ್ಕೌಂಟ್!

ರೆಡ್ಮಿ 11 ಪ್ರೈಮ್ ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಹಾಗೂ ಇನ್ನಿತರೆ ಅಗತ್ಯ ಫೀಚರ್ಸ್‌ಗಳನ್ನು ತಿಳಿದುಕೊಳ್ಳೋಣ. ಅದರಂತೆ ಈ ಫೋನ್ 6.58 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 1080 x 2408 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 20:9 ಆಕಾರ ಅನುಪಾತ ಹೊಂದಿದೆ.

ಇದರೊಂದಿಗೆ 401ppi ಪಿಕ್ಸೆಲ್ ಸಾಂದ್ರತೆ ಹಾಗೂ 90Hz ನ ರಿಫ್ರೆಶ್ ರೇಟ್‌ ಆಯ್ಕೆ ಮೂಲಕ ಈ ಫೋನ್‌ ವಿಶೇಷ ಎನಿಸಿದ್ದು, ಕ್ಯಾಮೆರಾ ಉದ್ದೇಶಕ್ಕೆ ಮೇಲ್ಭಾಗದ ಮಧ್ಯದಲ್ಲಿ ಪಂಚ್ ಹೋಲ್ ಆಯ್ಕೆ ನೀಡಲಾಗಿದೆ. ಈ ಮೂಲಕ ಆಕರ್ಷಕ ವಿನ್ಯಾಸ ಹೊಂದಿರುವ ಈ ಫೋನ್‌ ರೆಡ್ಮಿ ಪ್ರಿಯರಿಗೆ ಅಚ್ಚು ಮೆಚ್ಚು. ಅದರಲ್ಲೂ ಈ ಬೆಲೆಗೆ ಈ ಫೀಚರ್ಸ್‌ ಹೆಚ್ಚಾಗಿಯೇ ಇದೆ.

ರೆಡ್ಮಿ 11 ಪ್ರೈಮ್ ಪ್ರೊಸೆಸರ್ ವಿವರ: ಈ ಫೋನ್ ಆಂತರಿಕ ಕಾರ್ಯಾಚರಣೆಗಳ ನಡೆಸಲು ಕಾರ್ಟೆಕ್ಸ್ A76 ಮತ್ತು ಕಾರ್ಟೆಕ್ಸ್ A55 ವಿನ್ಯಾಸಗಳೊಂದಿಗೆ ಆಕ್ಟಾ-ಕೋರ್ CPU ನಿರ್ವಹಿಸುತ್ತದೆ. ಇದುಮೀಡಿಯಾ ಟೆಕ್ ಹಿಲಿಯೋ G99 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಸಿಪಿಯುನ ಗರಿಷ್ಠ ಗಡಿಯಾರದ ವೇಗ 2.2GHz ಆಗಿದೆ. ಅಷ್ಟು ಮಾತ್ರವಲ್ಲದೆ ಮಾಲಿ-G57 MP2 GPU ಆಯ್ಕೆ ನೀಡಲಾಗಿದ್ದು, ಇದರೊಂದಿಗೆ 6 GB RAM ಉತ್ತಮ ಎನಿಸಿದೆ.

ರೆಡ್ಮಿ 11 ಪ್ರೈಮ್ ಕ್ಯಾಮೆರಾ ರಚನೆ: ಈ ರೆಡ್ಮಿ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ (Triple rear camera) ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್‌ನ f/1.8 ವೈಡ್-ಆಂಗಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ನ f/2.2 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 2ಮೆಗಾಪಿಕ್ಸೆಲ್‌ನ f/2.4 ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ನ f/2.0 ವೈಡ್ ಆಂಗಲ್ ಲೆನ್ಸ್ ಆಯ್ಕೆ ನೀಡಲಾಗಿದೆ.

ರೆಡ್ಮಿ 11 ಪ್ರೈಮ್ ಬ್ಯಾಟರಿ ಸಾಮರ್ಥ್ಯ: ಈ ಎಲ್ಲಾ ಫೀಚರ್ಸ್‌ಗಳೊಂದಿಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಈ ಮೂಲಕ ವಿಡಿಯೋ ವೀಕ್ಷಣೆ ಮಾಡುವಾಗ ಹಾಗೂ ಗೇಮ್‌ನಲ್ಲಿ ತಲ್ಲೀನವಾಗಿರುವಾಗ ಅತ್ಯುತ್ತಮವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ರೆಡ್ಮಿ 11 ಪ್ರೈಮ್ ಆಫರ್ ವಿವರ: ಇನ್ನು 6 GB RAM ಆಯ್ಕೆಯ ಫೋನ್‌ಗೆ 14,999ರೂ.ಗಳ ಸಾಮಾನ್ಯ ಬೆಲೆ ಇದ್ದು, ಆದರೆ ಇದನ್ನು ನೀವು 9,499ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 36% ಡಿಸ್ಕೌಂಟ್‌ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ನೀವು ಬ್ಯಾಂಕ್‌ ಕಾರ್ಡ್‌ಗಳಿ ಹಾಗೂ ವಿನಿಮಯ ಆಫರ್‌ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಭಾರೀ ಬೇಡಿಕೆ ಇದ್ದ ರೆಡ್ಮಿ 11 ಪ್ರೈಮ್ ಫೋನ್‌ಗೆ ಈಗ 36% ಡಿಸ್ಕೌಂಟ್!

ಇದರೊಂದಿಗೆ ರೆಡ್ಮಿ A2 ಫೋನ್‌ಗೂ ಭರ್ಜರಿ ಆಫರ್‌ ನೀಡಲಾಗಿದೆ. ಅಂದರೆ 8,999ರೂ.ಗಳ ಈ ಫೋನ್‌ ಅನ್ನು ನೀವು ಈಗ 6,382ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಫೋನ್‌ಗೂ ಸಹ 29% ಡಿಸ್ಕೌಂಟ್‌ ನೀಡಲಾಗಿದೆ. ಇದರೊಂದಿಗೆ ಬ್ಯಾಂಕ್‌ ಕಾರ್ಡ್‌ಗಳ ಮೇಲೂ ಆಫರ್‌ ನೀಡಲಾಗಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಲಭ್ಯ ಇರಲಿದೆ. ಇದು 6.52 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ.

Best Mobiles in India

English summary
The Redmi 11 Prime phone of the Redmi company has now been given a 36% discount. This phone has got a refresh rate of 90Hz and has got an attractive look through the triple rear camera setup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+