ಗೂಗಲ್ ಪಿಕ್ಸೆಲ್ 7 ಮೇಲೆ ಭಾರೀ ಡಿಸ್ಕೌಂಟ್; ಭಾರೀ ಹಣ ಉಳಿತಾಯ ಪಕ್ಕಾ!
ಇನ್ನೇನು ಕೆಲವೇ ದಿನಗಳಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಸೇಲ್‌ನಲ್ಲಿ (Flipkart Big Billion Sale) ಆರಂಭ ಆಗಲಿದೆ. ಈ ಸೇಲ್‌ನಲ್ಲಿ ಎಂದಿನಂತೆ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ನೀಡುವುದು ಸಾಮಾನ್ಯ ವಿಚಾರ. ಅದರಂತೆ ಈ ಸೇಲ್‌ನಲ್ಲಿ ಜನಪ್ರಿಯ ಗೂಗಲ್ ಪಿಕ್ಸೆಲ್ 7 (Google Pixel 7) ಸ್ಮಾರ್ಟ್‌ಫೋನ್ ಮೇಲೆ ದೊಡ್ಡ ರಿಯಾಯಿತಿ ನೀಡಲಾಗುತ್ತಿದೆ.
ಹೌದು, ಅಕ್ಟೋಬರ್ 4 ರಂದು ಭಾರತದಲ್ಲಿ ಗೂಗಲ್ ಪಿಕ್ಸೆಲ್ 8 (Google Pixel 8) ಲಾಂಚ್ ಆಗಲಿದ್ದು, ಇದಕ್ಕೂ ಮುನ್ನ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಗೂಗಲ್ ಪಿಕ್ಸೆಲ್ 7 ಫೋನ್ 40,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ಎಷ್ಟು? ಬ್ಯಾಂಕ್ ಆಫರ್ ಏನು? ಹಾಗೂ ಈ ಫೋನ್ ನ ಫೀಚರ್ಸ್ ಏನು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್: ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಸಮಯದಲ್ಲಿ ಗೂಗಲ್ ಪಿಕ್ಸೆಲ್ 7 ಅನ್ನು ಗಮನಾರ್ಹ ರಿಯಾಯಿತಿಯಲ್ಲಿ ನೀಡಲಾಗುತ್ತದೆ. ಹೆಚ್ಚುವರಿ ರಿಯಾಯಿತಿಗಳು ಗೂಗಲ್ ಪಿಕ್ಸೆಲ್ 7ನ ಬೆಲೆಯನ್ನು ಐಸಿಐಸಿಐ ಕ್ರೆಡಿಟ್ ಕಾರ್ಡ್ ಪಾವತಿಗಳ ಮೂಲಕ 36,999ರೂ.ಗಳಿಗೆ ಕಡಿಮೆ ಮಾಡಬಹುದು. ಜೊತೆಗೆ ಹಳೆಯ ಸ್ಮಾರ್ಟ್‌ಫೋನ್‌ಗಳ ಟ್ರೇಡ್-ಇನ್ ಮೌಲ್ಯದ ಮೇಲೆ ಹೆಚ್ಚುವರಿ 2,500ರೂ. ಸಹ ಸಿಗಲಿದೆ.
ಸದ್ಯಕ್ಕೆ ಈ ಫೋನ್ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 41,999ರೂ. ತೋರಿಸಲಾಗಿದೆ. ಆದಾಗ್ಯೂ, ನೀವು ನಿಮ್ಮ ಕಾರ್ಡ್‌ಗಳನ್ನು ಸದುಪಯೋಗಪಡಿಕೊಂಡರೆ ಕಡಿಮೆ ದರದಲ್ಲಿ ಈ ಫೋನ್ ನಿಮಗೆ ಸಿಗಲಿದೆ. ಇನ್ನು ವಿನಿಮಯ ವಿಚಾರಕ್ಕೆ ಬಂದರೆ ನಿಮ್ಮ ಹಳೆಯ ಫೋನ್‌ನ ಮೌಲ್ಯವನ್ನು ನೀವು ಹೆಚ್ಚಿನ ಬೆಲೆಗೆ ಮಾರಿದರೆ ಕಡಿಮೆ ಬೆಲೆಗೆ ಈ ಹೊಸ ಫೋನ್ ನಿಮ್ಮ ಕೈಸೇರಲಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್ ತಿಳಿಯೋಣ.
ಗೂಗಲ್ ಪಿಕ್ಸೆಲ್ 7 ಡಿಸ್‌ಪ್ಲೇ ವಿವರ : ಈ ಸ್ಮಾರ್ಟ್‌ಫೋನ್ 6.32 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ತೀಕ್ಷ್ಣವಾದ 2,400 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಇದರೊಂದಿಗೆ 90Hz ರಿಫ್ರೆಶ್ ರೇಟ್ ಆಯ್ಕೆ ಫೋನ್ ಬಳಕೆದಾರರಿಗೆ ಮೃದು ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ ಸೂಪರ್ ಬ್ರೈಟ್ ನೆಸ್ ಆಯ್ಕೆ ಈ ಫೋನ್‌ನಲ್ಲಿದೆ. ಅಂದರೆ, ಗರಿಷ್ಠ 1400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಹೊಂದುವ ಮೂಲಕ ಈ ಫೋನ್ ವಿಶೇಷ ಎನಿಸಿದೆ.
ಗೂಗಲ್ ಪಿಕ್ಸೆಲ್ 7 ಪ್ರೊಸೆಸರ್ ಮಾಹಿತಿ: ಈ ಫೋನ್ ಟೆನ್ಸರ್ G2 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ 8GB RAM ಮತ್ತು 256GB ನ ಇಂಟರ್ ಸ್ಟೋರೇಜ್ ಮಾತ್ರ ಬಳಕೆದಾರರು ಗೇಮಿಂಗ್ ಆಡುವಾಗ ವಿಡಿಯೋ ಸ್ಟ್ರೀಮಿಂಗ್ ಮಾಡುವಾಗ ಅತ್ಯದ್ಭುತ ಅನುಭವವನ್ನು ಪಡೆದುಕೊಳ್ಳಬಹುದು.
ಗೂಗಲ್ ಪಿಕ್ಸೆಲ್ 7 ಕ್ಯಾಮೆರಾ ರಚನೆ: ಈ ಫೋನ್ ನ ಕೇಂದ್ರಬಿಂದು ಎಂದರೆ ಕ್ಯಾಮೆರಾ. ಈ ಸ್ಮಾರ್ಟ್‌ಫೋನ್ f/1.9 ದ್ಯುತಿರಂಧ್ರ ಮತ್ತು 25mm ಅಗಲದ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, ವರ್ಸಾಟಿಲಿಟಿಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ನಿಮ್ಮ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿಯಲು 10.8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಗೂಗಲ್ ಪಿಕ್ಸೆಲ್ 7 ಬ್ಯಾಟರಿ ಹಾಗೂ ಇತರೆ: ಕೊನೆಯದಾಗಿ ಈ ಫೋನ್ 4,355mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಅಗಿದ್ದು, ಇದು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ .ಅಷ್ಟೇ ಅಲ್ಲದೆ ಫಾಸ್ಟ್‌ಚಾರ್ಜಿಂಗ್ ಬೆಂಬಲ ಸಹ ಇದ್ದು, ಈ ಮೂಲಕ ಕ್ಷಣ ಮಾತ್ರದಲ್ಲಿ ಫೋನ್ ಬ್ಯಾಟರಿ ಭರ್ತಿ ಆಗಲಿದೆ. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac/6e, ಟ್ರೈ-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.2, ಡ್ಯುಯಲ್ ಬ್ಯಾಂಡ್ GNSS ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ.


Click it and Unblock the Notifications








