ಐಫೋನ್ 15 ಬಿಡುಗಡೆ ಹಿನ್ನೆಲೆ ಈ ಐಫೋನ್‌ಗೆ ಭರ್ಜರಿ ಡಿಸ್ಕೌಂಟ್... ಖರೀದಿಗೆ ನಾಲ್ಕು ಕಾರಣಗಳಿವು!
ಐಫೋನ್‌ಗಳಿಗೆ (iPhone) ಭಾರೀ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ಹೆಚ್ಚಿನ ಕ್ರೇಜ್ ಇದ್ದು, ಈ ನಡುವೆ ಐಫೋನ್ 14 ಪ್ಲಸ್(iPhone 14 Plus) ಗೆ ದೊಡ್ಡ ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಮೂಲಕ ನೀವು ಈ ಫೋನ್ ಖರೀದಿ ವೇಳೆ ಬೇಡ ಅಂದ್ರೂ ಸಹ ನಿಮ್ಮ ಪಾಕೆಟ್‌ನಲ್ಲಿ ಹಣ ಉಳಿತಾಯ ಆಗಲಿದೆ.
ಹೌದು, ಐಫೋನ್‌ಗಳು ಯಾವಾಗಲೂ ದುಬಾರಿ ಬೆಲೆ ಹೊಂದಿರುತ್ತವೆ. ಆದರೆ ಬೆಲೆಗೆ ತಕ್ಕ ಫೀಚರ್ಸ್ ಆಯ್ಕೆ ಇದ್ದು, ಇನ್ನೇನು ಕೆಲವು ವಾರಗಳಲ್ಲಿ ಐಫೋನ್ 15(iPhone 15) ಫೋನ್‌ಗಳು ಮಾರುಕಟ್ಟೆಯಲ್ಲಿ ಆರ್ಭಟಿಸಲಿವೆ. ಇದರ ಬೆನ್ನಲ್ಲೇ 89,900ರೂ. ಬೆಲೆಯ ಐಫೋನ್ 14 ಪ್ಲಸ್‌ಗೆ ರಿಯಾಯಿತಿ ನೀಡಲಾಗಿದೆ. ಈ ಫೋನ್ A16 ಬಯೋನಿಕ್ ಚಿಪ್‌ಸೆಟ್ ಬಲ ಹೊಂದಿದ್ದು, 512GB ಇಂಟರ್ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ವಿವರ ಹಾಗೂ ಇದನ್ನು ಖರೀದಿ ಮಾಡಲು ಇರುವ ನಾಲ್ಕು ಪ್ರಮುಖ ಕಾರಣಗಳನ್ನು ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 14 ಪ್ಲಸ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 76,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ನೀವು 12,901 ರೂ.ಗಳನ್ನು ಉಳಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಅಂದರೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ 4,000ರೂ.ಗಳ ರಿಯಾಯಿತಿ ಸಿಗಲಿದ್ದು, ಇದರ ನಂತರ 72,999ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ.
ಇಷ್ಟು ಮಾತ್ರವಲ್ಲದೆ ಐಫೋನ್ 12 ನಂತಹ ಹಳೆಯ ಫೋನ್ ಅನ್ನು ಹೊಂದಿದ್ದು, ಈ ಐಫೋನ್‌ಗೆ ಅಪ್‌ಗ್ರೇಡ್ ಮಾಡಲು ನೀವು ಆಸಕ್ತಿ ಹೊಂದಿದ್ದರೆ, 48,999ರೂ.ಗಳ ವರೆಗಿನ ವಿನಿಮಯ ಬೋನಸ್ ಅನ್ನು ಸಹ ನೀಡಲಾಗುತ್ತಿದೆ. ಅಂದರೆ ನಿಮ್ಮ ಹಳೆಯ ಸ್ಮಾರ್ಟ್ ಡಿವೈಸ್ ಉತ್ತಮ ಸ್ಥಿತಿಯಲ್ಲಿದ್ದರೆ, ನೀವು ಸಮಂಜಸವಾದ ಟ್ರೇಡ್-ಇನ್ ಮೌಲ್ಯವನ್ನು ಪಡೆಯಬಹುದು. ಇದು ಐಫೋನ್ 14 ಪ್ಲಸ್‌ನ ಒಟ್ಟಾರೆ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಹಾಗಿದ್ರೆ, ಈ ಬನ್ನಿ ಈ ಫೋನ್ ಅನ್ನು ಖರೀದಿ ಮಾಡಲು ಇರುವ ನಾಲ್ಕು ಕಾರಣಗಳನ್ನು ನೋಡೋಣ.
ದೊಡ್ಡ ಡಿಸ್‌ಪ್ಲೇ ಆಯ್ಕೆ: ಐಫೋನ್ 14 ಪ್ಲಸ್ 6.7 ಇಂಚಿನ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದ್ದು, ಐಫೋನ್ 14 ನ 6.1-ಇಂಚಿನ ಡಿಸ್‌ಪ್ಲೇಗಿಂತ ಗಮನಾರ್ಹ ಹೆಚ್ಚಿನದಾಗಿದೆ. ಈ ದೊಡ್ಡ ಡಿಸ್‌ಪ್ಲೇ ಒಟ್ಟಾರೆ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಅಂದರೆ ಮಲ್ಟಿಮೀಡಿಯಾ ಬಳಕೆ, ಗೇಮಿಂಗ್ ಮತ್ತು ಇತರೆ ಕಾರ್ಯಗಳಲ್ಲಿ ತಲ್ಲೀನಗೊಳಿಸುವ ಅನುಭವ ನಿಮ್ಮದಾಗಲಿದೆ. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಈ ದೊಡ್ಡ ಡಿಸ್‌ಪ್ಲೇ ಆಯ್ಕೆ ಹಲವು ಅನುಕೂಲ ಮಾಡಿಕೊಡಲಿದೆ.
A16 ಬಯೋನಿಕ್ ಚಿಪ್: ಇನ್ನು ಮತ್ತೊಂದು ಕಾರಣ ಏನೆಂದರೆ ಈ ಫೋನ್ A16 ಬಯೋನಿಕ್ ಚಿಪ್ ಅನ್ನು ಹೊಂದಿರುವುದು. ಈ ಹಿಂದೆ ಲಾಂಚ್ ಆಗಿದ್ದ ಅಂದರೆ ಐಫೋನ್ 13 ನ A15 ಬಯೋನಿಕ್ ಚಿಪ್‌ನ ಮೇಲೆ ಗಮನಾರ್ಹವಾದ ಜಿಗಿತವನ್ನು ಇದು ಸೂಚಿಸಲಿದೆ. ಈ ಮೂಲಕ 40% ರಷ್ಟು ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ. ಇದರಿಂದಾಗಿ ಬಳಕೆದಾರರು ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆ, ತ್ವರಿತ ಆಪ್ ಲಾಂಚ್ ಸೇರಿದಂತೆ ಸುಧಾರಿತ ಸೌಲಭ್ ಲಭ್ಯ ಆಗಲಿದೆ.
ವರ್ಧಿತ ಕ್ಯಾಮೆರಾ ಆಯ್ಕೆ: ಗಮನಾರ್ಹವಾಗಿ ಐಫೋನ್ 14 ಪ್ಲಸ್‌ನ ಕ್ಯಾಮೆರಾ ಆಯ್ಕೆಯಲ್ಲಿ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ OIS ಸೆನ್ಸರ್ ಹೊಂದಿದ್ದು, ಹೆಚ್ಚಿನ ಬೆಳಕಿನಲ್ಲೂ ಫೋಟೋ ಸೆರೆಹಿಡಿಯಲು ಈ ಸೆನ್ಸರ್ ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಉತ್ತಮವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟಕ್ಕೆ ಅನುಕೂಲಕರ ಆಯ್ಕೆ ನೀಡಲಿದೆ. ಇದರೊಂದಿಗೆ ಸಿನಿಮ್ಯಾಟಿಕ್ ಮೋಡ್ ಸಹ ಇದ್ದು, ಹಲವು ಬಳಕೆದಾರರಿಗೆ ಇದು ಇಷ್ಟದ ಆಯ್ಕೆಯಾಗಿದೆ.

ಉತ್ತಮ ಬ್ಯಾಟರಿ ಬ್ಯಾಕಪ್: ನಾಲ್ಕನೇ ಕಾರಣ ಏನೆಂದರೆ ಐಫೋನ್ 14 ಪ್ಲಸ್ ತನ್ನ ಒಡಹುಟ್ಟಿದ ಐಫೋನ್ 14 ಅನ್ನು ಈ ವಿಚಾರದಲ್ಲಿ ಮೀರಿಸಿದೆ. ಅಂದರೆ ಈ ಫೋನ್ 4,323mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಉತ್ತಮ ಬ್ಯಾಕಪ್ ನೀಡಲಿದೆ. ಆದರೆ, ಐಫೋನ್ 14 3,279mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ವಿಶೇಷ ಸ್ಥಾನದಲ್ಲಿ ಈ ಫೋನ್ ನಿಲ್ಲಲಿದೆ.


Click it and Unblock the Notifications








