Home
ಸುದ್ದಿಜಾಲ

OnePlus: ಒನ್‌ಪ್ಲಸ್‌ ಇಯರ್‌ಬಡ್ಸ್‌, ಟೂಲ್ಸ್‌ಗಳ ಮೇಲೆ ಶೇ.100 ರಷ್ಟು ರಿಯಾಯಿತಿ! ಆದರೆ...

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus smartphone) ಬಳಕೆದಾರರಿಗೆ ವಿವಿಧ ರೀತಿಯಲ್ಲಿ ವಿವಿಧ ಪ್ರಯೋಜನ ನೀಡುತ್ತವೆ. ಈ ನಡುವೆ ಒನ್‌ಪ್ಲಸ್‌ ಇತರೆ ಟೂಲ್ಸ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಹೌದು, ಒನ್‌ಪ್ಲಸ್‌ ರೆಡ್ ಕೇಬಲ್ ಕ್ಲಬ್ ಸದಸ್ಯರಿಗೆ ರಿಯಾಯಿತಿ ಕೊಡುಗೆಗಳನ್ನು ಘೋಷಣೆ ಮಾಡಿದೆ. ಒನ್‌ಪ್ಲಸ್‌ ಉತ್ಪನ್ನವನ್ನು ಖರೀದಿಸಿದ ನಂತರ ನೀವು ಗಳಿಸಿರಬಹುದಾದ ರೆಡ್‌ ಕಾಯಿನ್‌ (Red Coin) ಅನ್ನು ನೀವು ಬಳಕೆ ಮಾಡಿದ್ರೆ ಹಲವಾರು ಬಿಡಿಭಾಗಗಳ ಮೇಲೆ 100 ಪ್ರತಿಶತ ರಿಯಾಯಿತಿ ಕೂಪನ್‌ಗಳನ್ನು ಪಡೆಯಬಹುದಾಗಿದೆ. ಹಾಗಿದ್ರೆ, ಏನಿದು ವಿಶೇಷ ಆಫರ್?, ಇದರ ಬಳಕೆ ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್‌ ಇಯರ್‌ಬಡ್ಸ್‌, ಟೂಲ್ಸ್‌ಗಳ ಮೇಲೆ ಶೇ.100 ರಷ್ಟು ರಿಯಾಯಿತಿ! ಆದರೆ...

ಒನ್‌ಪ್ಲಸ್‌ ಟೂಲ್ಸ್‌ಗಳಿಗೆ ಆಫರ್: ಒನ್‌ಪ್ಲಸ್‌ ರೆಡ್ ಕೇಬಲ್ ಕ್ಲಬ್ ಸದಸ್ಯರಿಗೆ ರಿಯಾಯಿತಿ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಯಾವುದೇ ಒನ್‌ಪ್ಲಸ್‌ ಉತ್ಪನ್ನವನ್ನು ಖರೀದಿಸಿದ ನಂತರ ನೀವು ಗಳಿಸಿರಬಹುದಾದ ರೆಡ್‌ ಕಾಯಿನ್ ಅನ್ನು ನೀವು ಬಳಕೆ ಮಾಡಿ ಹಲವಾರು ಬಿಡಿಭಾಗಗಳ ಮೇಲೆ 100 ಪ್ರತಿಶತ ರಿಯಾಯಿತಿ ಕೂಪನ್‌ಗಳನ್ನು ಈ ಮೂಲಕ ನೀಡಲಾಗುತ್ತಂತೆ. ನೀವು ಎಷ್ಟು ರೆಡ್‌ಕಾಯಿನ್‌ಗಳನ್ನು ಹೊಂದಿದ್ದೀರಿ ಎಂಬುದರ ಆಧಾರದ ಮೇಲೆ ವೈರ್‌ಲೆಸ್ ಇಯರ್‌ಬಡ್‌ಗಳು, ಕೇಸ್‌ಗಳು ಮತ್ತು ಚಾರ್ಜಿಂಗ್ ಕೇಬಲ್‌ಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಖರೀದಿಸಲು ಸಾಧ್ಯವಾಗುತ್ತದೆ.

ಒನ್‌ಪ್ಲಸ್‌ ತನ್ನ ಕೆಲವು ಉತ್ಪನ್ನಗಳು ರೆಡ್‌ಕಾಯಿನ್‌ ಬಳಸಿಕೊಂಡು 100 ಪ್ರತಿಶತ ರಿಯಾಯಿತಿಯ ಕೊಡುಗೆಯಲ್ಲಿ ಲಭ್ಯವಿರುತ್ತದೆ ಎಂದು ಘೋ‍ಷಣೆ ಮಾಡಿದೆ. ರೆಡ್‌ಕಾಯಿನ್‌ ವರ್ಚುವಲ್ ಟೋಕನ್‌ಗಳಾಗಿದ್ದು, ಅವುಗಳನ್ನು ಒನ್‌ಪ್ಲಸ್ ರೆಡ್‌ ಕೇಬಲ್‌ ಕ್ಲಬ್‌, ಒನ್‌ಪ್ಲಸ್‌ ವೆಬ್‌ಸೈಟ್ ಮತ್ತು ಒನ್‌ಪ್ಲಸ್‌ ಸ್ಟೋರ್ ಆಪ್‌ಗಳ ಮೂಲಕ ಗಳಿಸಬಹುದು ಮತ್ತು ಬಳಕೆ ಮಾಡಬಹುದಾಗಿದೆ. ಒಂದು ರೆಡ್‌ಕಾಯಿನ್‌ 1 ರೂ. ಗೆ ಸಮಾನವಾಗಿರುತ್ತದೆ. ಇದರರ್ಥ ನೀವು 3,000 ರೂ. ಉತ್ಪನ್ನವನ್ನು ಖರೀದಿಸಲು ಬಯಸಿದರೆ, 3 ಸಾವಿರ ರೆಡ್‌ಕಾಯಿನ್‌ ಅನ್ನು ಹೊಂದಿರಬೇಕು.

ಒನ್‌ಪ್ಲಸ್‌ ಇಯರ್‌ಬಡ್ಸ್‌, ಟೂಲ್ಸ್‌ಗಳ ಮೇಲೆ ಶೇ.100 ರಷ್ಟು ರಿಯಾಯಿತಿ! ಆದರೆ...

ಈ ಆಫರ್‌ನಲ್ಲಿ ಏನೆಲ್ಲಾ ಖರೀದಿ ಮಾಡಬಹುದು?: ಗ್ರಾಹಕರು ಒನ್‌ಪ್ಲಸ್‌ ಬಡ್ಸ್ 3, ಒನ್‌ಪ್ಲಸ್‌ ನಾರ್ಡ್ ಬಡ್ಸ್ 2r, ಒನ್‌ಪ್ಲಸ್‌ 12 ವಾಲ್‌ನಟ್ ಕೇಸ್, 80W ಕಾರ್ ಚಾರ್ಜರ್, ಪಯೋನೀರ್ ಶೋಲ್ಡರ್ ಬ್ಯಾಗ್, ಒನ್‌ಪ್ಲಸ್‌ ನಾರ್ಡ್‌ CE 4 ಸ್ಯಾಂಡ್‌ಸ್ಟೋನ್ ಬಂಪರ್ ಕೇಸ್, ಯುಎಸ್‌ಬಿ-ಎ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಉತ್ಪನ್ನಗಳ ಸೀಮಿತ ಘಟಕಗಳು ಲಭ್ಯವಿವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಆದ್ದರಿಂದ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಲು ಸಾಕಷ್ಟು ನಾಣ್ಯಗಳನ್ನು ಹೊಂದಿರುವವರು ತ್ವರಿತವಾಗಿ ಈಗಲೇ ಖರೀದಿ ಮಾಡಿ. ಈ ಆಫರ್ ಮೇ 17 ರಂದು ಅಂದರೆ ಇಂದು ಮಧ್ಯಾಹ್ನ 12:00 ಗಂಟೆಗೆ ಲೈವ್ ಆಗಲಿದೆ.

ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ಬೆಲೆ?: ಒನ್‌ಪ್ಲಸ್‌ ಬಡ್ಸ್ 3 ಅನ್ನು ಒನ್‌ಪ್ಲಸ್‌ ಅಧಿಕೃತ ವೆಬ್‌ಸೈಟ್‌ನಲ್ಲಿ 5,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ 2r ಗೆ 1,999 ರೂ. ಗಳು ಹಾಗೂ ಯುಎಸ್‌ಬಿ- ಎ ಮತ್ತು ಟೈಪ್ ಸಿ ಕೇಬಲ್ ಕ್ರಮವಾಗಿ 1,099 ರೂ.ಗಳು, 849 ರೂ.ಗಳ ಬೆಲೆ ಹೊಂದಿದೆ. ಇನ್ನು ಕಾರ್ ಚಾರ್ಜರ್ 1,999 ರೂ.ಗೆ ಸೇಲ್‌ ಆಗುತ್ತಿದ್ದು, ನಾರ್ಡ್‌ CE 4 ಕೇಸ್ 799 ರೂ.ಗಳಿಗೆ ಲಭ್ಯ ಇದೆ. ಇದರ ಜೊತೆಗೆ ಒನ್‌ಪ್ಲಸ್ 12 ವಾಲ್‌ನಟ್ ಕೇಸ್ ಬೆಲೆ 1,299 ರೂ. ಗಳಾಗಿದೆ.

ಒನ್‌ಪ್ಲಸ್‌ ಇಯರ್‌ಬಡ್ಸ್‌, ಟೂಲ್ಸ್‌ಗಳ ಮೇಲೆ ಶೇ.100 ರಷ್ಟು ರಿಯಾಯಿತಿ! ಆದರೆ...

ಕಂಪನಿಯ ಹೊಸ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್ ಅನ್ನು ಸ್ವಲ್ಪ ಕಡಿಮೆ ಬೆಲೆಗೆ ಖರೀದಿಸಲು ಬಯಸುವ ಜನರು ಅಮೆಜಾನ್‌ ರಿಯಾಯಿತಿ ಪಡೆಯಬಹುದು. ಇ-ಕಾಮರ್ಸ್ ಸೈಟ್ ತನ್ನ ಮೂಲ ಬೆಲೆಗೆ ಫ್ಲ್ಯಾಗ್‌ಶಿಪ್ ಅನ್ನು ಮಾರಾಟ ಮಾಡುತ್ತಿದೆ. ಆದರೆ, ಬ್ಯಾಂಕ್ ಕಾರ್ಡ್‌ಗಳಲ್ಲಿ 2,000ರೂ. ಗಳ ಆಫರ್ ಹಾಗೂ ಎಮ್‌ಎಂಐ ಆಫರ್ ಪಡೆಯಬಹುದಾಗಿದೆ. ಒನ್‌ಪ್ಲಸ್‌ 12 ಪ್ರಸ್ತುತ ಅಮೆಜಾನ್‌ನಲ್ಲಿ 64,999 ರೂ. ಗಳಿಗೆ ಸೇಲ್‌ ಆಗುತ್ತಿದೆ.

Best Mobiles in India

English summary
OnePlus has announced discount offers for Red Cable Club members. 100 percent discount coupons on various accessories can be availed if you use the Red Coin that you might have earned after buying a OnePlus product.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+