ಒಪ್ಪೋ F21 ಪ್ರೊ ಫೋನ್ ದರದಲ್ಲಿ ಇಳಿಕೆ; ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ!
ಒಪ್ಪೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯನ್ನು ಹಾಗೂ ಗ್ರಾಹಕರ ಮನಸ್ಸನ್ನು ಆಗ್ರಮಿಸಿಕೊಂಡಿವೆ ಎಂದೇ ಹೇಳಬಹುದು. ಯಾಕೆಂದರೆ ಕೈಗೆಟಕುವ ದರದಲ್ಲಿ ಲಭ್ಯವಾಗುವ ಈ ಫೋನ್‌ಗಳು ಬೆಲೆಗೂ ಮೀರಿಸಿದ ಫೀಚರ್ಸ್‌ಗಳನ್ನು ಪಡೆದುಕೊಂಡಿರುತ್ತವೆ. ಅದರಂತೆ ನೀವು ಒಪ್ಪೋದ ಈ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದು.
ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್ ಇರುವ ಫೋನ್‌ಗಳು ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತ ಬರುತ್ತಿದ್ದು, ಅದರ ಸಾಲಿಗೆ ಒಪ್ಪೋ F21 ಪ್ರೊ(Oppo F21 Pro ) ಸಹ ಸೇರಲಿದೆ. ಈ ಫೋನ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್ ಅನ್ನು ಅಗ್ಗದ ದರಕ್ಕೆ ಖರೀದಿ ಮಾಡುವುದು ಹೇಗೆ?, ಇದರ ಪ್ರಮುಖ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

15,000 ರೂ. ಕ್ಕಿಂತಲೂ ಕಡಿಮೆ ಬೆಲೆಗೆ ಒಪ್ಪೋ F21 ಪ್ರೊ
ಒಪ್ಪೋ F21 ಪ್ರೊ ಅನ್ನು 2022 ರಲ್ಲಿ ಲಾಂಚ್ ಮಾಡಲಾಗಿದ್ದು, ಅತ್ಯುತ್ತಮವಾದ ಕಾರ್ಯಕ್ಷಮತೆಯೊಂದಿಗೆ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಅದರಂತೆ ಉತ್ತಮ ಕ್ಯಾಮೆರಾ ಹಾಗೂ ಕಾರ್ಯಕ್ಷಮತೆ ಮೇಲೆ ಕೇಂದ್ರೀಕರಿಸಿಕೊಂಡು ಮೊಬೈಲ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈ ಫೋನ್ ಸೂಕ್ತ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಬೆಲೆ ಕಡಿತವಾಗಿದ್ದು, ಈ ಮೂಲಕ ನೀವು 15,000 ರೂ. ಕ್ಕಿಂತಲೂ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.
ಒಪ್ಪೋ F21 ಪ್ರೊ ಗೆ ಆಫರ್ ಏನು?
ಫ್ಲಿಪ್‌ಕಾರ್ಟ್ ಡೀಲ್ ನಲ್ಲಿ ಈ ಫೋನ್ 28,000 ರೂ. ಗಳ ಮೂಲ ಬೆಲೆಯಿಂದ 25% ರಿಯಾಯಿತಿ ಪಡೆದುಕೊಂಡಿದ್ದು, 20,999 ರೂ. ಗಳಿಗೆ ಲಭ್ಯವಿದೆ. ಇದಿಷ್ಟೇ ಅಲ್ಲದೆ ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಫೋನ್ ಖರೀದಿಯ ಮೇಲೆ 2,000 ರೂ. ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, 18,999ರೂ. ಗಳಿಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.

ಇದರ ಹೊರತಾಗಿಯೂ ಇನ್ನೂ ಹೆಚ್ಚಿನ ಆಫರ್ ಬೇಕು ಎಂದರೆ ವಿನಿಮಯ ಅಫರ್ ಕಡೆ ಕಣ್ಣಾಡಿಸಬಹದು. ಈ ಆಫರ್‌ನಲ್ಲಿ ನಿಮ್ಮ ಸುಸ್ಥಿತಿಯಲ್ಲಿರುವ ಫೋನ್ ಅನ್ನು ಸೇಲ್ ಮಾಡುವ ಮೂಲಕ ಗರಿಷ್ಠ 20,000 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಒಪ್ಪೋ F21 ಪ್ರೊ ಅನ್ನು ಅತ್ಯಂತ ಅಗ್ಗದ ದರದಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅದಾಗ್ಯೂ ಬ್ಯಾಂಕ್ ಆಫರ್ ಹಾಗೂ ವಿನಿಮಯ ಆಫರ್ ಮೂಲಕ ಅಂದಾಜು15,000 ರೂ. ಗಳಿಗಾದರೂ ಈ ಫೋನ್ ಅನ್ನು ಕೊಂಡುಕೊಳ್ಳಬಹುದಾಗಿದೆ.
ಒಪ್ಪೋ F21 ಪ್ರೊ ಫೀಚರ್ಸ್
ಒಪ್ಪೋ F21 ಪ್ರೊ ಫೋನ್ 2022, ಏಪ್ರಿಲ್ ತಿಂಗಳಲ್ಲಿ ಲಾಂಚ್ ಆಗಿದ್ದು, 6.43 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್, 1080x2400 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 20:9 ರ ಆಕಾರ ಅನುಪಾತವನ್ನು ಹೊಂದಿದೆ. ಜೊತೆಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ ಆಂಡ್ರಾಯ್ಡ್ 11 ಮೂಲಕ ರನ್ ಆಗುತ್ತದೆ. ಇದರೊಂದಿಗೆ 8GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿದೆ.

ಈ ಫೋನ್‌ನ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 64 ಮೆಗಾಪಿಕ್ಸೆಲ್ (f/1.7) ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ (f/2.4) ಮ್ರೈಕ್ರೋಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿಗಾಗಿ ಈ ಫೋನ್ 32 ಮೆಗಾಪಿಕ್ಸೆಲ್ ಹೊಂದಿದೆ. ಇದರೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಸೂಪರ್ ವೂಕ್ ವೇಗದ ಚಾರ್ಜಿಂಗ್ ನೊಂದಿಗೆ ಈ ಫೋನ್ ಪ್ಯಾಕ್ ಆಗಿದೆ.


Click it and Unblock the Notifications








