Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ: ಭಾರೀ ಹಣ ಉಳಿತಾಯ!

ಸ್ಯಾಮ್‌ಸಂಗ್‌ ಫೋನ್‌ಗಳು (Samsung phone) ಆಪಲ್‌ ನಂತರದ ಸ್ಥಾನವನ್ನು ಪಡೆದುಕೊಂಡಿವೆ. ಈ ಫೋನ್‌ಗಳಿಗೆ ಭಾರತದಲ್ಲಿ ಅಗಾದವಾದ ಬೇಡಿಕೆ ಇದ್ದು, ಈ ನಡುವೆ ಕೆಲವು ಇ-ಕಾಮರ್ಸ್‌ ಸೈಟ್‌ ಮೂಲಕ ಈ ಫೋನ್‌ಗಳಿಗೆ ಆಫರ್‌ ಸಹ ನೀಡಲಾಗುತ್ತದೆ. ಅದರಂತೆ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಇರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 (Samsung Galaxy A34 ) ಫೋನ್‌ಗೆ ದೊಡ್ಡ ರಿಯಾಯಿತಿ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಫೋನ್‌ ಅನ್ನು ಖರೀದಿ ಮಾಡಬೇಕು ಎಂದರೆ ಈ ಸುವರ್ಣಾವಕಾಶ ಮಿಸ್‌ ಮಾಡಿಕೊಳ್ಳಬೇಡಿ. ಸ್ಯಾಮ್‌ಸಂಗ್ ಇಂಡಿಯಾದ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಈ ಫೋನ್‌ಗೆ ರಿಯಾಯಿತಿ ಘೋ‍ಷಣೆ ಮಾಡಲಾಗಿದ್ದು, ಈ ಫೋನ್‌ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹಾಗೂ ಸ್ಟೀರಿಯೋ ಸ್ಪೀಕರ್‌ ಸೇರಿದಂತೆ ವಿ‍ಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಆಫರ್‌ ಬೆಲೆ ಎಷ್ಟು?, ಫೀಚರ್ಸ್‌ ಏನು? ಎಂಬ ಬಗ್ಗೆ ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಗೆ ಭರ್ಜರಿ ಆಫರ್‌: ಮಧ್ಯಮ ಶ್ರೇಣಿಯ ಈ ಫೋನ್ ಇತ್ತೀಚೆಗೆ ಲಾಂಚ್‌ ಆಗಿದ್ದು, ಈಗ ಈ ಫೋನ್‌ 4,000 ರೂಪಾಯಿಗಳ ಬೆಲೆ ಕಡಿತ ಕಂಡಿದೆ. ಈ ಮೂಲಕ ನೀವು ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್‌ ಮೂಲಕ ಕೇವಲ 26,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಮೂವತ್ತು ಸಾವಿರದ ಒಳಗೆ ಲಭ್ಯ ಇರುವ ಫೋನ್‌ಗಳಲ್ಲಿ ಈ ಫೋನ್‌ ಉತ್ತಮ ಆಯ್ಕೆಯಾಗಿದೆ.

ಈ ಫೋನ್ ಎರಡು ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದ್ದು, ಈಗ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿರುವ ಫೋನ್ 6GB + 128GB ವೇರಿಯಂಟ್‌ನದ್ದಾಗಿದೆ. ಈ 5G ಫೋನ್ ಅನ್ನು ಇತ್ತೀಚೆಗೆ ಭಾರತದಲ್ಲಿ 30,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಾಂಚ್‌ ಮಾಡಲಾಗಿತ್ತು. ಈ ಡಿಸ್ಕೌಂಟ್‌ನೊಂದಿಗೆ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಖರೀದಿ ಮಾಡಬೇಕು ಎಂದರೆ ಕೆಲವು ಬ್ಯಾಂಕ್‌ ಕಾರ್ಡ್ ಬಳಕೆ ಮಾಡಬಹುದು.

ಈ ಫೋನ್‌ ಅನ್ನು ಈ ಬೆಲೆಯಲ್ಲಿ ಖರೀದಿ ಮಾಡಲು ಯೋಗ್ಯವೇ?: ಆಗಾಗ್ಗೆ ಎಲ್ಲಾ ಫೋನ್‌ಗಳಿಗೂ ಸಹ ಆಫರ್ ನೀಡಲಾಗುತ್ತದೆ. ಆದರೆ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಕಣ್ಣು ಮುಚ್ಚಿಕೊಂಡು ಖರೀದಿ ಮಾಡುವುದು ತಪ್ಪಾಗುತ್ತದೆ. ಪರಿಣಾಮ ಮುಂದಿನ ದಿನಗಳಲ್ಲಿ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಈ ಬೆಲೆಗೆ ಈ ಫೋನ್‌ ಸಿಗುತ್ತಿದೆ ಎಂದರೆ ಅದು ಯೋಗ್ಯವೇ ಎಂದು ಅರಿತುಕೊಳ್ಳುವುದು ಉತ್ತಮ.

ಈ ಫೋನ್ ಬಲವಾದ ಬಾಳಿಕೆ, ದೀರ್ಘಾವಧಿಯ ಆಂಡ್ರಾಯ್ಡ್‌ ಸಾಫ್ಟ್‌ವೇರ್ ಬೆಂಬಲ, ಅತ್ಯುತ್ತಮ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ ಮತ್ತು ವಿಶ್ವಾಸಾರ್ಹ ಸಾಮಾನ್ಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಆದಾಗ್ಯೂ, ಈ ಫೋನ್‌ನಲ್ಲಿ ಚಾರ್ಜರ್ ಅನ್ನು ನೀಡಲಾಗುವುದಿಲ್ಲ. ಇದರಿಂದಾಗಿ ಮನೆಯಲ್ಲಿ ಇರುವ ಯಾವುದೇ ಚಾರ್ಜರ್ ಅನ್ನು ಬಳಕೆ ಮಾಡಬಹುದು. ಚಾರ್ಜಿಂಗ್ ವೇಗವನ್ನು ಬಯಸುವವರು ಸ್ಯಾಮ್‌ಸಂಗ್ ಚಾರ್ಜರ್ ಅನ್ನು ಖರೀದಿಸಬೇಕು. ಕಂಪನಿಯು 25W ವೇಗದ ಚಾರ್ಜರ್‌ಗೆ ಬೆಂಬಲವನ್ನು ಒದಗಿಸಿದೆ. ಇದರೊಂದಿಗೆ ಈ ಫೋನ್‌ನ ಕ್ಯಾಮರಾ ಕಾರ್ಯಕ್ಷಮತೆ ಉತ್ತಮವಾಗಿದ್ದು, ವಿಡಿಯೋವನ್ನು ರೆಕಾರ್ಡ್ ಹಾಗೂ ಫೋಟೋ ಸೆರೆಹಿಡಿಯಲು ಅತ್ಯುತ್ತಮವಾದ ಆಯ್ಕೆಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಅಮೋಲೆಡ್‌ FHD+ ಡಿಸ್‌ಪ್ಲೇ ಹೊಂದಿದ್ದು, ಈ ಮೂಲಕ ವಿಡಿಯೋ ವೀಕ್ಷಣೆಯಲ್ಲಿ ಹಾಗೂ ಗೇಮಿಂಗ್‌ ಬಳಕೆಯಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಫೋನ್ ನಾಲ್ಕು ವರ್ಷಗಳ ಆಂಡ್ರಾಯ್ಡ್‌ ಓಎಸ್‌ ಬೆಂಬಲವನ್ನು ಮತ್ತು ಐದು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡಲಿದೆ.

ಉಳಿದಂತೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರಲ್ಲಿ OIS ಜೊತೆಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌, ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್‌ ಮತ್ತು 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ..

ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರುವ ಈ ಫೋನ್ ಉತ್ತಮ ಬ್ಯಾಕಪ್‌ ಬರವಸೆ ನೀಡುತ್ತದೆ. ಹಾಗೆಯೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP67 ರೇಟಿಂಗ್ ಆಯ್ಕೆ ಕೂಡ ಇದ್ದು, ಸ್ಯಾಮ್‌ಸಂಗ್‌ ಸ್ಟೀರಿಯೋ ಎಫೆಕ್ಟ್ಗಾಗಿ ಡ್ಯುಯಲ್ ಸ್ಪೀಕರ್‌ ಆಯ್ಕೆ ಸಹ ನೀಡಿದೆ. ಈ ಮೂಲಕ ಅತ್ಯುತ್ತಮವಾದ ಆಡಿಯೋ ಅನುಭವವನ್ನು ಪಡೆದುಕೊಳ್ಳಬಹುದು.

Best Mobiles in India

English summary
Don't miss this golden opportunity to buy Samsung Galaxy A34 phone. Because the price of this phone has been reduced by 4000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+