Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಐದು ಜನಪ್ರಿಯ ಫೋನ್‌ಗಳಿಗೆ ಭಾರಿ ರಿಯಾಯಿತಿ!

ಪ್ರಮುಖ ಇ-ಕಾಮರ್ಸ್‌ (E-commerce) ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ ಈಗಾಗಲೇ ಸಾಕಷ್ಟು ರಿಯಾಯಿತಿ ಸೇಲ್‌ಗಳನ್ನು ಆಯೋಜಿಸು ಮೂಲಕ ಗ್ರಾಹಕರಿಗೆ ಅಗ್ಗದ ದರದಲ್ಲಿ ಸ್ಮಾರ್ಟ್‌ ಡಿವೈಸ್‌ಗಳು (Smart device) ಸಿಗುವಂತೆ ಮಾಡಿದೆ. ಈ ನಡುವೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು, ಇದರಲ್ಲಿ ಭಾರೀ ಜನಪ್ರಿಯತೆ ಇರುವ ಈ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ನೀಡಲಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ನ 'ಬಿಗ್ ಸೇವಿಂಗ್ ಡೇಸ್ ಸೇಲ್' (Big Savings Days Sale) ಆಗಸ್ಟ್ 4 ರಿಂದ ಆಗಸ್ಟ್ 9 ರವರೆಗೆ ನಡೆಯಲಿದ್ದು, ಈ ಸೇಲ್‌ನಲ್ಲಿ ಹಲವು ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌ ನೀಡಲಾಗುತ್ತಿದೆ. ಅದರಲ್ಲಿ ಪ್ರಮಖವಾಗಿ ಐಫೋನ್‌ಗಳು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ, ಪಿಕ್ಸೆಲ್‌ ಫೋನ್‌ಗಳಿಗೆ ನೀವು ನಿರೀಕ್ಷೆ ಮಾಡಿರದ ಡಿಸ್ಕೌಂಟ್‌ ಸಿಗಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೋನ್‌ಗಳು ಎಷ್ಟು ಡಿಸ್ಕೌಂಟ್ (Discount) ಪಡೆಯಲಿವೆ ಎಂಬುದನ್ನು ನೋಡೋಣ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಐದು ಫೋನ್‌ಗಳಿಗೆ ಭಾರಿ ರಿಯಾಯಿತಿ!

ಐಫೋನ್ 14 : ಈ ಫೋನ್ (iPhone 14) 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 1170x2532 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಆಪಲ್‌ A15 ಬಯೋನಿಕ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 128GB/256GB/512GB ಇಂಟರ್‌ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ. ಈ ಸೇಲ್‌ನಲ್ಲಿ ಇದನ್ನು ನೀವು 68,999ರೂ.ಗಳಿಗೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಐಫೋನ್ 11: ಐಫೋನ್ 11 (iPhone 11) ಫೋನ್‌ಗೂ ಸಹ ಈ ಸೇಲ್‌ನಲ್ಲಿ ಆಫರ್‌ ಘೋಷಣೆ ಮಾಡಲಾಗಿದೆ. ಈ ಫೋನ್ ಸಹ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 828x1792 ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಜೊತೆಗೆ 4GB RAM ಆಯ್ಕೆಯೊಂದಿಗೆ 64GB/128GB/256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿರುವ ಫೋನ್ ಆಪಲ್ A13 ಬಯೋನಿಕ್ ಚಿಪ್‌ಸೆಟ್‌ ಬಲ ಪಡೆದುಕೊಂಡಿದೆ. ಇದರ ಆಫರ್‌ ಬೆಲೆ 41,999ರೂ.ಗಳಾಗಿದೆ.

ಐಫೋನ್ 14 ಪ್ಲಸ್‌: ಇನ್ನು ಐಫೋನ್ 14 ಪ್ಲಸ್‌ಗೂ (iPhone 14 Plus) ಸಹ ಈ ವೇಳೆ ರಿಯಾಯಿತಿ ಸಿಗಲಿದೆ. 2022 ರಲ್ಲಿ ಆಪಲ್‌ ಪರಿಚಯಿಸಿದ ಈ ಫೋನ್‌ ಬಹುಪಾಲು ಐಫೋನ್‌ 14 ಅನ್ನೇ ಹೋಲುತ್ತದೆ. ಆದರೆ, ಕೊಂಚ ಬದಲಾವಣೆ ಎಂದರೆ ದೊಡ್ಡ ಡಿಸ್‌ಪ್ಲೇ ಹಾಗೂ ದೊಡ್ಡ ಬ್ಯಾಟರಿ ಸಾಮರ್ಥ್ಯದ ಆಯ್ಕೆ. ಅದಾಗ್ಯೂ ಈ ಫೋನ್‌ಗೆ ರಿಯಾಯಿತಿ ಎಷ್ಟು ಸಿಗಲಿದೆ ಎಂಬುದನ್ನು ತಿಳಿಸಲಾಗಿಲ್ಲ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+: ಐಫೋನ್ ಹೊರತುಪಡಿಸಿದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22+(Samsung Galaxy S22+)ಫೋನ್‌ಗೂ ಈ ವೇಳೆ ಬಾರೀ ರಿಯಾಯಿತಿ ಸಿಗಲಿದೆ. ಈ ಫೋನ್‌ನ ಪ್ರಸ್ತುತ 59,999ರೂ.ಗಳಾಗಿದೆ.ಆದರೆ ಸೇಲ್‌ ಆರಂಭ ಆದ ನಂತರ ಈ ಫೋನ್‌ಗೆ ದೊಡ್ಡ ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.ಈ ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು,1080x2340 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಆಯ್ಕೆ ಪಡೆದಿದೆ. ಜೊತೆಗೆ ಎಕ್ಸಿನೋಸ್ 2200 ಪ್ರೊಸೆಸರ್‌ ಹಾಗೂ 4500mAh ಸಾಮರ್ಥ್ಯದ ಬ್ಯಾಟರಿ ಮೂಲಕ ವಿಶೇ‍ಷ ಎನಿಸಿದೆ.

ಪಿಕ್ಸೆಲ್‌ 6a: ಗೂಗಲ್‌ ಪಿಕ್ಸೆಲ್‌(Pixel 6a) ಫೋನ್‌ಗಳಿಗೂ ಸಹ ಭಾರೀ ಬೇಡಿಕೆ ಇದ್ದು, ನೀವು ಈ ವೇಳೆ ಕೈಗೆಟಕುವ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದು. ಈ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಆಕರ್ಷಕವಾಗಿದೆ. ಜೊತೆಗೆ ಗೂಗಲ್ ಟೆನ್ಸರ್ ಪ್ರೊಸೆಸರ್‌ ಬಲ ಪಡೆದಿದ್ದು, 6GB RAM ಹಾಗೂ 128GB ಇಂಟರ್‌ ಸ್ಟೋರೇಜ್ ಆಯ್ಕೆಯೊಂದಿಗೆ ಉತ್ತಮ ಅನುಭವ ನೀಡಲಿದೆ. ಈ ಫೋನ್‌ನ ಬ್ಯಾಟರಿ ಸಾಮರ್ಥ್ಯ 4410mAh.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಐದು ಫೋನ್‌ಗಳಿಗೆ ಭಾರಿ ರಿಯಾಯಿತಿ!

ಇನ್ನು ಬ್ಯಾಂಕ್ ಕಾರ್ಡ್ ಆಫರ್‌ಗಳು ಮತ್ತು ಹೆಚ್ಚುವರಿ ರಿಯಾಯಿತಿಗಳ ನಿಖರವಾದ ವಿವರಗಳನ್ನು ಫ್ಲಿಪ್‌ಕಾರ್ಟ್ (Flipkart) ಇನ್ನೂ ದೃಢೀಕರಿಸದಿದ್ದರೂ, ಈ ಸೇಲ್‌ ಆಗಸ್ಟ್ 4 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುತ್ತದೆ. ಇದರೊಂದಿಗೆ ಇನ್ನೂ ಹತ್ತು ಹಲವು ಸ್ಮಾರ್ಟ್‌ಫೋನ್‌ಗಳ ಶ್ರೇಣಿಯ ಮೇಲೆ ಆಕರ್ಷಕ ರಿಯಾಯಿತಿಗಳೊಂದಿಗೆ, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟವು ಗ್ರಾಹಕರಿಗೆ ಭಾರೀ ಹಣ ಉಳಿತಾಯ ಮಾಡಲಿದೆ.

Best Mobiles in India

English summary
Flipkart Big Savings Days Sale will be held from August 4 to August 9, and in this sale, many devices are being offered with huge discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+