Home
ಸುದ್ದಿಜಾಲ

iPhone: ಐಫೋನ್‌ 15 ಪ್ರೊ ಮ್ಯಾಕ್ಸ್‌, ಐಫೋನ್‌ 14, ಐಫೋನ್‌ 15 ಗೆ ದೊಡ್ಡ ಮಟ್ಟದ ರಿಯಾಯಿತಿ! ಎಲ್ಲಿ ಈ ಆಫರ್?

ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಐಫೋನ್‌ಗಳು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಐಫೋನ್‌ 15 ಸರಣಿ ಫೋನ್‌ಗಳಿಗಂತೂ ಸಖತ್‌ ಬೇಡಿಕೆ ಇದ್ದು, ಗ್ರಾಹಕರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಈಗ ಈ ಹೊಸ ಸರಣಿ ಫೋನ್‌ಗಳಿಗೂ ಭರ್ಜರಿ ಆಫರ್ ನೀಡಲಾಗಿದೆ.

ಹೌದು, ಇದೀಗ ಐಫೋನ್ 15 ಪ್ರೊ ಮ್ಯಾಕ್ಸ್, ಐಫೋನ್ 15 (iPhone 15 Pro Max, iPhone 15) ಮತ್ತು ಇತರ ಐಫೋನ್‌ಗಳ ಮೇಲೆ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಹೊಸ ಫೋನ್‌ಗಳ ಬೆಲೆ ಇನ್ನು ನಾಲ್ಕೈದು ತಿಂಗಳಲ್ಲಿ ಇನ್ನೂ ಕಡಿಮೆ ಆಗಲಿದೆ. ಅದಾಗ್ಯೂ ನಿಮಗೆ ಅಲ್ಲಿಯವರೆಗೆ ಕಾಯಲು ಆಗುವುದಿಲ್ಲ, ಈಗ ಇರುವ ಆಫರ್ ಸಾಕು ಎಂದರೆ ಇದು ನಿಮಗೆ ಉತ್ತಮ ಆಯ್ಕೆ ಆಗಬಹುದು. ಹಾಗಿದ್ರೆ, ಈ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ? ಅನ್ನೋದನ್ನು ತಿಳಿದುಕೊಳ್ಳಿ.

ಐಫೋನ್‌ 15 ಪ್ರೊ ಮ್ಯಾಕ್ಸ್‌, ಐಫೋನ್‌ 14, ಐಫೋನ್‌ 15 ಗೆ ದೊಡ್ಡ ಮಟ್ಟದ ರಿಯಾಯಿತಿ

ಐಫೋನ್‌ಗಳಿಗೆ ಆಫರ್: ಐಫೋನ್ 15 ಪ್ರೊ ಮ್ಯಾಕ್ಸ್, ಐಫೋನ್ 15 ಮತ್ತು ಇತರ ಐಫೋನ್‌ಗಳು ಪ್ರಸ್ತುತ ರಿಯಾಯಿತಿ ದರದಲ್ಲಿ ಮಾರಾಟಕ್ಕಿವೆ. ಆಪಲ್‌ನ ಅಧಿಕೃತ ಚಿಲ್ಲರೆ ವ್ಯಾಪಾರಿ ಇಮ್ಯಾಜಿನ್ ಸ್ಟೋರ್ (Imagine Store) ತನ್ನ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಐಫೋನ್‌ಗಳು ಮತ್ತು ಬ್ರ್ಯಾಂಡ್‌ನ ಇತರ ಡಿವೈಸ್‌ಗಳನ್ನು ಆಫರ್‌ನೊಂದಿಗೆ ನೀಡುತ್ತಿದೆ. ಈ ಮೂಲಕ ಈ ದುಬಾರಿ ಬೆಲೆಯ ಫೋನ್‌ಗಳ ಮೇಲೆ ಹಣ ಉಳಿತಾಯ ಮಾಡಬಹುದಾಗಿದೆ.

ಇನ್ನು ಐಫೋನ್ 15 ಪ್ರೊ ಮ್ಯಾಕ್ಸ್ ಸದ್ಯಕ್ಕೆ 1,57,900 ರೂ.ಗಳಲ್ಲಿ ಮಾರಾಟವಾಗುತ್ತಿದೆ. ಆದರೆ, ಈ ವೇಳೆ ಗ್ರಾಹಕರು 2,000 ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ ಆಫರ್ 4,000 ರೂ. ವರೆಗೂ ಇದ್ದು, ಈ ಫೋನ್ ಅನ್ನು ನೀವು 1,53,900 ರೂ.ಗೆ ಖರೀದಿ ಮಾಡಬಹುದಾಗಿದೆ.

ಐಫೋನ್ 15 ಅನ್ನೂ ಸಹ ಈ ವೇಳೆ ಆಫರ್ ಬೆಲೆಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಫೋನ್‌ ಇದೀಗ 77,900 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಸಾಮಾನ್ಯ ದರ 79,900 ರೂ.ಗಳು ಆದರೂ ಸಹ ನೀವು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5,000 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಪರಿಣಾಮ ಬೆಲೆ 72,900 ರೂ.ಗೆ ಇಳಿಕೆಯಾಗಲಿದೆ. ಇದರೊಂದಿಗೆ ನೀವು ಐಫೋನ್ 15 ಪ್ಲಸ್‌ ಅನ್ನೂ ಸಹ ಇದೇ ಆಫರ್ ಮೂಲಕ 82,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಐಫೋನ್‌ 15 ಪ್ರೊ ಮ್ಯಾಕ್ಸ್‌, ಐಫೋನ್‌ 14, ಐಫೋನ್‌ 15 ಗೆ ದೊಡ್ಡ ಮಟ್ಟದ ರಿಯಾಯಿತಿ

ಇನ್ನು ಐಫೋನ್ 14 ಫೋನ್‌ ಖರೀದಿ ಮಾಡಲು ನೀವು ಮುಂದಾಗಿದ್ದರೆ ಫ್ಲಿಪ್‌ಕಾರ್ಟ್‌ (Flipkart) ಕಡೆ ಕಣ್ಣಾಯಿಸಿ. ಏಕೆಂದರೆ ಫ್ಲಿಪ್‌ಕಾರ್ಟ್‌ ಈ ಫೊನ್‌ ಅನ್ನು ನಿಮಗೆ 58,999 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಜನವರಿ 2024 ರಲ್ಲಿ ಗಣರಾಜ್ಯೋತ್ಸವದ ಮಾರಾಟದಲ್ಲಿ ಐಫೋನ್‌ 14 (iPhone 14) ನ ಬೆಲೆಯು ಇನ್ನೂ ಕೆಲವು ಸಾವಿರ ರೂಪಾಯಿಗಳಷ್ಟು ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಸ್ವಲ್ಪ ಕಾದು ಈ ಫೋನ್‌ ಖರೀದಿ ಮಾಡಿದ್ರೆ ಇನ್ನೂ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.

ಐಫೋನ್‌ 15 ಪ್ರೊ ಮ್ಯಾಕ್ಸ್‌, ಐಫೋನ್‌ 14, ಐಫೋನ್‌ 15 ಗೆ ದೊಡ್ಡ ಮಟ್ಟದ ರಿಯಾಯಿತಿ

ಈ ಐಫೋನ್‌ಗಳು ಒಂದು ಕಡೆಯಾದರೆ, ಮ್ಯಾಕ್‌ಬುಕ್‌ಗಳ ಮೇಲೂ 20,000 ರೂಪಾಯಿಗಳವರೆಗೆ ರಿಯಾಯಿತಿ ಇದೆ. 13 ಇಂಚಿನ ಡಿಸ್‌ಪ್ಲೇ ಆಯ್ಕೆ ಮ್ಯಾಕ್‌ಬುಕ್ ಪ್ರೊ M2 ಮಾದರಿಯು (256GB) 1,09,312 ರೂ.ಗಳಿಗೆ ಮಾರಾಟ ಆಗಲಿದೆ. ಜೊತೆಗೆ ಮ್ಯಾಕ್‌ಬುಕ್ ಏರ್ M1 (256GB) ಅನ್ನು 76,918 ರೂ. ಗಳಿಗೆ ಖರೀದಿ ಮಾಡಬಹುದು. ಹಾಗೆಯೇ 14 ಇಂಚಿನ ಡಿಸ್‌ಪ್ಲೇ ಹೊಂದಿರುವ ಮ್ಯಾಕ್‌ಬುಕ್ ಪ್ರೊ M3 ಅನ್ನು 1,54,706 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇಮ್ಯಾಜಿನ್ ಸ್ಟೋರ್‌ನಲ್ಲಿ ಈ ಆಫರ್ ಘೋಷಣೆ ಮಾಡಲಾಗಿದೆ.

Best Mobiles in India

English summary
Huge discounts have been announced for iPhone 15 Pro Max, iPhone 14, iPhone 15. You can visit Flipkart and Imagine store to get this offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+