ಒನ್‌ಪ್ಲಸ್ 9 5G ಫೋನ್‌ಗೆ ಭಾರೀ ಆಫರ್ ಘೋಷಣೆ: ಹಣ ಉಳಿತಾಯ ಪಕ್ಕಾ!
ಒನ್‌ಪ್ಲಸ್ (OnePlus) ಫೋನ್‌ಗಳಿಗೆ ಇರುವ ಬೇಡಿಕೆ ಮಾತ್ರ ಇನ್ನೂ ಹೆಚ್ಚುತ್ತಲೇ ಇದೆ. ಈ ಫೋನ್‌ಗಳು ಉತ್ತಮ ಕ್ಯಾಮೆರಾ ಫೀಚರ್ಸ್ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿದ್ದು, ಭಾರತದಲ್ಲಿ ಇವುಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಪ್ರಮುಖ ಇ ಕಾಮರ್ಸ್ ಸೈಟ್‌ನಲ್ಲಿ ಒನ್‌ಪ್ಲಸ್ 9 5G (OnePlus 9 5G phone) ಫೋನ್‌ಗೆ ಭಾರೀ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಬಹಳಷ್ಟು ಜನರು ಒನ್‌ಪ್ಲಸ್ ಫೋನ್‌ಗಳನ್ನು ಖರೀದಿ ಮಾಡಲು ಇಚ್ಚಿಸುತ್ತಾರೆ. ಆದರೆ ಹೆಚ್ಚಿನ ಬೆಲೆಯ ಕಾರಣದಿಂದ ಈ ಫೋನ್‌ಗಳ ಖರೀದಿ ಸಮಯದಲ್ಲಿ ಹಿಂಜರಿಯುತ್ತಾರೆ. ಆದರೆ ಈಗ ಮಾತ್ರ ನೀವು ಕೈಗೆಟಕುವ ದರದಲ್ಲಿ ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ಎಷ್ಟು?, ಎಲ್ಲಿ ಈ ಆಫರ್ ನೀಡಲಾಗಿದೆ?, ಇದರ ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್ ಆಫರ್ ವಿವರ: ಒನ್‌ಪ್ಲಸ್ 9 ಈಗ ನಿಮಗೆ 49,999 ರೂ.ಗಳ ಬದಲಿಗೆ 37,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 24% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೆ ಇನ್ನಷ್ಟು ಆಫರ್ ನೀಡಲಾಗಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಕೊಂಡುಕೊಳ್ಳಬಹುದಾಗಿದೆ.
ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಇನ್ನು ಈ ಫೋನ್ ಅನ್ನೇನು ಆಫರ್ ಬೆಲೆಗೆ ಖರೀದಿ ಮಾಡಲು ಮುಂದಾಗಿದ್ದೀರ ಅಂದುಕೊಳ್ಳೋಣ. ಆದರೆ, ಇದರ ಪ್ರಮುಖ ಫೀಚರ್ಸ್ ಬಗ್ಗೆ ತಿಳಿಯದೇ ಖರೀದಿ ಮಾಡಿದರೆ ನಿಮಗೇ ಲಾಸ್. ಅದರಂತೆ ಈ ಫೋನ್ 6.55 ಇಂಚಿನ ಅಮೋಲೆಡ್ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 20:9 ಆಕಾರ ಅನುಪಾತವನ್ನು ಪಡೆದಿದೆ.
ಇದರೊಂದಿಗೆ ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಈ ಮೂಲಕ ವಿಡಿಯೋ ಗೇಮ್‌ನಲ್ಲಿ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಜೊತೆಗೆ 402 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಕಾಣಿಸಿಕೊಂಡಿರುವ ಈ ಫೋನ್ ಬಲವಾದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಲೇಯರ್ ಅನ್ನು ಹೊಂದಿದೆ. ಇದರಿಂದ ಈ ಫೋನ್‌ಗೆ ಯಾವುದೇ ಡಿಸ್‌ಪ್ಲೇ ಸಮಸ್ಯೆ ಆಗುವುದಿಲ್ಲ.
ಒನ್‌ಪ್ಲಸ್ 9 5G ಪ್ರೊಸೆಸರ್ ಮಾಹಿತಿ: ಈ ಫೋನ್ ನ ಪ್ರೊಸೆಸರ್ ಕ್ರಿಯೋ 680 CPU ಕಾನ್ಫಿಗರೇಶನ್‌ಗಳು ಇರುವ ಒಕ್ಟಾ-ಕೋರ್ 2.84GHz ಸಿಂಗಲ್-ಕೋರ್ ಕ್ರಿಯೋ 680, 2.42GHz ಟ್ರೈ-ಕೋರ್ ಕ್ರಿಯೋ 680 ಮತ್ತು 1.8GHz ಕ್ವಾಡ್-ಕೋರ್ ಕ್ರಿಯೋ 680 ಸಾಮರ್ಥ್ಯದ ಕ್ವಾಲ್ಕಮ್ S88d ಪ್ರಕ್ರಿಯೆಯೊಂದಿಗೆ ಜೋಡಿಸಲಾಗಿದೆ. ಜೊತೆಗೆ 8GB RAM ಮತ್ತು ಅಡ್ರಿನೋ 660 ಜಿಪಿಯು ಬಲ ಪಡೆದಿದ್ದು, ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದಾಗಿದೆ.

ಒನ್‌ಪ್ಲಸ್ 9 5G ಕ್ಯಾಮೆರಾ ಹಾಗೂ ಇತರೆ: ಉಳಿದಂತೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 48MP f/1.8 ಪ್ರಾಥಮಿಕ ಲೆನ್ಸ್, 50MP f/2.2 ತೀವ್ರ ವೈಡ್-ಆಂಗಲ್ ಲೆನ್ಸ್ ಮತ್ತು ಅಲ್ಟ್ರಾವೈಡ್ BSI ಇಮೇಜ್ ಸೆನ್ಸರ್ ಜೊತೆಗೆ 2MP f/2.4 ಮೊನೊ ಲೆನ್ಸ್ ಅನ್ನು ಹೊಂದಿದೆ. ಹಾಗೂ f/2.4 ದ್ಯುತಿರಂಧ್ರದೊಂದಿಗೆ 16MP ಮುಖ್ಯ ಸೆಲ್ಫಿ ಕ್ಯಾಮೆರಾ ಈ ಫೋನ್‌ನಲ್ಲಿದೆ. ಈ ನಡುವೆ ಈ ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications








