ಭಾರೀ ಆಫರ್‌ನಲ್ಲಿ ಸ್ಮಾರ್ಟ್‌ಟಿವಿ ಖರೀದಿಸಬೇಕೆ?, ಈ Mi ಟಿವಿಗಿದೆ 33% ರಿಯಾಯಿತಿ!
ಸ್ಮಾರ್ಟ್‌ಟಿವಿಗಳು (Smart TVs) ಇಂದು ಸ್ಮಾರ್ಟ್‌ಫೋನ್‌ಗಿಂತ ಹೆಚ್ಚಿನ ಫೀಚರ್ಸ್ ಹೊಂದುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಾ ಬರುತ್ತಿವೆ. ಈ ನಡುವೆ ಕೆಲವು ಇ- ಕಾಮರ್ಸ್ ಸೈಟ್‌ಗಳಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದ್ದು, ನೀವು ಮಿ (Mi) ಸ್ಮಾರ್ಟ್‌ಟಿವಿಯನ್ನು ಖರೀದಿ ಮಾಡುವ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ Mi 5A (40 ಇಂಚು) ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್‌ಟಿವಿಗೆ (Mi 5A 40 inch HD Ready LED Smart TV) ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದೆ.ಈ ಸ್ಮಾರ್ಟ್‌ಟಿವಿ ಲೋಹದ ಚೌಕಟ್ಟಿನೊಂದಿಗೆ ಕಾಣಿಸಿಕೊಂಡಿದ್ದು, 20W ಹೈ-ಫಿಡೆಲಿಟಿ ಸೌಂಡ್‌ನೊಂದಿಗೆ ಉತ್ತಮ ಅನುಭವ ನೀಡಲಿದೆ. ಈ ವೇಳೆ ನೀವೇನಾದರೂ ಅತ್ಯುತ್ತಮ ಸ್ಮಾರ್ಟ್‌ಟಿವಿಯನ್ನು ಅಗ್ಗದ ದರದಲ್ಲಿ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ವಿವರ.

Mi 5A HD ರೆಡಿ LED ಸ್ಮಾರ್ಟ್ ಟಿವಿಗೆ ಆಫರ್: 40 ಇಂಚಿನ ಈ Mi 5A ಸ್ಮಾರ್ಟ್‌ಟಿವಿ ಇದೀಗ 19,999 ರೂ.ಗಳಿಗೆ ಲಭ್ಯ ಆಗುತ್ತಿದೆ. ಈ ಸ್ಮಾರ್ಟ್‌ಟಿವಿ ಸಾಮಾನ್ಯ ದರ 29,999 ರೂ.ಗಳಾಗಿದ್ದು, ಈ ಮೂಲಕ ನೀವು ಹತ್ತು ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳ ಮೇಲೂ ಆಫರ್ ನೀಡಲಾಗುತ್ತಿದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.
ಬ್ಯಾಂಕ್ ಆಫರ್ ವಿಷಯಕ್ಕೆ ಬಂದಾಗ ಸುಮಾರು ಮೂವತ್ತಕ್ಕೂ ಹೆಚ್ಚಿನ ಹೆಚ್ಚಿನ ಆಫರ್‌ಗಳನ್ನು ನೀಡಲಾಗಿದೆ. ಈ ಮೂಲಕ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದೆ. ಈ ಆಫರ್ ಅನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ನೀಡಲಾಗಿದೆ. ಕೆಲವು ಬ್ಯಾಂಕ್ ಆಫರ್‌ಗಳ ಕಡೆ ಕಣ್ಣಾಯಿಸುವುದಾದರೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ತ್ವರಿತ ರಿಯಾಯಿತಿ ಸಿಗಲಿದೆ. ಅಷ್ಟೇ ಅಲ್ಲದೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,250ರೂ. ವರೆಗೆ ಬ್ಯಾಂಕ್ ಆಫರ್ ಅಥವಾ 10% ತತ್‌ಕ್ಷಣ ರಿಯಾಯಿತಿ ದೊರೆಯಲಿದೆ.
ಇದರೊಂದಿಗೆ ಟೈಮ್ ಪ್ರೈಮ್ ವಾರ್ಷಿಕ ಸದಸ್ಯತ್ವ ಸಹ ಸಿಗಲಿದೆ. ಅಂದರೆ ಪೇ ಲೇಟರ್ ಆಯ್ಕೆ ಬಳಕೆ ಮಾಡುವ ಮೂಲಕ 10,000 ರೂ.ಗಳ ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5,000 ಮತ್ತು ಹೆಚ್ಚಿನ ಮೌಲ್ಯದ ಆರ್ಡರ್‌ಗಳ ಮೇಲೆ 625 ವರೆಗೆ ಬ್ಯಾಂಕ್ ಆಫರ್ ಸಹ ಸಿಗಲಿದೆ.
Mi 5A (40 ಇಂಚು) HD ರೆಡಿ LED ಸ್ಮಾರ್ಟ್ ಟಿವಿ ಫೀಚರ್ಸ್: ಈ ಟಿವಿಯಲ್ಲಿ ಫುಲ್-ಸ್ಕ್ರೀನ್ ಮೋಡ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ. ಇದರೊಂದಿಗೆ ಇದು ಬಹುಕಾಂತೀಯ ಲೋಹದ ಚೌಕಟ್ಟಿನೊಂದಿಗೆ ಪ್ಯಾಕ್ ಆಗಿದ್ದು, ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಜೊತೆಗೆ ಈ ಟಿವಿಯ ವಿಶೇಷ ಪಿಕ್ಚರ್ ಎಂಜಿನ್ ಇದಕ್ಕೆ ಜೀವ ತುಂಬಲು ಕಾಂಟ್ರಾಸ್ಟ್, ಬಣ್ಣಗಳು ಮತ್ತು ಡೀಪ್ ಅನ್ನು ಹೊಂದಿಕೆ ಮಾಡುತ್ತದೆ.

ಡಾಲ್ಬಿ ಆಡಿಯೋ ಮತ್ತು 20 W ಹೈ-ಫಿಡೆಲಿಟಿ ಸೌಂಡ್‌ನೊಂದಿಗೆ ಈ ಟಿವಿ ಅತ್ಯುತ್ತಮವಾದ ಆಡಿಯೋವನ್ನು ನೀಡಲಿದ್ದು ,ನೀವು ಯಾವ ರೀತಿಯ ಕಂಟೆಂಟ್ ಅನ್ನು ವೀಕ್ಷಿಸುತ್ತಿರುವಿರಿ ಎಂಬುದನ್ನು ಲೆಕ್ಕಿಸದೆಯೇ, ಈ ಟಿವಿಯಲ್ಲಿನ ಉತ್ತಮ-ಗುಣಮಟ್ಟದ ಸೌಂಡ್ ನಿಂದ ಸಂಪೂರ್ಣವಾಗಿ ತಲ್ಲೀನರಾಗುವುದರ ಜೊತೆಗೆ ರೋಮಾಂಚನಗೊಳ್ಳುತ್ತೀರಿ. ಉಳಿದಂತೆ ಕ್ವಾಡ್-ಕೋರ್ A35 ಚಿಪ್‌ಸೆಟ್ ಹೊಂದಿರುವ ಈ ಟಿವಿ ದೋಷರಹಿತ ವೀಕ್ಷಣೆಯ ಅನುಭವವನ್ನು ನೀಡುತ್ತದೆ.


Click it and Unblock the Notifications








