Home
ಸುದ್ದಿಜಾಲ

ಇದಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿಗಳು ಸಿಗೋಲ್ಲ ಅನಿಸುತ್ತೆ, ಅಮೆಜಾನ್‌ ಫ್ರೀಡಮ್ ಸೇಲ್ ಆರಂಭ!

ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಅಮೆಜಾನ್ (Amazon) ಒಂದಾಗಿದ್ದು, ಈಗಾಗಲೇ ವಿವಿಧ ರೀತಿಯಲ್ಲಿ ವಿಶೇಷ ಡಿಸ್ಕೌಂಟ್‌ ಸೇಲ್‌ಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ. ಈ ನಡುವೆ ಅಮೆಜಾನ್‌ ಫ್ರೀಡಮ್ ಸೇಲ್ ಪ್ರೈಮ್ ಸದಸ್ಯರಿಗೆ ಲೈವ್ (Amazon Freedom Sale live for Prime members) ಆಗಿದ್ದು ಜನಪ್ರಿಯ ಸ್ಮಾರ್ಟ್‌ಟಿವಿ ಮೇಲೆ ಭಾರೀ ರಿಯಾಯಿತಿ ಸಿಗಲಿದೆ.

ಹೌದು, ಅಮೆಜಾನ್‌ ಫ್ರೀಡಮ್ ಸೇಲ್ ಈಗ ಪ್ರೈಮ್ ಸದಸ್ಯರಿಗೆ ಲೈವ್ ಆಗಿದೆ. ಈ ಸೇಲ್‌ನಲ್ಲಿ ಪ್ರೈಮ್ ಸದಸ್ಯರು ಆಗಸ್ಟ್ 8 ರವರೆಗೆ ಖರೀದಿ ಮಾಡುವ ಯಾವುದೇ ಡಿವೈಸ್ ಮೇಲೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ಅದರಲ್ಲೂ ಸ್ಯಾಮ್‌ಸಂಗ್, ಸೋನಿ, ಏಸರ್, ರೆಡ್ಮಿಸ್ಮಾರ್ಟ್‌ಟಿವಿಗಳ ಮೇಲೆ ಕನಿಷ್ಠ 40% ರಿಯಾಯಿತಿ ಸಿಗಲಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ಏನೆಲ್ಲಾ ಆಫರ್‌ ಇದೆ ನೋಡೋಣ ಬನ್ನಿ.

ಇದಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿಗಳು ಸಿಗೋಲ್ಲ ಅನಿಸುತ್ತೆ...

ಎಲ್‌ ಜಿ ಸ್ಮಾರ್ಟ್‌ಟಿವಿ: ಎಲ್‌ಜಿ ಕಂಪೆನಿ ಸ್ಮಾರ್ಟ್‌ಟಿವಿ (Smart TV)ವಿಭಾಗದಲ್ಲಿ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED TV 55UQ7500PSF ಸ್ಮಾರ್ಟ್‌ಟಿವಿಗೆ 39,000ರೂ.ಗಳ ರಿಯಾಯಿತಿ ಸಿಲಿದ್ದು, ಇದಾದ ನಂತರ ನೀವು 40,990ರೂ.ಗಳನ್ನು (ಕೂಪನ್‌ನೊಂದಿಗೆ) ನೀಡಿ ಖರೀದಿ ಮಾಡಬಹುದು. ಈ ಟಿವಿ HDR10, ALLM ಮತ್ತು HLG ಬೆಂಬಲದೊಂದಿಗೆ 4K ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ವೆಬ್‌ಓಎಸ್‌ 2.2 ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡುತ್ತದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ: ಇನ್ನು ಈ ವಿಶೇಷ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ನ 55 ಇಂಚಿನ ಕ್ರಿಸ್ಟಲ್ 4K ನಿಯೋ ಸರಣಿ 29,000 ಡಿಸ್ಕೌಂಟ್‌ ಹೊಂದಿದ್ದು, 41,990 ರೂ.ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಟಿವಿ 4K ಪ್ಯಾನೆಲ್ ಅನ್ನು ಹೊಂದಿದ್ದು, 20W ಸ್ಪೀಕರ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಟಿವಿ ಟೈಜನ್ ಓಎಸ್‌ ಅನ್ನು ರನ್ ಮಾಡಲಿದ್ದು, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಸೇರಿದಂತೆ ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬೆಂಬಲಿಸುತ್ತದೆ.

ಸೋನಿ ಟಿವಿ: ಸೋನಿ ಕಂಪೆನಿಯ ಸ್ಮಾರ್ಟ್‌ಟಿವಿಗಳ ವಿಚಾರಕ್ಕೆ ಬರುವುದಾದರೆ ಸೋನಿ ಬ್ರಾವಿಯಾ 50 ಇಂಚಿನ ಸ್ಮಾರ್ಟ್‌ಟಿವಿಗೆ 27,000ರೂ.ಗಳ ರಿಯಾಯಿತಿ ನೀಡಲಾಗಿದ್ದು, 37,990ರೂ.ಗಳಿಗೆ ಕೊಂಡುಕೊಳ್ಳಬಹುದು. ಈ ಟಿವಿ HDR ಬೆಂಬಲದೊಂದಿಗೆ 50Hz ರಿಫ್ರೆಶ್ ರೇಟ್‌ ಮೂಲಕ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಇನ್‌ಬಿಲ್ಟ್‌ ಸಬ್ ವೂಫರ್‌ನೊಂದಿಗೆ 20W ಸ್ಪೀಕರ್‌ ಆಯ್ಕೆ ಇದರಲ್ಲಿದ್ದು, ಗೂಗಲ್‌ ಟಿವ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ.

ಕೊಡಾಕ್ ಸ್ಮಾರ್ಟ್‌ಟಿವಿ: ಕೊಡಕ್‌ನ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED ಟಿವಿ ಈ ಸೇಲ್‌ನಲ್ಲಿ 20,000ರೂ.ಗಳ ಡಿಸ್ಕೌಂಟ್‌ ಲಭ್ಯ ಇದ್ದು, ಈ ಮೂಲಕ ನೀವು 29,999ರೂ.ಗಳಿಗೆ ಈ ಸ್ಮಾರ್ಟ್‌ಟಿವಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಟಿವಿ HDR ಬೆಂಬಲದೊಂದಿಗೆ 4K ಪ್ಯಾನೆಲ್ ಆಯ್ಕೆ ಪಡೆದಿದ್ದು, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್‌ ಬೆಂಬಲದೊಂದಿಗೆ 30W ಸ್ಟಿರಿಯೊ ಸ್ಪೀಕರ್‌ ಆಯ್ಕೆ ಪಡೆದುಕೊಂಡಿದೆ.

ರೆಡ್ಮಿ ಸ್ಮಾರ್ಟ್‌ಟಿವಿ: ರೆಡ್ಮಿ ಸ್ಮಾರ್ಟ್‌ಟಿವಿಗಳಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗೆ 22,000ರೂ.ಗಳ ರಿಯಾಯಿತಿ ನೀಡಲಾಗಿದ್ದು, ಇದು 32,999ರೂ.ಗಳಿಗೆ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದೆ. ಜೊತೆಗೆ ಕ್ರೋಮಾಕಾಸ್ಟ್‌, ಗೂಗಲ್‌ ಅಸಿಸ್ಟೆಂಟ್‌, ಪ್ಲೇ ಸ್ಟೋರ್‌ ಇನ್‌ಬಿಲ್ಟ್ ಆಗಿದೆ. ಇಷ್ಟು ಮಾತ್ರವಲ್ಲದೆ ಪ್ಯಾಚ್‌ವಾಲ್ ಸೇವೆ ಸಹ ಲಭ್ಯ.

ತೋಷಿಬಾ ಸ್ಮಾರ್ಟ್‌ಟಿವಿ: ಇನ್ನು ನಿಮಗೆ ತೋಷಿಬಾ ಕಂಪೆನಿಯ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂಬ ಇಚ್ಚೆ ಇದ್ದರೆ 55 ಇಂಚಿನ QLED ಸ್ಮಾರ್ಟ್ ಟಿವಿಗೆ 35,000ರೂ.ಗಳ ಡಿಸ್ಕೌಂಟ್‌ ನೀಡಲಾಗಿದೆ. ಈ ಮೂಲಕ 44,999ರೂ.ಗಳಿಗೆ ಕೊಂಡುಕೊಳ್ಳಬಹುದು. ಅದರಂತೆ HDR10 ಬೆಂಬಲದೊಂದಿಗೆ 4K QLED ಪ್ಯಾನೆಲ್ ಆಯ್ಕೆ ನೀಡಲಾಗಿದ್ದು, ಗೂಗಲ್‌ ಟಿವಿ ಓಎಸ್‌ ಅನ್ನು ರನ್ ಮಾಡುತ್ತದೆ.

ಇದಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಟಿವಿಗಳು ಸಿಗೋಲ್ಲ ಅನಿಸುತ್ತೆ...

ಏಸರ್‌ ಸ್ಮಾರ್ಟ್‌ಟಿವಿ: ಏಸರ್‌ನ 55 ಇಂಚಿನ ಸ್ಮಾರ್ಟ್‌ಟಿವಿಗೆ ಅಮೆಜಾನ್‌ನ ಈ ಸೇಲ್‌ನಲ್ಲಿ 17,991ರೂ.ಗಳ ರಿಯಾಯಿತಿ ನೀಡಲಾಗಿದೆ. ಅದರಂತೆ ನೀವು ಇದನ್ನು 29,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಸ್ಮಾರ್ಟ್‌ಟಿವಿ HDR ಬೆಂಬಲದೊಂದಿಗೆ 4K ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
The Amazon Freedom Sale is now live for Prime members. In this sale, Prime members will get a huge discount on any device purchased till August 8. Meanwhile, smart TVs will get huge discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+