Realme: ಹೊಸ ರಿಯಲ್‌ಮಿ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗೆ ಭಾರೀ ಕೊಡುಗೆ! ಅಫರ್ ಬೆಲೆ ಎಷ್ಟು?
ರಿಯಲ್‌ಮಿ ಕೆಲವು ದಿನಗಳ ಹಿಂದಷ್ಟೇ ರಿಯಲ್‌ಮಿ 12 ಪ್ರೊ ಸ್ಮಾರ್ಟ್‌ಫೋನ್ ಸರಣಿಯನ್ನು (Realme 12 Pro smartphone series) ಅನಾವರಣ ಮಾಡಿದ್ದು, ಈ ಮೂಲಕ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಅಲ್ಲದೆ ಈ ಫೋನ್ ವಿಶೇಷ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇತರೆ ಫೋನ್‌ಗಳಿಗೆ ತೀವ್ರ ಪೈಪೋಟಿಯನ್ನೂ ಸಹ ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆಯೊಂದಿಗೆ ಈ ಫೋನ್‌ಗೆ ಆಫರ್ ನೀಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ರಿಯಲ್‌ಮಿ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗೆ (Realme 12 Pro Plus smartphone) ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಜನವರಿ 29 ರಂದು ಅನಾವರಣ ಮಾಡಲಾಗಿದ್ದು, ಪೂರ್ವ-ಬುಕಿಂಗ್‌ಗಳು ಆರಂಭ ಆಗಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಬೆಲೆ ವಿವರ ಹಾಗೂ ಇದರ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಅಂದರೆ 8GB + 256GB ವೇರಿಯಂಟ್‌ಗೆ 31,999 ರೂ.ಗಳ ಬೆಲೆ ಇದ್ದು, 12GB + 256GB ವೇರಿಯಂಟ್ 33,999 ರೂ.ಗಳಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್ (Flipkart) ಈ ಫೋನ್‌ಗೆ ಹೆಚ್ಚುವರಿ 2,000 ರೂ.ಗಳ ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ಆಯ್ದ ಮಾಡೆಲ್‌ಗಳ ವಿನಿಮಯದ ಮೇಲೆ ಹೆಚ್ಚುವರಿ 4,000ರೂ. ಗಳನ್ನೂ ಸಹ ನೀಡಲಾಗುತ್ತದೆ. ಈ ಫೋನ್ ನ್ಯಾವಿಗೇಟರ್ ಬೀಜ್ ಮತ್ತು ಸಬ್‌ಮರೀನ್ ಬ್ಲೂ ಬಣ್ಣದಲ್ಲಿ ಕಾಣಿಸಿಕೊಂಡಿದೆ.
ರಿಯಲ್‌ಮಿ 12 ಪ್ರೊ ಪ್ಲಸ್ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.7 ಇಂಚಿನ FHD+ OLED ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಹಾಗೂ 950ನಿಟ್ಸ್ ಪೀಕ್ ಬ್ರೈಟ್‌ನೆಸ್ ನಲ್ಲಿ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ ಈ ಫೋನ್ ಡಾಲ್ಬಿ ಅಟ್ಮಾಸ್-ಸಕ್ರಿಯಗೊಳಿಸಿದ ಸ್ಟಿರಿಯೊ ಸ್ಪೀಕರ್ ಆಯ್ಕೆ ಪಡೆದಿದೆ.

ಜೊತೆಗೆ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ನಲ್ಲಿ (Qualcomm Snapdragon 7s Gen 2 CPU) ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 710 ಗ್ರಾಫಿಕ್ಸ್ ಕಾರ್ಡ್ ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಮತ್ತು ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5.0 ಅನ್ನು ಈ ಫೋನ್ ರನ್ ಮಾಡಲಿದೆ.
ಇದರೊಂದಿಗೆ ಈ ಹೊಸ ಫೋನ್ 67W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 50 ಮೆಗಾಪಿಕ್ಸೆಲ್ OIS ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ UW ಮತ್ತು 64 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 32 ಮೆಗಾಪಿಕ್ಸೆಲ್ ಕ್ಯಾಮರಾ ಆಯ್ಕೆ ಪಡೆದಿದೆ. ಇನ್ನು ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ವೈ-ಫೈ 6, ಬ್ಲೂಟೂತ್ ಆವೃತ್ತಿ 5.2 ಮತ್ತು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆಯುತ್ತದೆ.

ರಯಲ್‌ಮಿ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ನ ಪ್ರಮುಖ ವಿಶೇಷತೆ ಏನೆಂದರೆ ಇದು ಟೆಲಿಫೋಟೋ ಲೆನ್ಸ್‌ಗಳೊಂದಿಗೆ (Telephoto lens) ಕಾಣಿಸಿಕೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ ಸ್ವಿಸ್ ವಾಚ್‌ಮೇಕರ್ ಒಲಿವಿಯರ್ ಸೇವಿಯೊ (Swiss watchmaker Olivier Savio) ಅವರೊಂದಿಗೆ ಸೇರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕ್ಯಾಮೆರಾ ಫಿಲ್ಟರ್ ಆಯ್ಕೆ ಪಡೆದಿದೆ. ಈ ವಿಭಾಗದಲ್ಲಿ ಮೂರು ಫಿಲ್ಟರ್ ಇದ್ದು, ಇವುಗಳನ್ನು ಮೂರು ಸಿನಿಮಾ ಸೀನ್ ನಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.


Click it and Unblock the Notifications








