ಒನ್‌ಪ್ಲಸ್‌ನ ಈ ಫೋನ್‌ಗೆ ಬೊಂಬಾಟ್ ಆಫರ್, ಪಕ್ಕಾ ಉಳಿತಾಯ! ಈ ಆಫರ್ ಎಲ್ಲಿ?
ಒನ್‌ಪ್ಲಸ್ (OnePlus) ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಲ್ಲೂ ಕಂಪೆನಿಯು ಇತ್ತೀಚಿಗೆ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಅನಾವರಣ ಮಾಡಿದ್ದು, ಈ ಮೂಲಕ ಒನ್‌ಪ್ಲಸ್ ಕಡೆ ಇನ್ನಷ್ಟು ಗ್ರಾಹಕರು ವಾಲುತ್ತಿದ್ದಾರೆ. ಇದರೊಂದಿಗೆ ಒನ್‌ಪ್ಲಸ್‌ನ ಬಹುಬೇಡಿಕೆಯ ಫೋನ್ ಆಗಿ ಗುರುತಿಸಿಕೊಂಡಿದ್ದ ಒನ್‌ಪ್ಲಸ್ 7 (8GB RAM) ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಆಗಾಗ್ಗೆ ಹಲವು ಫೋನ್‌ಗಳಿಗೆ ಆಫರ್ ನೀಡುವುದು ಸಾಮಾನ್ಯ. ಅದರಂತೆ ಈಗ ಒನ್‌ಪ್ಲಸ್‌ನ ಒನ್‌ಪ್ಲಸ್ 7 (OnePlus 7) ಗೆ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಫೋನ್ 8GB RAM ಆಯ್ಕೆ ಹೊಂದಿದ್ದು, 1080×2280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗಿದ್ರೆ ಈ ಫೋನ್‌ನ ಆಫರ್ ಬೆಲೆ ಹಾಗೂ ಫೀಚರ್ಸ್ ವಿವರ ನೋಡೋಣ ಬನ್ನಿ.

ಒನ್‌ಪ್ಲಸ್ 7 ಫೋನ್ ಆಫರ್ ವಿವರ: ಈ ಫೋನ್‌ಅನ್ನು ನೀವು ಈಗ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 32,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ 13% ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಫೋನ್‌ನ ಸಾಮಾನ್ಯ ದರ 37,999 ರೂ.ಗಳಾಗಿದೆ. ಈ ಮೂಲಕ ನೀವು ಐದು ಸಾವಿರ ಹಣ ಉಳಿತಾಯ ಮಾಡಬಹುದು. ಅಷ್ಟೇ ಅಲ್ಲದೆ ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.
ಒನ್‌ಪ್ಲಸ್ 7 ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ ಇಷ್ಟು ಬೆಲೆಗೆ ಯೋಗ್ಯವೇ ಎಂದು ತಿಳಿಯಬೇಕು ಎಂದರೆ ಇದರ ಫೀಚರ್ಸ್ ಬಗ್ಗೆ ತಿಳಿಯುವುದು ಅನಿವಾರ್ಯ. ಅದರಂತೆ ಈ ಫೋನ್ 6.4 ಇಂಚಿನ ಆಪ್ಟಿಕ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 1080×2280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾವನ್ನು ಡಿಸ್‌ಪ್ಲೇನ ಮೇಲ್ಭಾಗದಲ್ಲಿ ಟಿಯರ್ಡ್ರಾಪ್ ನಾಚ್‌ನಲ್ಲಿ ಇರಿಸಲಾಗಿದೆ.
ಒನ್‌ಪ್ಲಸ್ 7 ಪ್ರೊಸೆಸರ್ ವಿವರ: ಇನ್ನು ಈ ಫೋನ್ ಕ್ವಾಲ್ಕಾಮ್‌ನ ಶಕ್ತಿಯುತ ಸ್ನಾಪ್‌ಡ್ರಾಗನ್ 855 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು ಅಡ್ರಿನೋ 640 GPU ಜೊತೆಗೆ ಕಾರ್ಯನಿರ್ವಹಿಸುತ್ತದೆ. ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 855 ಫೋನ್ ಪ್ಲಾಟ್‌ಫಾರ್ಮ್ ನವೀನ ತಂತ್ರಜ್ಞಾನವನ್ನು ಹೊಂದಿದ್ದು, ಅದು ಎಐ-ನೆರವಿನ ಫೀಚರ್ಸ್ ಅನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಗೇಮಿಂಗ್ ಮತ್ತು ಫೋಟೋಗ್ರಫಿ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಒನ್‌ಪ್ಲಸ್ 7 ಕ್ಯಾಮೆರಾ ರಚನೆ :ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿ 16 ಮೆಗಾಪಿಕ್ಸೆಲ್ ಹಾಗೂ 5 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯೊಂದಿಗೆ ಪ್ಯಾಕ್ ಆಗಿದೆ. ಅಷ್ಟೇ ಅಲ್ಲದೆ ಈ ಕ್ಯಾಮೆರಾಗಳಿಗೆ ಡ್ಯುಯಲ್-ಎಲ್ಇಡಿ ಫ್ಲ್ಯಾಶ್ ಲೈಟ್ ಆಯ್ಕೆ ಸಹ ನೀಡಲಾಗಿದೆ.
ಈ ಕ್ಯಾಮೆರಾ ಸೆನ್ಸರ್‌ಗಳು ಅಲ್ಟ್ರಾಶಾಟ್, ನೈಟ್‌ಸ್ಕೇಪ್, ಸ್ಟುಡಿಯೋ ಲೈಟಿಂಗ್, ಪೋರ್ಟ್ರೇಟ್, ಪ್ರೊ ಮೋಡ್, ಎಚ್‌ಡಿಆರ್ ಸೇರಿದಂತೆ ಇನ್ನೂ ಅನೇಕ ಫೀಚರ್ಸ್ ಆಯ್ಕೆಯನ್ನು ನೀಡಲಿವೆ. ಉಳಿದಂತೆ ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುವ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, 30fps ನಲ್ಲಿ 1080 ಪಿಕ್ಸೆಲ್‌ನ ವಿಡಿಯೋಗಳನ್ನು ಶೂಟ್ ಮಾಡಬಹುದು.

ಒನ್‌ಪ್ಲಸ್ 7 ಬ್ಯಾಟರಿ ಹಾಗೂ ಇತರೆ: ಈ ಫೋನ್ 3700 mAh ಸಾಮರ್ಥ್ಯ್ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಒನ್‌ಪ್ಲಸ್ 6T ನಂತೆಯೇ ಇದೆ. ಈ ಫೋನ್ ಫೂರ್ಣ ಚಾರ್ಜ್ ಆಗಲು ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅದಾಗ್ಯೂ ಇದು ಫಾಸ್ಟ್ ಚಾರ್ಜ್ ಸೌಲಭ್ಯವನ್ನೂ ಸಹ ಹೊಂದಿದೆ.ಈ ಮೂಲಕ ಎರಡು ದಿನಗಳ ಬ್ಯಾಕಪ್ ಪಡೆದುಕೊಳ್ಳಬಹುದು.


Click it and Unblock the Notifications








