OnePlus: ಒನ್‌ಪ್ಲಸ್‌ನ ಈ ಪ್ರಮುಖ ಫೋನ್‌ಗಳಿಗೆ ಸಖತ್ ಅಫರ್! ದೀಪಾವಳಿಯಲ್ಲಿ ಇನ್ನಷ್ಟು ಸಂಭ್ರಮ
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ತಮ್ಮದೇ ಆದ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆಗೆ ಹೆಸರಾಗಿವೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಓಎಸ್ ಅಪ್‌ಡೇಟ್ ಹಾಗೂ ಇತರೆ ನವೀಕರಣಗಳ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಸಹ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ದೀಪಾವಳಿ ಹಿನ್ನೆಲೆ ಒನ್‌ಪ್ಲಸ್‌ನ ಈ ಪ್ರಮುಖ ಫೋನ್‌ಗಳಿಗೆ ಭರ್ಜರಿ ಆಫರ್ ನೀಡಲಾಗಿದೆ.
ಹೌದು, ಭಾರತದಲ್ಲಿನ ಯಾವುದೇ ಹಬ್ಬದ ಸಂಭ್ರಮಕ್ಕೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಜೊತೆಯಾಗಿ ನಿಲ್ಲುತ್ತವೆ. ಅದಕ್ಕೂ ಮಿಗಿಲಾಗಿ ಈಗ ಒನ್‌ಪ್ಲಸ್ (OnePlus) ತನ್ನ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ್ದು, ಈ ವಿಶೇಷ ಸೇಲ್‌ನಲ್ಲಿ ಒನ್‌ಪ್ಲಸ್ ನಾರ್ಡ್ 3 ಮತ್ತು ನಾರ್ಡ್ CE 3 (OnePlus Nord 3 and Nord CE 3) ಫೋನ್ ಸೇರಿದಂತೆ ಇನ್ನಿತರೆ ಫೋನ್‌ಗಳನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ ಅನ್ನೋದನ್ನು ನೋಡೋಣ ಬನ್ನಿ.

ಒನ್‌ಪ್ಲಸ್ ವಿಶೇಷ ಸೇಲ್: ಹಬ್ಬದ ಸೀಸನ್ ಹಿನ್ನೆಲೆ ಒನ್‌ಪ್ಲಸ್ ತನ್ನ ಎಲ್ಲಾ ಅಭಿಮಾನಿಗಳಿಗೆ ಸಂತಸದ ವಿಚಾರ ತಿಳಿಸಿದೆ. ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಟಿವಿಗಳು ಸೇರಿದಂತೆ ಇತರೆ ಹಲವು ಉತ್ಪನ್ನಗಳಿಗೆ ವಿಶೇಷ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಈ ಒನ್‌ಪ್ಲಸ್ ವಿಶೇಷ ಸೇಲ್ ನವೆಂಬರ್ 2 ರಂದು ಲೈವ್ ಆಗಿದ್ದು, ನವೆಂಬರ್ 10 ರವರೆಗೆ ನಡೆಯಲಿದೆ.
ಒನ್‌ಪ್ಲಸ್ ನಾರ್ಡ್ 3 ಮತ್ತು ನಾರ್ಡ್ CE 3 ಆಫರ್ ಬೆಲೆಗೆ: ಒನ್‌ಪ್ಲಸ್ ಈ ವರ್ಷ ಒನ್‌ಪ್ಲಸ್ ನಾರ್ಡ್ 3 5G ಮತ್ತು ಒನ್‌ಪ್ಲಸ್ ನಾರ್ಡ್ CE 3 5G ಸೇರಿದಂತೆ ವಿವಿಧ ನಾರ್ಡ್ ಸರಣಿಯ ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಬೆಲೆಯಲ್ಲಿ ವಿಶೇಷವಾದ ಹಾಗೂ ಸುಧಾರಿತ ಫೀಚರ್ಸ್ ಆಯ್ಕೆ ಪಡೆದಿದ್ದು, ಈ ಫೋನ್‌ಗಳಲ್ಲಿ ಈಗ ಈ ಬೆಲೆಗಳನ್ನು ಮತ್ತಷ್ಟು ಕಡಿಮೆ ಆಗಿರುವುದರಿಂದ ಹೆಚ್ಚಿನ ಜನರು ಸುಲಭವಾಗಿ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.
ಒನ್‌ಪ್ಲಸ್ ದೀಪಾವಳಿ ಹಬ್ಬದ ಭಾಗವಾಗಿ, ಒನ್‌ಪ್ಲಸ್ ನಾರ್ಡ್ 3 5G (OnePlus Nord 3 5G) ಖರೀದಿ ಮೇಲೆ 3,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ನೀಡುತ್ತಿದೆ. ಹಾಗೆಯೇ ಗ್ರಾಹಕರಿಗೆ ವಿಶೇಷ ಕೂಪನ್ ಅನ್ನೂ ಸಹ ನೀಡುತ್ತಿದೆ. ಇದರ ಮೌಲ್ಯ 3,000 ರೂ. ಗಳಾಗಿದೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಗ್ರಾಹಕರು 6 ತಿಂಗಳವರೆಗೆ ಯಾವುದೇ ವೆಚ್ಚದ ಇಎಮ್‌ಐ ನಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಇದರೊಂದಿಗೆ ಒನ್‌ಪ್ಲಸ್ ನಾರ್ಡ್ CE 3 (OnePlus Nord CE 3) ಸ್ಮಾರ್ಟ್‌ಫೋನ್ ಮೇಲೆ 2,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ನೀಡುತ್ತಿದ್ದು, ಈ ಫೋನ್‌ಗೂ ಸಹ 2,500 ವಿಶೇಷ ಬೆಲೆಯ ಕೂಪನ್ ಅನ್ನೂ ಸಹ ನೀಡಲಾಗುತ್ತಿದೆ. ಈ ಫೋನ್‌ಗಳ ಜೊತೆಗೆ ಒನ್‌ಪ್ಲಸ್ ನಾರ್ಡ್ CE 3 ಲೈಟ್ ಮತ್ತು ಒನ್‌ಪ್ಲಸ್ ನಾರ್ಡ್ CE 2 ಲೈಟ್ (OnePlus Nord CE 3 Lite, OnePlus Nord CE 2 Lite) ಸ್ಮಾರ್ಟ್‌ಫೋನ್‌ಗಳ ಮೇಲೆ 1,500 ರೂ.ಗಳ ಬ್ಯಾಂಕ್ ರಿಯಾಯಿತಿ ಘೋಷಣೆ ಮಾಡಲಾಗಿದೆ. ಹಾಗೆಯೇ ಗ್ರಾಹಕರು 3 ತಿಂಗಳವರೆಗೆ ಒನ್‌ಪ್ಲಸ್ ನಾರ್ಡ್ CE 2 ಲೈಟ್‌ಗೆ ಯಾವುದೇ ವೆಚ್ಚದ ಇಎಮ್‌ಐ ಅನ್ನು ಪಡೆಯಬಹುದು.
ಒನ್‌ಪ್ಲಸ್ 11R ಮತ್ತು ಒನ್‌ಪ್ಲಸ್ 10R ಗೆ ಆಫರ್ ಏನಿದೆ?: ಇನ್ನು ಒನ್‌ಪ್ಲಸ್ 11R 5G ಮತ್ತು ಒನ್‌ಪ್ಲಸ್ 11R 5G (OnePlus 11R 5G, OnePlus 11R 5G) ಸೋಲಾರ್ ರೆಡ್ ವಿಶೇಷ ಆವೃತ್ತಿಯ ಮೇಲೆ 2,000 ರೂ.ಗಳ ರಿಯಾಯಿತಿ ನೀಡಲಾಗಿದೆ. ಈ ಡಿವೈಸ್‌ಗಳನ್ನು 9 ತಿಂಗಳವರೆಗೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಬಹುದು. ಜೊತೆಗೆ ಒನ್‌ಪ್ಲಸ್ 10R 5G ಖರೀದಿಸಲು ಬಯಸುವ ಗ್ರಾಹಕರು 3,000 ತ್ವರಿತ ಬ್ಯಾಂಕ್ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಇಷ್ಟೇ ಅಲ್ಲದೆ ಈ ಫೋನ್ ಮೇಲೆ ಬರೋಬ್ಬರಿ 7,000ರೂ.ಗಳ ವಿಶೇಷ ಬೆಲೆ ಕೂಪನ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಒನ್‌ಪ್ಲಸ್ 10 ಪ್ರೊ 5G ಮತ್ತು ಒನ್‌ಪ್ಲಸ್ 10T 5G (OnePlus 10 Pro 5G, OnePlus 10T 5G) ಫೋನ್ ಖರೀದಿ ಮಾಡಲು ಇಚ್ಚಿಸುವವರು 5,000ರೂ.ಗಳ ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ಫೋನ್‌ಗಳ ಮೇಲೆ ಕ್ರಮವಾಗಿ 14,000 ಮತ್ತು 10,000 ರೂಪಾಯಿಗಳ ವಿಶೇಷ ಬೆಲೆ ಕೂಪನ್‌ಗಳನ್ನು ಪಡೆಯಬಹುದು.


Click it and Unblock the Notifications








