ಈ ಎಂಟ್ರಿ ಲೆವೆಲ್ ಫೋನಿಗೆ ಈಗ ಆಕರ್ಷಕ ರಿಯಾಯಿತಿ!..ಫೀಚರ್ಸ್ ಹೇಗಿವೆ?
ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ಸೆಳೆಯಲು ಒಂದಿಲ್ಲೊಂದು ಕೊಡುಗೆ ಘೋಷಣೆ ಮಾಡುತ್ತಾ ಸಾಗಿದೆ. ಸದ್ಯ ಎಂಟ್ರಿ ಲೆವೆಲ್ ಫೋನ್‌ಗಳಿಗೆ ರಿಯಾಯಿತಿ ಲಬ್ಯ ಮಾಡಿದ್ದು, ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಅಮೆಜಾನ್ ತಾಣದಲ್ಲಿ ಈಗ ಸ್ವದೇಶಿ ಲಾವಾ ಯುವ 2 ಪ್ರೊ ಫೋನ್ ಭಾರೀ ರಿಯಾಯಿತಿ ದರದ ಪಡೆದಿದೆ.
ಹೌದು, ಲೀಡಿಂಗ್ ಇ ಕಾಮರ್ಸ್ ಖ್ಯಾತಿಯ ಅಮೆಜಾನ್ ತಾಣದಲ್ಲಿ ಲಾವಾ ಯುವ 2 ಪ್ರೊ ಫೋನ್ ಶೇ. 22% ರಷ್ಟು ನೇರ ಡಿಸ್ಕೌಂಟ್ ಪಡೆದುಕೊಂಡಿದೆ. 4GB RAM + 64GB ವೇರಿಯಂಟ್ ಫೋನಿನ ಆಫರ್ ಬೆಲೆಯು 7,818ರೂ. ಗಳು ಆಗಿದ್ದು, ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್ ಕೊಡುಗೆ, ಬ್ಯಾಂಕ್ ಆಫರ್ ಹಾಗೂ ಇತರೆ ಪಡೆದರೆ ಅಧಿಕ ಡಿಸ್ಕೌಂಟ್ ಪಡೆಯಲು ಸಾಧ್ಯ.

ಇನ್ನು ಲಾವಾ ಯುವ 2 ಪ್ರೊ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್ ಪಡೆದುಕೊಂಡಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಹ ಪಡೆದಿದೆ. ಇನ್ನುಳಿದಂತೆ ಲಾವಾ ಯುವ 2 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಹಾಗೂ ವಿನ್ಯಾಸ ಹೀಗಿದೆ
ಲಾವಾ ಯುವ 2 ಪ್ರೊ ಮೊಬೈಲ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 269 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 60Hz ರಿಫ್ರೆಶ್ ರೇಟ್ ಅನ್ನು ಒದಗಿಸಲಿದೆ. ಇನ್ನು ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯ ವಿನ್ಯಾಸವನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಪವರ್ ಯಾವುದು
ಲಾವಾ ಮೊಬೈಲ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G37 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 OS ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 4 GB RAM ಮತ್ತು 64 GB ಆಂತರೀಕ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ 3 GB ವರ್ಚುವಲ್ RAM ಅನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಲಾವಾ ಯುವ 2 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಬ್ಯೂಟಿ, HDR, ನೈಟ್‌ಮೋಡ್, ಫೋರ್ಟ್ರೆಟ್ ಮೋಡ್, AI, ಪ್ರೊ, ಪನೋರಮಾ, ಸ್ಲೋ ಮೋಷನ್, ಫಿಲ್ಟರ್‌ಗಳು, GIF, ಟೈಮ್‌ಲ್ಯಾಪ್ಸ್ ನಂತಹ ಫೀಚರ್ಸ್ ಸಹ ಇವೆ.

ದೀರ್ಘ ಬ್ಯಾಟರಿ ಬ್ಯಾಕ್‌ಅಪ್
ಲಾವಾ ಸಂಸ್ಥೆಯ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿದೆ. ಇದು USB-C ಪೋರ್ಟ್ ಮೂಲಕ 10W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, 4G VoLTE, Wi-Fi 802.11ac, ಬ್ಲೂಟೂತ್ 5.1, GPS, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಪೋರ್ಟ್ ಹೊಂದಿದೆ.
ಕಲರ್ ಹಾಗೂ ಮೆಮೊರಿ ಆಯ್ಕೆ ಹೀಗಿದೆ
ಭಾರತದಲ್ಲಿ ಲಾವಾ ಯುವ 2 ಪ್ರೊ ಮೊಬೈಲ್ 4 GB RAM ಮತ್ತು 64 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಗ್ಲಾಸ್ ವೈಟ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಲ್ಯಾವೆಂಡರ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








