ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಖರೀದಿಸಲು ಇದಕ್ಕಿಂತ ಬೆಸ್ಟ್ ಆಫರ್ ಬೇಕೆ?
ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈಗ ಸೂಪರ್ ವ್ಯಾಲ್ಯೂ ಡೇಸ್ ಮಾರಾಟ ಶುರುವಾಗಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಕೊಡುಗೆಯಲ್ಲಿ ಕಾಣಿಸಿಕೊಂಡಿವೆ. ಈ ಸೇಲ್‌ನಲ್ಲಿ ನೂತನ ಮೊಬೈಲ್ ಖರೀದಿಸುವ ಗ್ರಾಹಕರು ಲಭ್ಯ ಇರುವ ಆಯ್ದ ಬ್ಯಾಂಕ್ ಆಫರ್ ಪಡೆದುಕೊಂಡರೆ, ಮತ್ತಷ್ಟು ರಿಯಾಯಿತಿ ಪಡೆಯಬಹುದು. ಸದ್ಯ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (SAMSUNG Galaxy S23 FE) ಮೊಬೈಲ್ ಭಾರೀ ಡಿಸ್ಕೌಂಟ್ ಪಡೆದಿದೆ.
ಹೌದು, ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ (SAMSUNG Galaxy S23 FE) ಮೊಬೈಲ್ ಶೇ. 56% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8 GB RAM + 128GB ಸ್ಟೋರೇಜ್ ವೇರಿಯಂಟ್ ಅನ್ನು ಖರೀದಿದಾರರು 34,999ರೂ. ಗಳ ಕೊಡುಗೆಯ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ರಿಯಾಯಿತಿ ಪಡೆದುಕೊಂಡರೆ, ಇನ್ನಷ್ಟು ಕೊಡುಗೆ ಸಹ ಸಿಗಲಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಪವರ್ ಪಡೆದಿದೆ. ಹಾಗೆಯೇ ಇದು 8 GB RAM + 256GB ವೇರಿಯಂಟ್ ಆಯ್ಕೆಗಳನ್ನು ಇಳಗೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (SAMSUNG Galaxy S23 FE) ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE - ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ 6.4 ಇಂಚಿನ ಡೈನಾಮಿಕ್ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದೆ. ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದು 83.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 1 SoC ಪ್ರೊಸೆಸರ್ ಪವರ್ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್ 14 ಬೆಂಬಲದ ಜೊತೆಗೆ ಕೆಲಸ ನಿರ್ವಹಿಸಲಿದೆ. ಅಲ್ಲದೇ 8GB RAM + 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ ಟ್ರಿಪಲ್ ರಿಯರ್ ಫ್ಲೋಟಿಂಗ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ದ್ವಿತೀಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಪಡೆದಿದೆ. ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಇದಲ್ಲದೆ 10 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಮೊಬೈಲ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿದೆ. ಇದು 30 ನಿಮಿಷಗಳಲ್ಲಿ ಫೋನ್ ಅನ್ನು ಶೂನ್ಯದಿಂದ 50% ಚಾರ್ಜಿಂಗ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi, GPS, NFC ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ.


Click it and Unblock the Notifications








