ವಿವೋದ ಈ ಸ್ಟೈಲಿಶ್ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಎರಡು ಸೆಲ್ಫಿ ಕ್ಯಾಮೆರಾ!
ಪ್ರಮುಖ ಲೀಡಿಂಗ್ ಮೊಬೈಲ್ ಕಂಪನಿಗಳಲ್ಲಿ ಒಂದಾದ ವಿವೋ ಕಂಪನಿಯು ಭಿನ್ನ ಶ್ರೇಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಮನ ಗೆದ್ದಿದ್ದು, ಈ ಮೊಬೈಲ್ ಬೆಲೆಯಲ್ಲಿ ಇದೀಗ ಭಾರೀ ಇಳಿಕೆ ಕಂಡಿದೆ. ಈ ಮೂಲಕ ವಿವೋ ಪ್ರಿಯರಿಗೆ ಸಖತ್ ಖುಷಿ ನೀಡಿದೆ.
ಹೌದು, ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ವಿವೋ ಕಂಪೆನಿಯ ವಿವೋ V23 ಪ್ರೊ 5G ಮೊಬೈಲ್ ಬೆಲೆಯಲ್ಲಿ ಈಗ 22% ರಷ್ಟು ಇಳಿಕೆ ಆಗಿದೆ. ಈ ಮೊಬೈಲ್‌ನ 8GB RAM + 128GB ವೇರಿಯಂಟ್ 41,990ರೂ. ಆಗಿದ್ದು, ಸದ್ಯ ಅಮೆಜಾನ್ ಕೊಡುಗೆಯಲ್ಲಿ 32,728ರೂ. ಗಳಿಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಅಂದಹಾಗೆ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದೆ.

ಇನ್ನು ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಹಾಗೆಯೇ ಮುಂಭಗಾದಲ್ಲಿ ಈ ಫೋನ್ ಡ್ಯುಯೆಲ್ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಜೊತೆಗೆ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಪಡೆದುಕೊಂಡಿದೆ. ಹಾಗಾದರೇ ವಿವೋ V23 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ವಿವೋ V23 ಪ್ರೊ 5G ಡಿಸ್‌ಪ್ಲೇ ಪ್ರೊಸೆಸರ್ ಮಾಹಿತಿ : ವಿವೋ V23 ಪ್ರೊ 5G ಮೊಬೈಲ್ 1,080 x 2,376 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಫುಲ್ HD+ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.
ಅಲ್ಲದೇ ಈ ಫೋನ್ ವೇಗದ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಕೂಡಾ ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಬಹುದಾಗಿದೆ.
ವಿವೋ V23 ಪ್ರೊ 5G ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾ ಮಾಹಿತಿ : ವಿವೋ V23 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಎಫ್/1.88 ಲೆನ್ಸ್ ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಪಡೆದಿದ್ದು, ಇದರ ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ f/2.4 ಅಪರ್ಚರ್ ಲೆನ್ಸ್ ಪಡೆದಿದೆ.
ಇದಲ್ಲದೆ ಈ ಮೊಬೈಲ್ ಮುಂಭಾಗದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು 8 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳು ಪಡೆದಿದೆ.
ವಿವೋ V23 ಪ್ರೊ 5G ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆಗಳು : ವಿವೋ V23 ಪ್ರೊ 5G ಮೊಬೈಲ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಜೊತೆಗೆ ಇದಕ್ಕೆ ಪೂರಕವಾಗಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, USB ಟೈಪ್-C, USB OTG ಮತ್ತು ಬ್ಲೂಟೂತ್ v5.2 ಸೌಲಭ್ಯ ಪಡೆದಿದೆ.


Click it and Unblock the Notifications