iPhone 15 ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಈ ಆಫರ್ ಮಿಸ್ ಮಾಡ್ಕೋಬೇಡಿ!
ಆನ್‌ಲೈನ್ ಶಾಪಿಂಗ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024 (Amazon Great Indian Festival sale 2024) ಇದೇ ಸೆಪ್ಟೆಂಬರ್ 27 ರಿಂದ ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಈ ವಿಶೇಷ ಮಾರಾಟದಲ್ಲಿ ಖರೀದಿದಾರರು ನಿರೀಕ್ಷೆ ಮಾಡಿರದ ಡಿಸ್ಕೌಂಟ್ ಬೆಲೆಗೆ ಸ್ಮಾರ್ಟ್‌ಫೋನ್, ಸ್ಮಾರ್ಟ್ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024 (Amazon Great Indian Festival sale 2024) ಭಾರತದಲ್ಲಿ ಇದೇ ಸೆಪ್ಟೆಂಬರ್ 27 ರಂದು ಶುರು ಆಗಲಿದೆ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರು ಇದೇ ಸೆಪ್ಟೆಂಬರ್ 26 ರಂದು ಅಕ್ಸೆಸ್ ಅನ್ನು ಪಡೆಯುತ್ತಾರೆ. ಈ ಸೇಲ್‌ನಲ್ಲಿ ಆಪಲ್ ಸಂಸ್ಥೆಯ ಐಫೋನ್ 15 (iPhone 15) ಮೊಬೈಲ್ ಬೊಂಬಟ್ ಡಿಸ್ಕೌಂಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಐಫೋನ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ.

ಐಫೋನ್ 15 (iPhone 15) ಮೊಬೈಲ್ ಶೇ. 17% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 128 GB ಸ್ಟೋರೇಜ್ ವೇರಿಯಂಟ್ 65,900ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಆಗಲಿದೆ. ಅಲ್ಲದೇ ಇದರೊಂದಿಗೆ ಇನ್ನಷ್ಟು ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಹಾಗಾದರೇ ಆಪಲ್ ಐಫೋನ್ 15 (iPhone 15) ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ
ಐಫೋನ್ 15 - ಫೀಚರ್ಸ್ ಹೀಗಿವೆ
ಐಫೋನ್ 15 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಸೌಲಭ್ಯ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1600 nits ಬ್ರೈಟ್ನಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಮಾದರಿಯ ( ಪಿಲ್ ಶೇಪ್ ಮಾದರಿ ) ಪಂಚ್ ಹೋಲ್ ರಚನೆ ಹೊಂದಿದ್ದು, ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಹೊಂದಿದೆ.
ಐಫೋನ್ 15 ಮೊಬೈಲ್ A16 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್ ios 16 ಓಎಸ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128 GB, 256 GB, 512 GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.
ಐಫೋನ್ 15 ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಅವುಗಳಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಅನ್ನು ಪಡೆದಿದೆ. ಹಾಗೆಯೇ ಇದು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.
ಐಫೋನ್ 15 ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಐಫೋನ್ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆ ಅನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಹಾಗೆಯೇ ವೈರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಕೂಡಾ ಪಡೆದಿದೆ. ಅಲ್ಲದೇ ಇದು ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಇದೆ.


Click it and Unblock the Notifications








