Home
ಸುದ್ದಿಜಾಲ

ನೋಕಿಯಾದ ಈ ಕಲರ್‌ಫುಲ್‌ ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

ಟೆಕ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಇನ್ನು ಗ್ರಾಹಕರನ್ನು ಸೆಳೆಯುತ್ತಿವೆ. ಅವುಗಳ ಪೈಕಿ ಕಂಪನಿಯ ಇತ್ತೀಚಿನ ನೋಕಿಯಾ G42 5G ಮೊಬೈಲ್‌ ಸಹ ಸೇರಿದ್ದು, ಈ ಮೊಬೈಲ್‌ ಇದೀಗ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಬಿಗ್‌ ಡಿಸ್ಕೌಂಟ್‌ ಹೊಂದಿದೆ. ಈ ಮೂಲಕ ಅಗ್ಗದ ದರದಲ್ಲಿ 5G ಫೋನ್‌ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಖುಷಿ ನೀಡಿದೆ. ಇನ್ನು ನೋಕಿಯಾದ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರುವುದು ಹೈಲೈಟ್‌ ಅಂಶಗಳಲ್ಲಿ ಒಂದೆನಿಸಿದೆ.

ಹೌದು, ದಿಗ್ಗಜ ಇ ಕಾಮರ್ಸ್ ಅಮೆಜಾನ್‌ ನಲ್ಲಿ ನೋಕಿಯಾ G42 5G ಮೊಬೈಲ್‌ ಮೊಬೈಲ್‌ ಶೇ. 25% ರಷ್ಟು ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ 6GB RAM + 128GB ವೇರಿಯಂಟ್‌ ಫೋನ್‌ ಆಫರ್‌ನಲ್ಲಿ 9,799ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ. ಇದರೊಂದಿಗೆ ಈ ಫೋನಿಗೆ ಕೆಲವು ಆಯ್ದ ಬ್ಯಾಂಕ್‌ ಆಫರ್‌ ಸಹ ಲಭ್ಯ ಇವೆ.

ನೋಕಿಯಾದ ಈ ಕಲರ್‌ಫುಲ್‌ ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

ಇನ್ನು ನೋಕಿಯಾದ ಈ ಮೊಬೈಲ್‌ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಹಾಗಾದರೇ ಈ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನೋಕಿಯಾ G42 5G - ಫೀಚರ್ಸ್‌ ಹೀಗಿವೆ
ನೋಕಿಯಾ G42 5G ಫೋನ್‌ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಅನ್ನು ಒಳಗೊಂಡಿದ್ದು, ಇದು 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆ ಇದ್ದು, 450 ನಿಟ್ಸ್ ಕನಿಷ್ಠ ಹಾಗೂ 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೊಂದಿಗೆ ಕೆಲಸ ಮಾಡುತ್ತದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ 3 ಮೂಲಕ ಹೆಚ್ಚಿನ ರಕ್ಷಣೆ ಪಡೆದಿದೆ.

ನೋಕಿಯಾ G42 5G ಮೊಬೈಲ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ ಚಿಪ್‌ಸೆಟ್‌ ಪ್ರೊಸೆಸರ್, 8nm ಪ್ರೊಸೆಸರ್‌ ಜೊತೆಗೆ ಅಡ್ರಿನೋ 619 GPU ಬಲ ಸಹ ಪಡೆದುಕೊಂಡಿದೆ. ಇದರ ಜೊತೆ ಜೊತೆಗೆ 6GB RAM + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ. ಅಲ್ಲದೇ ಹೆಚ್ಚುವರಿ ಸ್ಟೋರೇಜ್‌ಗಾಗಿ ಎಸ್‌ಡಿ ಕಾರ್ಡ್ ಆಯ್ಕೆ ನೀಡಲಾಗಿದ್ದು, 1TB ವರೆಗೆ ಹೆಚ್ಚಿಗೆ ಮಾಡಬಹುದಾಗಿದೆ. ಈ ಮೊಬೈಲ್‌ ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ಪಡೆದಿದೆ.

ನೋಕಿಯಾ G42 5G ಮೊಬೈಲ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್‌ನಲ್ಲಿ ಇದೆ. ಇನ್ನುಳಿದ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸೆಲ್‌ ಡೀಪ್‌ ಮತ್ತು 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್‌ ಅನ್ನು ಹೊಂದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್‌, ನೈಟ್ ಮೋಡ್ 2.0, AI ಪೋರ್ಟ್ರೇಟ್ ಮತ್ತು OZO 3D ಆಡಿಯೊ ಕ್ಯಾಪ್ಚರ್ ಸೌಲಭ್ಯ ಸಹ ಈ ಫೋನ್‌ನಲ್ಲಿ ಇದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್‌ FF ಫ್ರಂಟ್ ಕ್ಯಾಮೆರಾ ಆಯ್ಕೆ ಸ್ಪೆಷಲ್‌ ಎನಿಸಿದೆ.

ನೋಕಿಯಾ G42 5G ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಒಂದು ಬಾರಿ ಪೂರ್ಣ ಚಾರ್ಜಿಂಗ್‌ ಮಾಡಿದರೆ ಸುಮಾರು ಮೂರು ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಅಲ್ಲದೇ ಇದು ರೀಚಾರ್ಜ್‌ಗಾಗಿ 20W ವೇಗದ ಚಾರ್ಜಿಂಗ್ (QC3.0 ಮತ್ತು PD3.0) ಅನ್ನು ಸಪೋರ್ಟ್ ಮಾಡುತ್ತದೆ.

Best Mobiles in India

English summary
Huge Price Drop on Nokia G42 5G on Amazon India. check out offer Price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+