Home
ಸುದ್ದಿಜಾಲ

ಐಫೋನ್ 15 ಸರಣಿ ಲಾಂಚ್‌ ಆಗಿದ್ದೇ ತಡ ಐಫೋನ್ 14,14 ಪ್ಲಸ್‌ ಬೆಲೆಯಲ್ಲಿ ಇಷ್ಟೊಂದು ಇಳಿಕೆಯೇ?

ಆಪಲ್‌ ಐಫೋನ್ 15 ಸರಣಿಯ ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಮೂಲಕ ಸಾಕಷ್ಟು ಆಪಲ್ ಪ್ರಿಯರ ಕುತೂಹಲ ತಣಿಸಿದೆ. ಅದಾಗ್ಯೂ ಆಪಲ್‌ ಪ್ರಿಯರಿಗೆ ಮತ್ತಷ್ಟು ಸಂತಸ ನೀಡಲು ಐಫೋನ್ 14 (iPhone 14) ಮತ್ತು ಐಫೋನ್ 14 ಪ್ಲಸ್ (iPhone 14 Plus) ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ಯಾವುದೇ ಹೊಸ ಸರಣಿಯ ಫೋನ್‌ಗಳು ಲಾಂಚ್ ಆದರೆ ಅದರ ಹಿಂದಿನ ಸರಣಿಯ ಫೋನ್‌ಗಳಿಗೆ ಡಿಸ್ಕೌಂಟ್‌ ನೀಡುವುದು ಸಂಪ್ರದಾಯದಂತೆ ಆಗಿದೆ. ಇದರ ಭಾಗವಾಗಿಯೇ ಈಗ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಗಳಿಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ಹಾಗಿದ್ರೆ, ಯಾವ ವೇರಿಯಂಟ್‌ಗೆ ಎಷ್ಟು ಬೆಲೆ, ಫೀಚರ್ಸ್‌ ಏನು ಎಂಬ ಹಲವಾರು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 15 ಸರಣಿ ಲಾಂಚ್‌ ಆಗಿದ್ದೇ ತಡ ಐಫೋನ್ 14 ಬೆಲೆಯಲ್ಲಿ ಇಷ್ಟೊಂದು ಇಳಿಕೆಯೇ?

ಐಫೋನ್ 14 ಬೆಲೆಯಲ್ಲಿ ಇಳಿಕೆ: ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ನಲ್ಲಿನ ಬೆಲೆ ಗಮನಾರ್ಹವಾಗಿ ಇಳಿಕೆಯಾಗಿದೆ. ವಾಂಡರ್‌ಲಸ್ಟ್ ಈವೆಂಟ್‌ನಲ್ಲಿ(apple Wanderlust event) ಅನಾವರಣಗೊಂಡ ಐಫೋನ್‌ 15 ಸರಣಿಯ ಸಂಭ್ರಮದ ಹಿನ್ನೆಲೆ ಈ ಬೆಲೆ ಬದಲಾವಣೆ ಮಾಡಲಾಗಿದೆ. ಈ ಲಾಂಚ್‌ನಲ್ಲಿ ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಮತ್ತು ಐಫೋನ್‌ 15 ಪ್ರೊ ಮ್ಯಾಕ್ಸ್‌ ಸೇರಿವೆ.

ಇನ್ನು ಆಪಲ್‌ನ ಅಧಿಕೃತ ವೆಬ್‌ಸೈಟ್ ನಲ್ಲಿ ಉಲ್ಲೇಖ ಮಾಡಿರುವಂತೆ ಐಫೋನ್ 14 ನ ಬೆಲೆಯನ್ನು 128GB ವೇರಿಯಂಟ್‌ಗೆ 69,900 ರೂ.ಗೆ ಇಳಿಸಲಾಗಿದೆ. ಇದರ ಸಾಮಾನ್ಯ ದರ 79,900 ರೂ.ಗಳಾಗಿತ್ತು. ಅದೇ ರೀತಿ ಪ್ಲಸ್ ರೂಪಾಂತರದ ಬೆಲೆಯನ್ನು 128GB ವೇರಿಯಂಟ್‌ಗೆ 79,900ರೂ.ಗಳಿಗೆ ಇಳಿಸಲಾಗಿದೆ. ಇದರ ಸಾಮಾನ್ಯ ದರ 89,900ರೂ.ಇತ್ತು. ಈ ಮೂಲಕ ಗ್ರಾಹಕರು ಹತ್ತು ಸಾವಿರದ ವರೆಗೆ ಹಣ ಉಳಿತಾಯ ಮಾಡಬಹುದು. ಹಾಗೆಯೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿ ಇನ್ನೂ ಕಡಿಮೆ ದರಕ್ಕೆ ಖರೀದಿಸಬಹುದಾಗಿದೆ.

ಐಫೋನ್ 14, ಐಫೋನ್ 14 ಪ್ಲಸ್‌ ಫೀಚರ್ಸ್‌: ಐಫೋನ್ 14 ಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಜೊತೆಗೆ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಈ ಮೂಲಕ ಅದ್ಭುತ ದೃಶ್ಯ ಅನುಭವವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ತೋರಿಸುವ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ HDR ಕಂಟೆಂಟ್‌ ಅನ್ನೂ ಸಹ ಬೆಂಬಲಿಸುತ್ತದೆ. ಉಳಿದಂತೆ 1200 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಐಫೋನ್ 14 ಪ್ಲಸ್ ಐಫೋನ್ 14 ಅನ್ನೇ ಹೋಲಿದರೂ ಸಹ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಐಫೋನ್ 14 ಪ್ಲಸ್ 6.7 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಐಫೋನ್ 14 ಪ್ರೊ ಮ್ಯಾಕ್ಸ್‌ನ ಗಾತ್ರದಂತೆಯೇ ಇದೆ. ಆದರೆ, ವಿಭಿನ್ನ ರೀತಿಯ ನಾಚ್‌ನೊಂದಿಗೆ ಕಾಣಿಸಿಕೊಂಡಿದೆ. ಐಫೋನ್ 14 ಪ್ಲಸ್ ಡೈನಾಮಿಕ್ ಐಲ್ಯಾಂಡ್ ಶೈಲಿಯ ನಾಚ್ ಅನ್ನು ಹೊಂದಿದ್ದು, ಈ ಮೂಲಕ ಹೊಸ ಐಫೋನ್‌ 15 ನಲ್ಲಿ ಇರುವ ಫೀಚರ್ಸ್ ಅನುಭವವನ್ನೇ ಪಡೆಯಬಹುದು.

ಇದರೊಂದಿಗೆ ಐಫೋನ್ 14 ಪ್ಲಸ್ A15 ಬಯೋನಿಕ್ ಚಿಪ್‌ನ ಸುಧಾರಿತ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತೆ. ಇದೇ ಚಿಪ್‌ ಅನ್ನು ಐಫೋನ್‌ 13 ಶ್ರೇಣಿಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಈ ಮೂಲಕ ನೀವು ಐಫೋನ್‌ 14 ಹಾಗೂ ಐಫೋನ್‌ 13 ಫೋನ್‌ಗಳಲ್ಲಿ ಒಂದೇ ರೀತಿಯ ಕಾರ್ಯಕ್ಷಮತೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಐಫೋನ್ 15 ಸರಣಿ ಲಾಂಚ್‌ ಆಗಿದ್ದೇ ತಡ ಐಫೋನ್ 14 ಬೆಲೆಯಲ್ಲಿ ಇಷ್ಟೊಂದು ಇಳಿಕೆಯೇ?

ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ಐಫೋನ್ 14 ಪ್ಲಸ್ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ ಐಫೋನ್ 14 ನ ಕ್ಯಾಮೆರಾ ಕಾರ್ಯಕ್ಷಮತೆಯು ಅದರ ಹಿಂದಿನ ಮಾದರಿಗಳಿಗಿಂತ ಉತ್ತಮವಾಗಿದೆ ಎಂದು ಆಪಲ್ ಹೇಳಿಕೊಂಡಿದೆ. ಈ ಮೂಲಕ ಉತ್ತಮ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

Best Mobiles in India

English summary
Amid the launch of the iPhone 15 series, iPhone 14 and iPhone 14 Plus have received huge discounts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+