ಭರ್ಜರಿ ಆಫರ್‌ನೊಂದಿಗೆ ಈ ಅತ್ಯುತ್ತಮ ಏರ್ ಕೂಲರ್‌ಗಳು ಲಭ್ಯ!
ಬೇಸಿಗೆಯ ತಾಪ ಜನರನ್ನು ಇನ್ನಿಲ್ಲಂತೆ ಕಾಡುತ್ತಿದೆ. ಅದರಲ್ಲೂ ನಗರದಲ್ಲಿ ಜನರು ತಾರಸಿ ಮೇಲೆ ಮಲಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ, ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಲು ಈ ಆಫರ್ ಸದುಪಯೋಗಪಡಿಸಿಕೊಳ್ಳಬಹುದು. ಅಂದರೆ, ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಅತ್ಯುತ್ತಮವಾದ ಏರ್ ಕೂಲರ್‌ಗಳು ಭಾರೀ ಡಿಸ್ಕೌಂಟ್‌ನೊಂದಿಗೆ ಕಾಣಿಸಿಕೊಂಡಿವೆ.
ಹೌದು, ಬೇಸಿಗೆ ಕಾಲದ ಉದ್ದೇಶಕ್ಕೆ ಮಾತ್ರವಲ್ಲದೆ ಮನೆಯಲ್ಲಿ ತಂಪಾದ ಗಾಳಿಯನ್ನು ಪಡೆದುಕೊಳ್ಳಲು ಹಲವರು ವಿವಿಧ ರೀತಿಯ ಫೀಚರ್ಸ್ ಇರುವ ಏರ್ ಕೂಲರ್‌ಗಳನ್ನು ಖರೀದಿ ಮಾಡುತ್ತಾರೆ.ಆದರೆ, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್‌ನಲ್ಲಿ 50%ಗೂ ಅಧಿಕ ಡಿಸ್ಕೌಂಟ್ ನೀಡಿದೆ. ಹಾಗಿದ್ರೆ, ಕೆಲವು ಪ್ರಮುಖ ಏರ್ ಕೂಲರ್‌ಗಳ ಬಗ್ಗೆ ತಿಳಿದುಕೊಳ್ಳಿ. ವಿಶೇಷ ಎಂದರೆ ಇವು ಐದು ಸಾವಿರದ ಆಸುಪಾಸಿನಲ್ಲಿ ಲಭ್ಯವಾಗುತ್ತಿವೆ.

ಕ್ಯಾಸಾ ಕೋಪನ್ ಹ್ಯಾಗನ್: ಕ್ಯಾಸಾ ಕೋಪನ್ ಹ್ಯಾಗನ್ ಏರ್‌ಕೂಲರ್ 15 ಲೀಟರ್ ವಾಟರ್ ಸಾಮರ್ಥ್ಯ ಹೊಂದಿದ್ದು, ಇದರೊಂದಿಗೆ ಆಂಟಿ ಬ್ಯಾಕ್ಟೀರಿಯಲ್ ಹನಿಕೋಂಬ್ ಪ್ಯಾಡ್‌ಗಳು,ಟರ್ಬೊ ಫ್ಯಾನ್, ಆಟೋ ಸ್ವಿಂಗ್‌ನೊಂದಿಗೆ ಪವರ್‌ಫುಲ್ ಏರ್ ಥ್ರೋ ವನ್ನು ಹೊಂದಿದೆ. ಇದೆಲ್ಲದರ ಜೊತೆಗೆ ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಕೆ ಮಾಡುತ್ತದೆ. ಇನ್ನುಳಿದಂತ ಮೂರು ಸ್ಪೀಡ್ ಕಂಟ್ರೋಲ್ ಆಯ್ಕೆ ನೀಡಲಾಗಿದೆ. ನೀವಿದನ್ನು 4,499ರೂ. ಗಳಿಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 9,999ರೂ. ಗಳು.
ಬಜಾಜ್ PX 97 ಟಾರ್ಕ್: ಈ ಏರ್ ಕೂಲರ್ 36 ಲೀಟರ್ ನೀರಿನ ಸಾಮರ್ಥ್ಯ ಹೊಂದಿದ್ದು, ಡುರಾ ಮರೀನ್ ಪಂಪ್, ಟರ್ಬೋ ಫ್ಯಾನ್ ಟೆಕ್ನಾಲಜಿ, ಪವರ್‌ಫುಲ್ ಏರ್ ಥ್ರೋ ಸೇರಿದಂತೆ ಮೂರು ಸ್ಪೀಡ್ ಕಂಟ್ರೋಲ್ ಆಯ್ಕೆ ಪಡೆದುಕೊಂಡಿದೆ. ಈ ಡಿವೈಸ್ ಒಂದು ಕೋಣೆಗೆ ಸಾಕಾಗುವಷ್ಟು ತಂಪಾದ ಗಾಳಿಯನ್ನು ನೀಡುತ್ತದೆ. ಇನ್ನು ಅಮೆಜಾನ್‌ನಲ್ಲಿ 40% ಡಿಸ್ಕೌಂಂಟ್ ಪಡೆದುಕೊಂಡಿದ್ದು, 5,849ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇದರ ಮೂಲ ದರ 9,790ರೂ. ಗಳು.

ಸಿಂಫನಿ ಡಯಟ್: ಇದು 12ಲೀಟರ್ ನೀರಿನ ಸಾಮರ್ಥ್ಯ ಪಡೆದಿದ್ದು, ಹನಿಕಾಂಬ್ ಪ್ಯಾಡ್, ಶಕ್ತಿಯುತ ಬ್ಲೋವರ್, ಐ-ಪ್ಯೂರ್ ಟೆಕ್ನಾಲಜಿಯಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳಲಿದ್ದು, ಅಮೆಜಾನ್‌ನಲ್ಲಿ 22% ಡಿಸ್ಕೌಂಟ್ ಪಡೆದುಕೊಳ್ಳುವ ಮೂಲಕ 5,699ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಸಾಮಾನ್ಯ ದರ 7,299ರೂ. ಗಳಾಗಿದೆ.
ಹಿಂದ್‌ವೇರ್ ಸ್ಮಾರ್ಟ್ ಅಪ್ಲೈಯನ್ಸ್ ಕ್ರೂಜೊ: ಈ ಏರ್ ಕೂಲರ್ ಬಹಳ ದೊಡ್ಡದಾಗಿದ್ದು, 46 ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ. ಬ್ಯಾಕ್ಟೋ ಶೀಲ್ಡ್ ಹನಿಕೋಂಬ್ ಪ್ಯಾಡ್,
ಆಸಿಲೇಟಿಂಗ್ ಫ್ಯಾನ್, 4 ಕ್ಯಾಸ್ಟರ್ ವೀಲ್ಸ್, ಕಂಪ್ಲೀಟ್ ಶಟ್ ಲೌವರ್ಸ್ ಫೀಚರ್ಸ್ ಪಡೆದುಕೊಂಡಿದ್ದು, ಬರೋಬ್ಬರಿ 59% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೂಲಕ 6,134ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ಬೆಲೆ 14,990ರೂ. ಗಳು.
ಬಜಾಜ್ ಫ್ರಿಯೊ : ಈ ಏರ್ ಕೂಲರ್ 23 ಲೀಟರ್ ವಾಟರ್ ಸಾಮರ್ಥ್ಯ ಹೊಂದಿದ್ದು, ಇದು ಹನಿಕೋಂಬ್ ಪ್ಯಾಡ್‌ಗಳು, ಟೈಫೂನ್ ಬ್ಲೋವರ್ ಟೆಕ್ನಾಲಜಿ, ಪವರ್‌ಫುಲ್ ಏರ್ ಥ್ರೋ ಹಾಗೂ ಮೂರು ಸ್ಪೀಡ್ ಕಂಟ್ರೋಲ್ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ ಇದನ್ನು ಕಂಟ್ರೋಲ್ ಮಾಡಲು ರಿಮೋಟ್ ಆಯ್ಕೆ ನೀಡಲಾಗಿದೆ. ಇದು ಅಮೆಜಾನ್‌ನಲ್ಲಿ 32% ರಿಯಾಯಿತಿ ಪಡೆದುಕೊಂಡಿದ್ದು, 4,874ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 7,190ರೂ. ಗಳು.

ಬಜಾಜ್ PMH 36 ಟಾರ್ಕ್: ಈ ಏರ್ ಕೂಲರ್ 36 ಲೀಟರ್ ನೀರಿನ ಸಾಮರ್ಥ್ಯ ಹೊಂದಿದ್ದು, ಇದು ಸುಧಾರಿತ ಕೂಲಿಂಗ್ ಅನುಭವಕ್ಕಾಗಿ ಐಸ್ ಕ್ಯೂಬ್‌ಗಳನ್ನು ಸಂಗ್ರಹಿಸಲು ಐಸ್ ಚೇಂಬರ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕೊಲ್ಲುವ ಮತ್ತು ತಡೆಯುವ ಬ್ಯಾಕ್ಟೀರಿಯಾ ವಿರೋಧಿ ತಂತ್ರಜ್ಞಾನ ಸಹ ಇದರಲ್ಲಿದೆ. ಜೊತೆಗೆ ಗಾಳಿಯ ಸಮರ್ಥ ಪರಿಚಲನೆಗಾಗಿ ಟರ್ಬೊ ಫ್ಯಾನ್ ತಂತ್ರಜ್ಞಾನ ಹೊಂದಿದೆ. ಇದರ ಸಾಮಾನ್ಯ ದರ 9,190ರೂ.ಗಳಾಗಿದ್ದು, ನೀವು 5,849ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.


Click it and Unblock the Notifications








