ಡಿಸ್‌ಪ್ಲೇ ಇಲ್ಲದ ಸ್ಮಾರ್ಟ್‌ಫೋನ್ ಲಾಂಚ್!..ದಂಗಾದ ಮೊಬೈಲ್ ಮಾರುಕಟ್ಟೆ!
ಟೆಕ್ ಕೇತ್ರವು ದಿನದಿಂದ ದಿನಕ್ಕೆ ಮತ್ತಷ್ಟು ಸ್ಮಾರ್ಟ್ ಆಗುತ್ತಾ ಸಾಗಿದ್ದು, ಅಚ್ಚರಿಯ ಡಿವೈಸ್‌ಗಳು ಮಾರುಕಟ್ಟೆಗೆ ಪರಿಚಯವಾಗುತ್ತಲಿವೆ. ಲಗ್ಗೆ ಇಡುತ್ತಿರುವ ಹಲವು ಸ್ಮಾರ್ಟ್ ಸಾಧನಗಳು ಬಳಕೆದಾರರಿಗೆ ಉಪಯುಕ್ತ ಆಗಿವೆ. ಇದೀಗ ಮಾರುಕಟ್ಟೆಗೆ ಪರಿಚಿತವಾಗಿದೆ ಡಿಸ್‌ಪ್ಲೇ ಇಲ್ಲದ ಸ್ಮಾರ್ಟ್‌ಫೋನ್...
ಹೌದು, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್ ಹ್ಯೂಮನ್ ಇತ್ತೀಚಿಗೆ ಐ ಪಿನ್ (Humane Ai Pin) ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್ ಮೊಬೈಲ್ AI ಅಸಿಸ್ಟಂಟ್ ಆಗಿ ಕಾರ್ಯ ನಿರ್ವಹಿಸುವ ಧರಿಸಬಹುದಾದ ಡಿವೈಸ್ ಆಗಿದೆ. ಇದನ್ನು ಲ್ಯಾಪಲ್ ಪಿನ್‌ನಂತೆ ಧರಿಸಲಾಗುತ್ತದೆ ಮತ್ತು ಬಳಕೆದಾರರು ಧ್ವನಿ ಆದೇಶಗಳ ಮತ್ತು ಸನ್ನೆಗಳ ಮೂಲಕ ಡಿವೈಸ್ ನೊಂದಿಗೆ ಸಂವಹನ ಮಾಡಬಹುದಾಗಿದೆ.

ವಿಶೇಷವೆಂದರೆ ಈ ಡಿವೈಸ್ ಡಿಸ್‌ಪ್ಲೇ ಅನ್ನು ಹೊಂದಿಲ್ಲ. ಜೊತೆಗೆ ಇದು ಬಳಕೆದಾರರ ಅಂಗೈಗೆ ಲೇಸರ್ ಮೂಲಕ ಟೆಕ್ಸ್ಟ್ ಮತ್ತು ಫೋಟೋಗಳನ್ನು ಪ್ರೊಜೆಕ್ಟ್ ಮಾಡಬಹುದು. ಅಲ್ಲದೇ ವಸ್ತುಗಳನ್ನು ಗುರುತಿಸಲು ಬಿಲ್ಟ್‌ಇನ್ ಕ್ಯಾಮೆರಾವನ್ನು ಸಹ ಹೊಂದಿದೆ. ಅಂದಹಾಗೆ ಮಾಜಿ Apple (AAPL) ಕಾರ್ಯನಿರ್ವಾಹಕರು ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಎಐ ಪಿನ್ ಡಿವೈಸ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಪ್ರೊಸೆಸರ್‌ನಲ್ಲಿ ಮೀಸಲಾದ ಕ್ವಾಲ್ಕಾಮ್ AI ಎಂಜಿನ್ನೊಂದಿಗೆ ಕೆಲಸ ನಿರ್ವಹಿಸುತ್ತದೆ. 'ವೈಯಕ್ತಿಕ ಸ್ಪೀಕರ್' ಅಥವಾ ಜೋಡಿಯಾಗಿರುವ ಬ್ಲೂಟೂತ್ ಹೆಡ್‌ಫೋನ್‌ಗಳ ಮೂಲಕ ಪಿನ್ ಧರಿಸಿದವರ ಜೊತೆಗೆ ಸಂವಹನ ನಡೆಸುತ್ತದೆ. ಇದು ಮೈಕ್ರೊಫೋನ್ ಮತ್ತು ಸಂವೇದಕಗಳ ಹೋಸ್ಟ್ ಅನ್ನು ಸಹ ಪಡೆದುಕೊಂಡಿದೆ.

ಈ ಎಐ ಪಿನ್ ಡಿವೈಸ್ ಅತ್ಯುತ್ತಮ ಸಾಧನ ಎನಿಸಿದ್ದು, ಇದನ್ನು ಸ್ಮಾರ್ಟ್‌ಫೋನ್ ಅಥವಾ ಇತರ ಕಂಪ್ಯಾನಿಯನ್ ಡಿವೈಸ್ ಜೊತೆಗೆ ಲಿಂಕ್ ಮಾಡುವ ಅಗತ್ಯವಿಲ್ಲ. ಆದಾಗ್ಯೂ, ಬಳಕೆದಾರರು Humane.center ವೆಬ್‌ಸೈಟ್ ಮೂಲಕ ಫೋಟೋಗಳು, ವೀಡಿಯೊಗಳು ಒಳಗೊಂಡಂತೆ ತಮ್ಮ ಡೇಟಾವನ್ನು ನಿರ್ವಹಿಸಬಹುದು ಹಾಗೂ ಆಕ್ಸಸ್ ಮಾಡಬಹುದಾಗಿದೆ.
ಎಐ ಪಿನ್ ಡಿವೈಸ್‌ನ ಕೃತಕ ಬುದ್ಧಿಮತ್ತೆ ಕೆಲಸಗಳು
ಈ ಅಚ್ಚರಿಯ ಸಾಧನ ಆಕರ್ಷಕ ಸೌಲಭ್ಯ ಪಡೆದಿದೆ. 'ಕ್ಯಾಚ್ ಮಿ ಅಪ್' ಎಂಬ ಕಾರ್ಯವು ನಿಮ್ಮ ಇಮೇಲ್ ಇನ್‌ಬಾಕ್ಸ್ ಮೂಲಕ ವಿಂಗಡಿಸಲು ನೆರವಾಗುವ ಜೊತೆಗೆ ಹೊಸ ಮೆಸೆಜ್‌ಗಳನ್ನು ಸಾರಾಂಶಗೊಳಿಸಬಹುದು. ಡಿವೈಸ್ AI-ಚಾಲಿತ ಮೆಸೆಜ್ ಅನ್ನು ಸಹ ಹೊಂದಿದ್ದು, ಬಳಕೆದಾರರು ಧ್ವನಿಯಲ್ಲಿ ಮೆಸೆಜ್ ಅನ್ನು ರಚಿಸಬಹುದು.

ನೂತನ Ai ಪಿನ್ ವಿದೇಶಿ ಭಾಷೆಯ ಇಂಟರ್ಪ್ರಿಟರ್ ಆಗಿ ಕೆಲಸ ಮಾಡುತ್ತದೆ. ಭವಿಷ್ಯದ ನವೀಕರಣಗಳೊಂದಿಗೆ ಡಿವೈಸ್ ಮತ್ತು ಪ್ಲಾಟ್‌ಫಾರ್ಮ್ ವಿಕಸನಗೊಳ್ಳುತ್ತಿದ್ದಂತೆ, ಹೊಸ ಕಾರ್ಯಗಳನ್ನು ಸೇರಿಸಲಾಗುತ್ತದೆ ಎಂದು ಸಂಸ್ಥೆಯು ಹೇಳಿದೆ.
ಹ್ಯೂಮನ್ ಐ ಪಿನ್ 'ಶಾಶ್ವತ ವಿದ್ಯುತ್ ವ್ಯವಸ್ಥೆಯನ್ನು' ಪಡೆದುಕೊಂಡಿದೆ. ಹೀಗಾಗಿ ಬ್ಯಾಟರಿ ಪ್ಯಾಕ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಬಳಕೆದಾರರು ಇಡೀ ದಿನದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆಯಬಹುದು. ಇನ್ನು ಆಪಲ್‌ನ ಮಾಜಿ ಕಾರ್ಯ ನಿರ್ವಾಹಕರಾದ ಇಮ್ರಾನ್ ಚೌಧರಿ ಮತ್ತು ಬೆಥನಿ ಬೊಂಗಿಯೊರ್ನೊ ಅವರು 2019 ರಲ್ಲಿ ಹ್ಯೂಮನ್ ಅನ್ನು ಸ್ಥಾಪಿಸಿದರು.
ಹ್ಯೂಮನ್ ಐ ಪಿನ್ ಬೆಲೆ ಎಷ್ಟು ಗೊತ್ತಾ?
ಹ್ಯೂಮನ್ ಐ ಪಿನ್ ಆರ್ಡರ್‌ಗಳು ಈ ವಾರದಿಂದ ಪ್ರಾರಂಭವಾಗುತ್ತವೆ ಎಂದು ಹೇಳಲಾಗಿದೆ. ಅಂದಹಾಗೆ ಈ ಡಿವೈಸ್‌ನ ಬೆಲೆ $699 ಆಗಿದೆ. ಅಲ್ಲದೇ $24 ಒಂದು-ತಿಂಗಳು ವೈರ್‌ಲೆಸ್ ಚಂದಾದಾರಿಕೆಯ ಅಗತ್ಯವಿದೆ. ಹ್ಯೂಮನ್ ಇತ್ತೀಚಿಗೆ ಸಾಧನಕ್ಕಾಗಿ ಯುಎಸ್‌ನಲ್ಲಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಿದ್ದು, ಆರ್ಡರ್‌ಗಳು 2024 ರ ಆರಂಭದಲ್ಲಿ ಶಿಪ್ಪಿಂಗ್ ಶುರುವಾಗಲಿದೆ.


Click it and Unblock the Notifications








