Subscribe to Gizbot

ಬಿಎಸ್‌ಎನ್‌ಎಲ್‌'ನಿಂದ 1GB 3G ಡಾಟಾ 56 ರೂಗೆ: ಆಫರ್ ನವೆಂಬರ್ 30 ವರೆಗೆ..!

Posted By:

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಬಂಪರ್ ಆಫರ್ ಪ್ರಸ್ತುತದಲ್ಲಿ ಲಭ್ಯವಿದೆ. ETTelecom ವರದಿ ಮಾಡಿರುವ ಪ್ರಕಾರ, ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್‌ ಟೆಲಿಕಾಂ ಆಪರೇಟರ್‌ 1 ವರ್ಷದ ವ್ಯಾಲಿಡಿಟಿಯೊಂದಿಗೆ 80GB 3G ಡಾಟಾವನ್ನು ರೂ.4,498 ಕ್ಕೆ ಆಫರ್ ಮಾಡುತ್ತಿದೆ. ಈ ಆಫರ್ ಪ್ರಕಾರ 1GB 3G ಡಾಟಾ ಬೆಲೆ ಕೇವಲ ರೂ.56. ಈ ಆಫರ್ ಬಿಎಸ್‌ಎನ್‌ಎಲ್‌ ಗ್ರಾಹಕರರಿಗೆ ತ್ರಿಬಲ್ ಧಮಾಕವಾಗಿದೆ. ಇದೇ ಡಾಟಾ ಬೆಲೆಯಲ್ಲಿ ಇತರೆ ಡಾಟಾ ಪ್ಲಾನ್‌ಗಳು ಸಹ ಲಭ್ಯ.

ನೀವು ಬಿಎಸ್ಎನ್‌ಎಲ್‌(BSNL) ಗ್ರಾಹಕರೇ ಹಾಗಿದ್ದಲ್ಲಿ ಈ ಆಫರ್ ಬಗ್ಗೆ ವಿಶೇಷ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಸಂಚಲನ ಉಂಟುಮಾಡಿದ ಬಿಎಸ್‌ಎನ್‌ಎಲ್‌ 'Experience LL-49' ಪ್ಲಾನ್ ಆಫರ್!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.4000- 1GB ಡಾಟಾ ಬೆಲೆ ರೂ.56

ರೂ.4000- 1GB ಡಾಟಾ ಬೆಲೆ ರೂ.56

ಅಂದಹಾಗೆ ಬಿಎಸ್‌ಎನ್‌ಎಲ್‌ ಟೆಲಿಕಾಂ 60GB 3G ಡಾಟಾವನ್ನು 4,000 ರೂಗೆ, 36GB 3G ಡಾಟಾವನ್ನು 2,000 ರೂಗೆ ಮತ್ತು 18GB 3G ಡಾಟಾವನ್ನು 1,500 ರೂಗೆ ನೀಡುತ್ತಿದೆ. ಪ್ರತಿ ತಿಂಗಳು ರೀಚಾರ್ಜ್‌ ಪಡೆಯುವ ಬದಲು ಗ್ರಾಹಕರು ತಮಗೆ ಬೇಕಾದ ಈ ಮೇಲಿನ ಆಫರ್‌ಗಳನ್ನು ಪಡೆಯಬಹುದು.

ನವೆಂಬರ್ 30 ಕೊನೆಯ ದಿನ

ನವೆಂಬರ್ 30 ಕೊನೆಯ ದಿನ

ಮೇಲೆ ತಿಳಿಸಿದ ಆಫರ್‌ಗಳನ್ನು ಪಡೆಯಲು ನವೆಂಬರ್ 30 ರವರೆಗೆ ಗ್ರಾಹಕರಿಗೆ ಅವಕಾಶವಿದೆ. ನಂತರದಲ್ಲಿ ಈ ಪ್ಲಾನ್‌ಗಳು ಬದಲಾವಣೆ ಆಗಲಿವೆ. ನವೆಂಬರ್ 30 ದಿನಾಂಕದ ಒಳಗೆ ರೀಚಾರ್ಜ್ ಪಡೆದಲ್ಲಿ ಈ ಆಫರ್‌ಗಳನ್ನು ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 1 ವರ್ಷ ವ್ಯಾಲಿಡಿಟಿ

1 ವರ್ಷ ವ್ಯಾಲಿಡಿಟಿ

ಬಿಎಸ್‌ಎನ್‌ಎಲ್‌ ಟೆಲಿಕಾಂ 60GB 3G ಡಾಟಾವನ್ನು 4,000 ರೂಗೆ, 36GB 3G ಡಾಟಾವನ್ನು 2,000 ರೂಗೆ ಮತ್ತು 18GB 3G ಡಾಟಾವನ್ನು 1,500 ರೂಗೆ ನೀಡುತ್ತಿರುವ ಈ ಆಫರ್‌ಗಳು 1 ವರ್ಷ ವ್ಯಾಲಿಡಿಟಿ ಹೊಂದಿವೆ.

ನಿಜವಾಗಲು ಹೊಸ ಪ್ಲಾನ್‌ಗಳೇ?

ನಿಜವಾಗಲು ಹೊಸ ಪ್ಲಾನ್‌ಗಳೇ?

ಅಂದಹಾಗೆ ಬಿಎಸ್‌ಎನ್‌ಎಲ್‌'ನ ಯೋಜನೆಗಳು ತೀರ ಹೊಸದೇನಲ್ಲ. ಇತರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಈ ಹಿಂದೆ ಈಗಾಗಲೇ ನೀಡಿದ್ದಾರೆ. ಉದಾಹರಣೆಗೆ ಭಾರತಿ ಏರ್‌ಟೆಲ್ ರೂ.5,770 ಕ್ಕೆ 80GB ನೀಡಿದ್ದು, ಬಿಎಸ್‌ಎನ್ಎಲ್‌ಗಿಂತ ಶೇ.30 ರಷ್ಟು ಹೆಚ್ಚು ಎಂದು ETTelecom ವರದಿ ಮಾಡಿದೆ.

ಇತರೆ ಟೆಲಿಕಾಂಗಳ ಆಫರ್

ಇತರೆ ಟೆಲಿಕಾಂಗಳ ಆಫರ್

ಐಡಿಯಾ ಸೆಲ್ಯೂಲಾರ್ ಸಹ 5,500 ರೂ ಅನ್ನು 1 ವರ್ಷದ ಪ್ಲಾನ್‌ಗಾಗಿ ಚಾರ್ಜ್‌ ಮಾಡುತ್ತದೆ. ಆದರೆ ಬಿಎಸ್‌ಎನ್‌ಎಲ್‌ಗೆ ಹೋಲಿಸಿದಲ್ಲಿ, ಖಾಸಗಿ ಟೆಲಿಕಾಂಗಳ ಇದೇ ಪ್ಲಾನ್‌ನ ಅನುಕೂಲವೆಂದರೆ, ಇವುಗಳು 3G, 4G ಡಾಟಾ ಕವರೇಜ್ ಅವಕಾಶ ನೀಡುತ್ತವೆ. ಆದರೆ ಬಿಎಸ್‌ಎನ್‌ಎಲ್‌ ಕೇವಲ 3G ಸಂಪರ್ಕ ನೀಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Hurry Up! BSNL Offers 1GB 3G Data at Just Rs. 56 Until November 30. TO know this offer visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot