ಸಂಚಲನ ಉಂಟುಮಾಡಿದ ಬಿಎಸ್‌ಎನ್‌ಎಲ್‌ 'Experience LL-49' ಪ್ಲಾನ್ ಆಫರ್!

By Suneel
|

ವೈರ್‌ ಸಂಪರ್ಕ ಮತ್ತು ವೈರ್‌ಲೆಸ್ ವಿಭಾಗದ ಎರಡು ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯಲು, ಭಾರತದ ವಿಶಾಲ ಟೆಲಿಕಾಂ ಸರ್ವೀಸ್ ಪ್ರೊವೈಡರ್ ' ಭಾರತ್ ಸಂಚಾರ್ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌)' ತನ್ನ ಪ್ರಮೋಶನಲ್ ಲ್ಯಾಂಡ್‌ಲೈನ್ ಪ್ಲಾನ್ "Experience LL-49" ಅನ್ನು 2016 ಡಿಸೆಂಬರ್ 31 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ಪ್ರಮೋಶನಲ್‌ ಲ್ಯಾಂಡ್‌ಲೈನ್‌ ಪ್ಲಾನ್‌ ಅನ್ನು ಬಿಎಸ್‌ಎನ್‌ಎಲ್‌ ತನ್ನ ಎಲ್ಲಾ ವೃತ್ತಗಳಲ್ಲಿ ವಿಸ್ತರಿಸಲು ನಿರ್ಧಿರಿಸಿರುವುದು ಇನ್ನೊಂದು ವಿಶೇಷತೆ.

ಬಿಎಸ್‌ಎನ್‌ಎಲ್‌ 'ದಿ ಎಕ್ಸ್‌ಪೀರಿಯನ್ಸ್ ಎಲ್‌ಎಲ್‌ 49 (Experience LL-49)' ಪ್ಲಾನ್ ಅನ್ನು ಆಗಸ್ಟ್ 15 ರಂದು ಚಾಲನೆ ಮಾಡಿತ್ತು. ಈ ಪ್ಲಾನ್‌ಗೆ ಟೆಲಿಕಾಂ ದೈತ್ಯ ಬಿಎಸ್‌ಎನ್‌ಎಲ್ ಹಲವು ಘಟಕಗಳಿಂದ ಮತ್ತು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಬಿಎಸ್‌ಎನ್‌ಎಲ್‌ ಮತ್ತೊಮ್ಮೆ ತನ್ನ ಗ್ರಾಹಕರನ್ನು ಲ್ಯಾಂಡ್‌ಲೈನ್‌ ಆಪರೇಟರ್‌ಗಳ ಬಳಿ ಕರೆತರುತ್ತಿರುವ ಮನ್ಸೂಚನೆಯು ಇದಾಗಿದೆ.

ಬಿಎಸ್‌ಎನ್‌ಎಲ್‌ ಸಿಗ್ನಲ್‌ ಸಮಸ್ಯೆ ಇದ್ದಲ್ಲಿ, ಈ ಟ್ರಿಕ್ಸ್ ಫಾಲೋ ಮಾಡಿ

ಅಂದಹಾಗೆ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನಿಂದ ಹಳೆಯ ನಿಯಮಗಳು ಅದೇ ರೀತಿ ಇರಲಿವೆ. ಜೊತೆಗೆ ಎರಡು ಹೊಸ ಷರತ್ತುಗಳು ಇರಲಿವೆ.

#1 "Experience LL-49" ಪ್ಲಾನ್‌ ಹೊಸ ಲ್ಯಾಂಡ್‌ಲೈನ್‌ ಗ್ರಾಹಕರಿಗೆ ಮಾತ್ರ ಎಕ್ಸ್‌ಕ್ಲ್ಯೂಸಿವ್ ಆಗಿದೆ. ಹಳೆಯ ಗ್ರಾಹಕರು ತಮ್ಮ ಪ್ಲಾನ್‌ ಅನ್ನು "Experience LL-49" ಪ್ಲಾನ್‌ಗೆ ಬದಲಿಸಿಕೊಳ್ಳಲು ಅವಕಾಶ ಇಲ್ಲ.

#2 ಹೊಸ ಗ್ರಾಹಕರು ತಮ್ಮ ಕ್ಲಿಪ್‌ ಉಪಕರಣಗಳನ್ನು ವ್ಯವಸ್ಥೆ ಮಾಡಿಕೊಳ್ಳಬಹುದಾಗಿದ್ದು, ಟೆಲಿಫೋನ್ ಉಪಕರಣಗಳನ್ನು ಓಪನ್‌ ಮಾರುಕಟ್ಟೆಯಲ್ಲಿ ರೂ.600 ಪಾವತಿಸಿ ಖರೀದಿಸುವ ಅವಶ್ಯಕತೆ ಇಲ್ಲ. ಹೊಸ ಕನೆಕ್ಷನ್‌ ಪಡೆದ ಹೊಸತರಲ್ಲಿ 300 ಉಚಿತ ಹೆಚ್ಚುವರಿ ಕರೆಗಳನ್ನು ಯಾವುದೇ ನೆಟ್‌ವರ್ಕ್‌ಗೆ ಒಂದು ತಿಂಗಳ ಅವಧಿ ಮಾಡಬಹುದು.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ನೀವು ಬಿಎಸ್‌ಎನ್‌ಎಲ್‌ ಅಭಿಮಾನಿಗಳೇ? ಹೊಸದಾಗಿ ಬಿಎಸ್‌ಎನ್‌ಎಲ್‌(BSNL) ಕನೆಕ್ಷನ್ ಪಡೆಯಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದಲ್ಲಿ ಬಿಎಸ್‌ಎನ್‌ಎಲ್‌ನ "Experience LL-49" ಪ್ಲಾನ್‌ನಲ್ಲಿನ 5 ಅತ್ಯಾಕರ್ಷಕ ಅನುಕೂಲಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಆರಂಭದಲ್ಲಿ ಯಾವುದೇ ಚಾರ್ಜ್‌ ಇಲ್ಲ

ಆರಂಭದಲ್ಲಿ ಯಾವುದೇ ಚಾರ್ಜ್‌ ಇಲ್ಲ

"Experience LL-49" ಪ್ಲಾನ್‌ನಲ್ಲಿ ಆರಂಭಿಕವಾಗಿ ಯಾವುದೇ ಚಾರ್ಜ್‌ ಮಾಡುವುದಿಲ್ಲ. ಬಿಎಸ್‌ಎನ್‌ಎಲ್‌ ಸಂಪರ್ಕ ಇನ್‌ಸ್ಟಾಲ್‌ ಸಂಪೂರ್ಣವಾಗಿ ನಗರ ಮತ್ತು ಗ್ರಾಮೀಣ ನಿವಾಸಿಗಳಿಗೆ ಉಚಿತವಾಗಿದೆ.

ತಿಂಗಳಿಗೆ ಕೇವಲ ರೂ.49 ಅನ್ನು ಪಾವತಿಸಿ

ತಿಂಗಳಿಗೆ ಕೇವಲ ರೂ.49 ಅನ್ನು ಪಾವತಿಸಿ

"Experience LL-49" ಪ್ಲಾನ್‌ನ ತಿಂಗಳ ಚಾರ್ಜ್‌ ಮೊದಲ 6 ತಿಂಗಳು ಕೇವಲ ರೂ.49 ಆಗಿದ್ದು, ನಂತರದಲ್ಲಿ ನಂಬರ್ ಜೆನೆರಲ್‌ ಪ್ಲಾನ್‌ಗೆ ಬದಲಾವಣೆ ಆಗುತ್ತದೆ.

ಉಚಿತ ಕರೆ ಎಂಜಾಯ್‌ ಮಾಡಿ

ಉಚಿತ ಕರೆ ಎಂಜಾಯ್‌ ಮಾಡಿ

"Experience LL-49" ಪ್ಲಾನ್‌ಗೆ ಗ್ರಾಹಕರು ಸಬ್‌ಸ್ಕ್ರೈಬ್‌ ಆದಲ್ಲಿ ಪ್ರತಿ ಭಾನುವಾರ ಗ್ರಾಹಕರು 24 ಗಂಟೆಗಳ ಕಾಲ ಉಚಿತ ಅನ್‌ಲಿಮಿಟೆಡ್‌ ಕರೆ ಮಾಡಬಹುದು.

ಉಚಿತ ರಾತ್ರಿ ಕರೆಗಳು

ಉಚಿತ ರಾತ್ರಿ ಕರೆಗಳು

ಬಿಎಸ್‌ಎನ್‌ಎಲ್‌ ಗ್ರಾಹಕರು "Experience LL-49" ಪ್ಲಾನ್‌ಗೆ ಸಬ್‌ಸ್ಕ್ರೈಬ್‌ ಆದಲ್ಲಿ, 9pm-7am ನಡುವೆ ಉಚಿತ ಅನ್‌ಲಿಮಿಟೆಡ್ (Local+STD) ನೆಟ್‌ವರ್ಕ್‌ಗೆ ಕರೆ ಮಾಡಬಹುದು.

ಉಚಿತ ಸಿಮ್‌ ಕಾರ್ಡ್ ಪಡೆಯಿರಿ

ಉಚಿತ ಸಿಮ್‌ ಕಾರ್ಡ್ ಪಡೆಯಿರಿ

"Experience LL-49" ಪ್ಲಾನ್ ಅಡಿಯಲ್ಲಿ ಲ್ಯಾಂಡ್‌ಲೈನ್‌ ಕನೆಕ್ಷನ್ ಬುಕ್‌ ಮಾಡಿದಲ್ಲಿ ಉಚಿತ ಪ್ರೀಪೇಡ್ ಸಿಮ್‌ ಪಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Major Attractions of BSNL 'Experience LL 49' Landline Plan. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X