ವಿಮಾನಕ್ಕಿಂತ ವೇಗದ ಮುಂದಿನ ತಲೆಮಾರಿನ ಸಾರಿಗೆ ಭಾರತಕ್ಕೆ: ಬೆಂಗಳೂರಿಗೂ ಬರಲಿದೆ..!
ಇದೇ ಕೆಲವು ದಿನಗಳ ಹಿಂದೆ ಭಾರತದಲ್ಲಿ ಪ್ರತ್ಯಕ್ಷತೆಯನ್ನು ನೀಡಿದ್ದ ಹ್ರೈಪರ್‌ಲೂಪ್ ಈಗ ಸಾರಿಗೆ ಜಾಲವನ್ನು ನಿರ್ಮಿಸಲು ಮುಂದಾಗಿದೆ.
ಹ್ರೈಪರ್‌ಲೂಪ್ ಓನ್ ಸದ್ಯ ವಿಶ್ವದ ಅತ್ಯಂತ ವೇಗದ ಸಾರಿಗೆ ಇದಾಗಿದೆ. ಈ ಸಾರಿಗೆ ವ್ಯವಸ್ಥೆ ಭಾರತದ ಕಡೆ ಆಗಮಿಸಿದ್ದು, ಇದೇ ಕೆಲವು ದಿನಗಳ ಹಿಂದೆ ಭಾರತದಲ್ಲಿ ಪ್ರತ್ಯಕ್ಷತೆಯನ್ನು ನೀಡಿದ್ದ ಹ್ರೈಪರ್‌ಲೂಪ್ ಈಗ ಸಾರಿಗೆ ಜಾಲವನ್ನು ನಿರ್ಮಿಸಲು ಮುಂದಾಗಿದೆ.

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!
ಮಾನವರು ಸಂಚರಿಸುವ ವ್ಯವಸ್ಥೆಯನ್ನೇ ಬದಲಾಯಿಸಲು ಮುಂದಾಗಿರುವ ಹೈಪರ್‌ಲೂಪ್, ಕೊಳವೆಯೊಂದರ ಒಳಗೆ ಕೂತು ಪ್ರಯಾಣ ಮಾಡುವ ವ್ಯವಸ್ಥೆಯಾಗಿದ್ದು, ಇದು ವಿಮಾನಕ್ಕಿಂತಲೂ ವೇಗವಾಗಿ ಸಂಚರಿಸಲಿದ್ದು, ಕಡಿಮೆ ವೆಚ್ಚದಾಯಕವೂ ಆಗಿದೆ ಎನ್ನಲಾಗಿದೆ.

ಮುಂದಿನ ತಲೆಮಾರಿನ ಸಾರಿಗೆ:
ಸದ್ಯ ಭಾರತದಲ್ಲಿ ಹೈಪರ್ ಲೂಪ್ ಓನ್ ಮತ್ತು ಹೈಪರ್ ಲೂಪ್ ಟ್ರಾನ್ಸ್‌ಪೋಟೆಷನ್ ಟೆಕ್ನಾಲಜಿ ಕಂಪನಿಗಳು ಒಂದಾಗಿ ಹೈಪರ್‌ಲೂಪ್ ಮಾರ್ಗದ ನಿರ್ಮಾಣಕ್ಕೆ ಮುಂದಾಗಿವೆ. ಮುಂದಿನ ತಲೆಮಾರಿನ ಸಾರಿಗೆ ವ್ಯವಸ್ಥೆಯಾಗಿರುವ ಹೈಪರ್‌ಲೂಪ್ ಭಾರತದಲ್ಲಿ ಶೀಘ್ರವೇ ಕಾರ್ಯಚರಣೆ ಆರಂಭಿಸಲಿದೆ ಎನ್ನಲಾಗಿದೆ.

ವಿಷನ್ ಇನ್ ಇಂಡಿಯಾ:
ಈಗಾಗಲೇ ಭಾರತದಲ್ಲಿ ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ವಿಷನ್ ಇನ್ ಇಂಡಿಯಾ ಎಂದು ನಾಮಕರಣ ಮಾಡಿದ್ದು, ನಾಲ್ಕು ವಿಭಾಗಗಳಲ್ಲಿ ಹೈಪರ್‌ಲೂಪ್ ಕಾರ್ಯ ನಿರ್ವಹಿಸಲಿದೆ.

ಮೊದಲ ಭಾಗ:
ಬೆಂಗಳೂರು ನಿಂದ ಚೆನ್ನೈ: ದೂರ 334 ಕಿ,ಮೀ, ಸಮಯ 2೦ ನಿಮಿಷ, ಹೈಪರ್ ಲೂಪ್ ಕಾರ್ಯಚರಣೆ ಆರಂಭಿಸಿದರೆ ಇಲ್ಲಿಂದ ಚೆನ್ನೈಗೆ ಕೆಲವೇ ನಿಮಿಷಗಳಲ್ಲಿ ತಲುಪಬಹುದಾಗಿದೆ.

ಎರಡನೇ ಭಾಗ:
ಬೆಂಗಳೂರು- ತಿರುವನಂತಪುರಂ, ದೂರ 736 ಕಿ,ಮೀ, ಸಮಯ 41 ನಿಮಿಷ, ಬೆಂಗಳೂರು ಸದ್ಯದ ದಿನದಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಬೇರೆ-ಬೇರೆ ಸಿಟಿಗಳ ನಡುವೆ ಸಂಪರ್ಕ ಸಾಧಿಸಲು ಈ ಟೆಕ್ನಾಲಜಿ ಸಹಾಯಕಾರಿಯಾಗಲಿದೆ.

ಮೂರನೇ ಭಾಗ:
ಡೆಲ್ಲಿ-ಮುಂಬೈ, ದೂರ 1,317 ಕಿ,ಮೀ, ಸಮಯ 55 ನಿಮಿಷ. ಈಗಾಗಲೇ ಈ ಎರಡು ನಗರಗಳು ಬೆಳೆಯುತ್ತಿದ್ದು, ಸಾಕಷ್ಟು ಮಂದಿ ಎರಡು ನಗರಗಳ ನಡುವೆ ಸಂಪರ್ಕಕ್ಕೆ ಇದು ಉಪಯುಕ್ತಕಾರಿ.

ನಾಲ್ಕನೇ ಭಾಗ:
ಮುಂಬೈ- ಚೆನ್ನೈ ದೂರ 1,102 ಕಿ,ಮೀ, ಸಮಯ 50 ನಿಮಿಷ, ದಕ್ಷಿಣದಿಂದ ಉತ್ತರಕ್ಕೆ ಸಂಪರ್ಕ ಜಾಲವನ್ನು ವಿಸ್ತರಿಸಲು ಇದು ಸಹಾಯಕಾರಿ.


Click it and Unblock the Notifications