ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಇಂದಿನಿಂದ ಜಿಯೋ ಪ್ರೈಮ್ ಮೆಂಬರ್ ಶಿಪ್ ಆರಂಭವಾಗಲಿದ್ದು, ಪ್ರಸ್ತುತ ಜಿಯೋ ಸಿಮ್ ಬಳಸುತ್ತಿರುವವರು ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದೆ. ಮಾರ್ಚ್ 01 ದಿಂದ ಮಾರ್ಚ್ 31ರ ವರೆಗೆ ಈ ಸದಸ್ಯತ್ವ ಅಭಿಯಾನ ನಡೆಯಲಿದೆ.

ಇಂದಿನಿಂದ ರಿಲಯನ್ಸ್ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ

ಓದಿರಿ: ಜಿಯೋ ಪ್ರೈಮ್ ಸದಸ್ಯರಲ್ಲದರಿಗೂ ಇದೇ ಭರ್ಜರಿ ಆಫರ್‌ಗಳು: ಇಲ್ಲಿದೇ ನೋಡಿ ಫುಲ್ ಡಿಟೈಲ್ಸ್..!

ಮುಖೇಶ್ ಅಂಬಾನಿ, ಜಿಯೋ 10 ಕೋಟಿ ಗ್ರಾಹಕರನ್ನು ಹೊಂದಿದ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದ್ದು, ಈ ಮೂಲಕ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಪ್ರೈಮ್ ಅವಧಿ:

ಜಿಯೋ ಪ್ರೈಮ್ ಅವಧಿ:

ಜಿಯೋ ಪ್ರೈಮ್ ಸದಸ್ಯತ್ವ ಅಭಿಯಾನವು ಮಾರ್ಚ್ 01 ದಿಂದ ಮಾರ್ಚ್ 31ರ ವರೆಗೆ ನಡೆಯಲಿದ್ದು, ಜಿಯೋ ಹ್ಯಾಪಿ ನ್ಯೂಯರ್ ಆಫರ್‌ ಅನ್ನು ಏಪ್ರಿಲ್ 1 2017 ರಿಂದ 2018ರ ಮಾರ್ಚ್ 31 ವರೆಗೆ ಒಂದು ವರ್ಷದ ಅವಧಿವರೆಗೆ ಬಳಸಬಹುದಾಗಿದೆ.

ಲಾಭಗಳು:

ಲಾಭಗಳು:

ಜಿಯೋ ಪ್ರೈಮ್ ಸದಸ್ಯತ್ವ ಪಡೆಯುವ ಸದಸ್ಯರು ಏಪ್ರಿಲ್ 1 2017 ರಿಂದ 2018ರ ಮಾರ್ಚ್ 31 ವರೆಗೆ ಒಂದು ವರ್ಷದ ಅವಧಿತಯಲ್ಲಿ ಉಚಿತವಾಗಿ ಹ್ಯಾಪಿ ನ್ಯೂಯರ್ ಆಫರ್ ಪಡೆಯಬಹುದಾಗಿದ್ದು, ಅಲ್ಲದೇ ಜಿಯೋ ಆಪ್‌ಗಳ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ಜಿಯೋ ಸಿನಿಮಾ, ಜಿಯೋ ಟಿವಿ ಫ್ರೀ:

ಜಿಯೋ ಸಿನಿಮಾ, ಜಿಯೋ ಟಿವಿ ಫ್ರೀ:

ಜಿಯೋ ಪ್ರೈಮ್ ಸದಸ್ಯತ್ವ ಪಡೆದವರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್‌ಪ್ರೆಸ್ ನ್ಯೂಸ್ ಆಪ್‌ಗಳ ಸೇವೆಯನ್ನು ಒಂದು ವರ್ಷದ ವರೆಗೆ ಯಾವುದೇ ದುಡ್ಡು ನೀಡದೆ ಬಳಸಬಹುದಾಗಿದೆ.

ಬೆಲೆಗಳು:

ಬೆಲೆಗಳು:

ಪ್ರೈಮ್ ಸದಸ್ಯತ್ವ ಪಡೆಯಲು ಗ್ರಾಹಕರು ಒಮ್ಮೆ 99 ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಇದಲ್ಲದೇ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಸೇವೆಯನ್ನು ಪಡೆಯಲು ಪ್ರತಿ ತಿಂಗಳು 303 ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಇದರಂತೆ ಪ್ರತಿ ದಿನಕ್ಕೇ 10 ರೂ ಪಾವತಿ ಮಾಡಿದಂತಾಗುತ್ತದೆ.

ಪಡೆಯುವ ಸೇವೆಗಳು:

ಪಡೆಯುವ ಸೇವೆಗಳು:

ಪ್ರತಿ ತಿಂಗಳಿಗೆ 303 ರೂಗಳನ್ನು ಪಾವತಿ ಮಾಡಿದರೆ ಪ್ರತಿ ದಿನವೂ ಒಂದು GB 4G ಡೇಟಾವನ್ನು ಪಡೆಯಬಹುದಾಗಿದ್ದು, ಅಲ್ಲದೇ ಒಂದು ವರ್ಷ ಉಚಿತವಾಗಿ ಕರೆ ಮಾಡುವ ಕೊಡುಗೆಯ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೇ ಒಂದು ವರ್ಷದಲ್ಲಿ ರೂ.10,000 ಮೌಲ್ಯದ ಜಿಯೋ ಮಿಡಿಯಾ ಸೇವೆಯನ್ನು ಪಡೆಯಬಹುದಾಗಿದೆ.

 ಪ್ರೈಮ್ ಸದಸ್ಯರಾಗುವುದು ಹೇಗೆ..?

ಪ್ರೈಮ್ ಸದಸ್ಯರಾಗುವುದು ಹೇಗೆ..?

ಮಾರ್ಚ್ 01 ದಿಂದ ಮಾರ್ಚ್ 31ರ ವರೆಗೆ ಜಿಯೋ ಪ್ರೈಮ್ ಸದಸ್ಯರಾಗಲು ಕಾಲವಕಾಶವಿದ್ದು, ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ಮೈ ಜಿಯೋ ಆಪ್ ಮೂಲಕವೇ ಸದಸ್ಯರಾಗಬಹುದಾಗಿದೆ. ಇಲ್ಲವೇ ರಿಲಯನ್ಸ್ ಡಿಜಿಟಲ್, ಜಿಯೋ ರಿಟೆಲ್ ಸ್ಟೋರ್ ಇಲ್ಲವೇ ಜಿಯೋ ಪಾಟ್ನರ್ ಸ್ಟೋರ್ ಗೆ ಭೇಟಿ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio will start the enrollment for Jio Prime, its latest subscription-based membership for its existing users. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot