Smartphone: ನೋಡೋಕೆ ಥೇಟ್ ಐಫೋನ್! 128 GB ಸ್ಟೋರೇಜ್, ಟ್ರಿಪಲ್ ಕ್ಯಾಮೆರಾ.. ಬೆಲೆ 12 ಸಾವಿರ!
ಸ್ಮಾರ್ಟ್‌ಫೋನ್ (Smartphone) ಅಂದಾಕ್ಷಣ ಬಹುಪಾಲು ಜನರು ಒಪ್ಪೋ, ವಿವೋ, ರೆಡ್ಮಿ, ಸ್ಯಾಮ್‌ಸಂಗ್ ಸೇರಿದಂತೆ ಅನೇಕ ಕಂಪೆನಿಗಳ ಕಡೆ ಕಣ್ಣಯಿಸುತ್ತಾರೆ. ಆದರೆ ಹಲವರಿಗೆ ಈ ರೀತಿಯ ಬ್ರ್ಯಾಂಡೆಡ್ ಫೋನ್ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ. ಅಂಥವರು ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಯಾವುದಾದರೂ ಸರಿ ಒಂದು ಫೋನ್ ಬೇಕು ಎಂದು ಜಾಲಾಡುತ್ತಾರೆ. ಆ ರೀತಿಯ ಗ್ರಾಹಕರಿಗೆ ಈ ಫೋನ್ ಉತ್ತಮ ಆಯ್ಕೆ ಆಗಿರಲಿದೆ.
ಹೌದು, ಸ್ಮಾರ್ಟ್‌ಫೋನ್‌ಗಳನ್ನು ಹಲವಾರು ಕಂಪೆನಿಗಳು ತಯಾರು ಮಾಡಿ ಗ್ರಾಹಕರಿಗೆ ನೀಡುತ್ತದೆ. ಈ ನಡುವೆ ಹಲವು ದೇಶೀಯ ಬ್ರ್ಯಾಂಡ್‌ಗಳು ಉತ್ತಮವಾದ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿವೆ. ಅವುಗಳಲ್ಲಿ ಪ್ರಮುಖವಾದುದು ಐ ಕಾಲ್(i Kall). ಇದು ಭಾರತೀಯ ಕಂಪನಿಯಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್‌ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಈ ಬ್ರ್ಯಾಂಡ್‌ನ ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್‌ಗೆ (i Kall S1 Plus Smartphone) ಈಗ ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ, 128 GB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ವಿವರ ಎಷ್ಟು ಅನ್ನೋದನ್ನು ತಿಳಿಸಿಕೊಡಲಿದ್ದೇವೆ ಈ ಲೇಖನ ಓದಿರಿ.

ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಥೇಟ್ ಐಫೋನ್ ನಂತೆಯೇ ಕಾಣುತ್ತದೆ. ಈ ಕಾರಣಕ್ಕಾಗಿಯೇ ಸಾಕಷ್ಟು ಜನರು ಇದರ ಶೈಲಿಗೆ ಮನಸೋತು ಇದನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಈ ಬೆಳವಣಿಗೆ ನಡುವೆ ಫ್ಲಿಪ್‌ಕಾರ್ಟ್ ಈ ಫೋನ್‌ಗೆ ಭರ್ಜರಿ ಆಫರ್ ನೀಡಿದೆ. ಅಂದರೆ ಇದರ ಸಾಮಾನ್ಯ ಬೆಲೆ 11,999ರೂ.ಗಳಾಗಿದ್ದು, ಇದನ್ನು ನೀವೀಗ 9,489ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಮೂಲಕ 20% ರಿಯಾಯಿತಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಸಹ ಇದೆ.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, ಐಡಿಎಫ್‌ಸಿ ಮೊದಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ ಸಿಗಲಿದೆ. ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.

ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ ಅಗ್ಗದ ಬೆಲೆಯಲ್ಲಿ ಸಿಗುತ್ತಿರುವುದೇನೋ ನಿಜ. ಈ ನಡುವೆ ಈ ಬೆಲೆಗೆ ಯೋಗ್ಯವಾದ ಫೀಚರ್ಸ್ ಏನೆಲ್ಲಾ ಇವೆ ಅನ್ನೋದನ್ನು ತಿಳಿದುಕೊಳ್ಳುವುದು ಸಹ ಅಗತ್ಯವಾಗಿದ್ದು, ಅದರಂತೆ ಈ ಫೋನ್ 6.8 ಇಂಚಿನ ಐಪಿಎಸ್ ಸ್ಕ್ರೀನ್ ಹೊಂದಿದೆ. ಜೊತೆಗೆ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 269 ಪಿಪಿಐ ಸಾಂದ್ರತೆಯೊಂದಿಗೆ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ.
ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಇನ್ನು ಈ ಫೋನ್ ಯುನಿಸೊಕ್ ಚಿಪ್ಸೆಟ್ 1.6 GHz, ಕ್ವಾಡ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6 GB RAM + 6 GB ವರ್ಚುವಲ್ RAM ಹಾಗೂ 128 GB ಇಂಟರ್ ಸ್ಟೋರೇಜ್ ಆಯ್ಕೆ ಮೂಲಕ ಕಾಣಿಸಿಕೊಂಡಿದೆ. ಅಂದರೆ, ಈ ಬೆಲೆಯಲ್ಲಿ ಟಾಪ್ ಬ್ರ್ಯಾಂಡ್‌ಗಳೂ ಸಹ ನೀಡಲಾಗದ ಸ್ಟೋರೇಜ್ ಆಯ್ಕೆ ಈ ಫೋನ್‌ನಲ್ಲಿ ಸಿಗಲಿದೆ. ಅಷ್ಟೇ ಅಲ್ಲದೆ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಲು ಎಸ್‌ಡಿ ಕಾರ್ಡ್ ಆಯ್ಕೆ ಸಹ ನೀಡಲಾಗಿದೆ. ಈ ಫೋನ್ ಆಂಡ್ರಾಯ್ಡ್ v13 ಅನ್ನು ರನ್ ಮಾಡಲಿದೆ.
ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 13 ಮೆಗಾಪಿಕ್ಸೆಲ್ + 5 ಮೆಗಾಪಿಕ್ಸೆಲ್ + 2 ಮೆಗಾಪಿಕ್ಸೆಲ್ ನ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಸೆನ್ಸರ್ 720p ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಪಡೆದುಕೊಂಡಿವೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ನಲ್ಲಿ ನೀಡಲಾಗಿದೆ.

ಐ ಕಾಲ್ S1 ಪ್ಲಸ್ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಬರೋಬ್ಬರಿ 6000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಪರಿಣಾಮ ಇದರಲ್ಲಿ ಅತ್ಯುತ್ತಮವಾದ ಬ್ಯಾಕಪ್ ಅನ್ನು ನಿರೀಕ್ಷೆ ಮಾಡಬಹುದಾಗಿದೆ. ಇದರೊಂದಿಗೆ 4G, VoLTE, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇತರೆ ಪ್ರಯೋಜನ ಪಡೆದುಕೊಂಡಿದೆ.


Click it and Unblock the Notifications








