ಐಬಿಎಂನ ಐದು ಭವಿಷ್ಯವಾಣಿಗಳು

By Ashwath
|

ಮುಂದಿನ ಐದು ವರ್ಷದಲ್ಲಿ ವಿಶ್ವದ ಯಾವ ಕ್ಷೇತ್ರಲ್ಲಿ ಏನು ಬದಲಾವಣೆಯಾಗಲಿದೆ? ಈ ಪ್ರಶ್ನೆಗೆ ಈಗಲೇ ಉತ್ತರಿಸುವುದು ಕಷ್ಟ. ಆದರೂ ಟೆಕ್‌ ಕ್ಷೇತ್ರ ಟಾಪ್‌ ಐಟಿ ಕಂಪೆನಿ ಐಬಿಎಂ ಮುಂದಿನ ಐದು ವರ್ಷದಲ್ಲಿ ಕೆಲವು ಕ್ಷೇತ್ರಗಳಲ್ಲಿ ಕೆಲವು ಅಂಶಗಳು ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.

ಈ ಭವಿಷ್ಯವಾಣಿಗಳು ನಮ್ಮ ದೇಶಕ್ಕೆ ಅನ್ವಯವಾಗುತ್ತದೋ ಇಲ್ಲವೊ ಗೊತ್ತಿಲ್ಲ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಭವಿಷ್ಯ ನಿಜವಾಗಬಹುದೆನೋ?!ಹೀಗಾಗಿ ಇಲ್ಲಿ ಐಬಿಎಂ ಬಿಡುಗಡೆ ಮಾಡಿದ ಐದು ಭವಿಷ್ಯವಾಣಿಗಳ ವಿವರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು

ಐಬಿಎಂನ ಐದು ಭವಿಷ್ಯವಾಣಿಗಳು


ಮುಂದಿನ ಐದು ವರ್ಷದಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣದ ಕ್ರಮದಲ್ಲಿ ಬದಲಾವಣೆಯಾಗಲಿದ್ದು,ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಮಟ್ಟ ಸುಧಾರಿಸಲಿದೆ ಎಂದು ಐಬಿಎಂ ಹೇಳಿದೆ. ಕ್ಲಾಸ್‌ ರೂಮ್‌ಗಳು ಡಿಜಿಟಲೀಕರಣ ವಾಗಲಿದ್ದು, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದರೆ ಅವನ ಕಲಿಕೆಯ ಮಟ್ಟವನ್ನು ಏರಿಸಲು ಶಿಕ್ಷಕರಿಗೆ ಮತ್ತು ಪೋಷಕರಿಗೆ ಕ್ಲೌಡ್‌ ಕಂಪ್ಯೂಟಿಂಗ್‌ ನೆರವಾಗಲಿದೆ ಎಂದು ಐಬಿಎಂ ಭವಿಷ್ಯ ನುಡಿದಿದೆ.

ಸ್ಟೀವ್‌ ಜಾಬ್ಸ್‌ ಕನಸಿನ ಶಾಲೆ ಹೇಗಿದೆ ನೋಡಿದ್ದೀರಾ?ಸ್ಟೀವ್‌ ಜಾಬ್ಸ್‌ ಕನಸಿನ ಶಾಲೆ ಹೇಗಿದೆ ನೋಡಿದ್ದೀರಾ?

ಐಬಿಎಂನ ಐದು ಭವಿಷ್ಯವಾಣಿಗಳು


ಆನ್‌ಲೈನ್‌ ರಿಟೇಲ್‌ ಕ್ಷೇತ್ರ ಉದ್ಯಮ ಹೆಚ್ಚಾಗುತ್ತಿದ್ದರೂ ಮುಂದಿನ ಐದು ವರ್ಷದಲ್ಲಿ ಸ್ಥಳೀಯ ಅಂಗಡಿಗಳು ಆನ್‌ಲೈನ್‌ ವ್ಯವಹಾರ ಕೈ ಹಾಕಲಿದ್ದು, ಮನೆ ಮನೆಗೆ ಉತ್ಪನ್ನಗಳನ್ನು ವಿತರಣೆ ಮಾಡುವ ಮೂಲಕ ಬಲಾಢ್ಯ ಕಂಪೆನಿಗಳ ಮಾರುಕಟ್ಟೆಯ ಪ್ರಾಬಲ್ಯವನ್ನು ಕಡಿಮೆ ಮಾಡಲಿದೆ ಎನ್ನುವ ಮತ್ತೊಂದು ಭವಿಷ್ಯವನ್ನು ಐಬಿಎಂ ನುಡಿದಿದೆ.

ಐಬಿಎಂನ ಐದು ಭವಿಷ್ಯವಾಣಿಗಳು


ಐಬಿಎಂನ ಮೂರನೇ ಭವಿಷ್ಯವಾಣಿ ಡಿಎಎನ್‌ಗೆ ಸಂಬಂಧಿಸಿದ್ದು.ಇನ್ನುಮುಂದೆ ವೈದ್ಯರು ಆರೋಗ್ಯ ತಪಾಸಣೆ ವೇಳೆ ಕ್ಯಾನ್ಸರ್‌ರೋಗಿಯ ಡಿಎನ್‌ಎ ತೆಗೆದು ಪರೀಕ್ಷಿಸುವುದು ಸಾಮಾನ್ಯವಾಗಲಿದೆಯಂತೆ.ಕೆಲವು ಕ್ಯಾನ್ಸರ್‌ ಪೀಡಿತ ವ್ಯಕ್ತಿಗಳಿಗೆ ಡಿಎನ್‌ಎ ಪರೀಕ್ಷೆ ನೆರವಾಗಿದ್ದು ಮುಂದಿನ ದಿನಗಳಲ್ಲಿ ಈ ಪರೀಕ್ಷೆ ಹೆಚ್ಚಾಗಲಿದೆ ಎಂದು ಹೇಳಿದೆ.

ಐಬಿಎಂನ ಐದು ಭವಿಷ್ಯವಾಣಿಗಳು


ಇಂಟರ್‌ನೆಟ್‌ನಲ್ಲಿ ಯಾವುದು ಸುರಕ್ಷಿತವಲ್ಲ,ಪಾಸ್‌ವರ್ಡ್‌ನ್ನು ಕದಿಯುವ ಹ್ಯಾಕರ್‌ಗಳ ಸಂಖ್ಯೆ ಕಡಿಮೆಯಾಗಿಲ್ಲ.ಹೀಗಾಗಿ ಈ ಪಾಸ್‌ವರ್ಡ್‌ಗಳ ಬದಲಿಗೆ ಹೊಸ ರೀತಿಯ ಪಾಸ್‌ವರ್ಡ್ ಸೃಷ್ಟಿಯಾಗಲಿದೆ ಎಂದು ಐಬಿಎಂ ಹೇಳಿದೆ. ಉದಾಹರಣೆಗೆ ಸ್ಮಾರ್ಟ್‌ಫೋನ್ ಕಳೆದು ಹೋದ ಬಳಿಕ ಬೇರೊಬ್ಬ ವ್ಯಕ್ತಿ ಅದನ್ನು ಓಪನ್‌ ಮಾಡಿದ್ದರೂ ಬಳಸುವ ವ್ಯಕ್ತಿ ತನ್ನ ಪ್ರತಿದಿನ ಬಳಕೆದಾರರ ಅಲ್ಲ ಎಂದು ಭಾವಿಸಿ ಆಟೋಮ್ಯಾಟಿಕ್‌ ಆಗಿ ಲಾಕ್‌ ಆಗುವಂತ ತಂತ್ರಜ್ಞಾನ ಸ್ಮಾರ್ಟ್‌ಫೋನಲ್ಲಿ ಬರಲಿದೆ ಎಂದು ಐಬಿಎಂ ಭವಿಷ್ಯ ನುಡಿದಿದೆ.

ಐಬಿಎಂನ ಐದು ಭವಿಷ್ಯವಾಣಿಗಳು


ಇಂಟರ್‌ನೆಟ್‌,ಸ್ಮಾರ್ಟ್‌ಫೋನ್‌ ಕ್ರಾಂತಿಯಿಂದಾಗಿ ಜನ ಸರ್ಕಾರಕ್ಕೆ ಸೋಶಿಯಲ್‌ ಮೀಡಿಯಾದ ಮೂಲಕ ತಮ್ಮ ನಗರಗಳ ಮಾಹಿತಿ ರವಾನಿಸಿ,ನಗರದ ಸಮಸ್ಯೆ ನಿವಾರಿಸಿ ಅಭಿವೃದ್ಧಿಗೆ ಸಹಕಾರ ನೀಡುವ ಟ್ರೆಂಡ್‌ ಆರಂಭವಾಗಲಿದೆ ಎಂದು ಐಬಿಎಂ ಹೇಳಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X