Subscribe to Gizbot

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು

Posted By:

ಭವಿಷ್ಯವಾಣಿಗಳನ್ನು ಕೇಳುವವರು ಇರುವವರೆಗೂ ಹೇಳುವವರಿಗೆ ಕೊರತೆಯಿಲ್ಲ.ದೊಡ್ಡ ವ್ಯಕ್ತಿಗಳು ಏನೇ ಹೇಳಿದ್ದರೂ ಅದು ಖಂಡಿತ ನಡೆದೇ ನಡೆಯುತ್ತದೆ ಎನ್ನುವ ಜನಗಳು ನಮ್ಮಲ್ಲಿದ್ದಾರೆ.

ಈ ಭವಿಷ್ಯವಾಣಿ ಟೆಕ್‌‌ ಕ್ಷೇತ್ರಕ್ಕೂ ಹೊರತಾಗಿಲ್ಲ.ಬೇರೆಯವರು ಹೇಳಿದ್ದರೆ ನಂಬುವುದು ಕಷ್ಟ. ಆದರೆ ಟೆಕ್‌ ಕ್ಷೇತ್ರದ ದೊಡ್ಡ ಸಾಧನೆಗಳನ್ನು ಮಾಡಿದ ವ್ಯಕ್ತಿಗಳು ಮಾತನಾಡಿದರೆ ಅದು ಸುದ್ದಿಯಾಗುತ್ತದೆ.ಇನ್ನೂ ಭವಿಷ್ಯ ಹೇಳಿದರೆ ನಂಬದೇ ಇರಲು ಸಾಧ್ಯವೇ? ಬಹಳಷ್ಟು ಜನ ಟೆಕ್‌ ಪಂಡಿತರು,ಇವರು ಭವಿಷ್ಯದ ದಿನಗಳ ಬಗ್ಗೆ ಹೇಳಿದ್ದ ವಾಣಿಯನ್ನು ನಂಬಿದ್ದರು.ಆದರೆ ಇವರ ಹೇಳಿಕೆಗಳು ಸುಳ್ಳಾಗಿದ್ದು ಸದ್ಯ ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು ಎಂಬ ಪಟ್ಟ ಇವರ ಈ ಹೇಳಿಕೆಗಳಿಗೆ ಲಭಿಸಿದೆ.

ಹೀಗಾಗಿ ಇಲ್ಲಿ ಟೆಕ್‌ ಕ್ಷೇತ್ರದಲ್ಲಿ ಮಹಾನ್‌ ಸಾಧನೆ ಮಾಡಿದ ದೊಡ್ಡ ವ್ಯಕ್ತಿಗಳು ಹೇಳಿರುವ ಕೆಟ್ಟ ಟೆಕ್‌ ಭವಿಷ್ಯವಾಣಿಗಳು ಇಲ್ಲಿವೆ.ಯಾರೆಲ್ಲ ಏನು ಹೇಳಿದ್ದಾರೆ ಎನ್ನುವುದನ್ನು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ಗೆ ಬೇಡಿಕೆ ಇರುವುದಿಲ್ಲ!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


ಮೈಕ್ರೋಸಾಫ್ಟ್‌ ಸಿಇಒ ಸ್ಟೀವ್‌ ಬಲ್ಮರ್‌ ಐಫೋನ್‌ ಉದ್ದೇಶಿಸಿ ಐನೂರು ಡಾಲರ್‌ ಬೆಲೆಯಿರುವ ದುಬಾರಿ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಎನ್ನುವ ಮಾತನ್ನು ಈ ಹಿಂದೆ ಹೇಳಿದ್ದರು. ಆದರೆ ಇವರ ತಪ್ಪಾಗಿದ್ದು ಐಫೋನ್‌ ಮಾರುಕಟ್ಟೆ ಪ್ರತಿವರ್ಷ‌ವೂ ಹೆಚ್ಚಾಗುತ್ತಲೇ ಇದೆ.

 ಪುಸ್ತಕದ ಕೆಟಲಾಗ್‌ ವ್ಯವಸ್ಥೆಗೆ ಭವಿಷ್ಯವಿಲ್ಲ!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


1960ರಲ್ಲಿ ಅಮೆರಿಕದ ರಿಟೇಲ್‌ ಕಂಪೆನಿ ಸಿಯಾರ್‍ಸ್‌ ಕ್ರಿಸ್ಮಸ್‌ ಹಬ್ಬದ ಸಂದರ್ಭದಲ್ಲಿಸ್ನೇಹಿತರು ಆಪ್ತರಿಗೆ ಉಡುಗೊರೆ ನೀಡಲು 600 ಚಿತ್ರಗಳ ಉತ್ಪನ್ನಗಳ ವಿವರವಿರುವ ಒಂದು ಪುಸ್ತಕದ ಕೆಟಲಾಗ್‌ ಪರಿಚಯಿಸಿತ್ತು. ಪುಸ್ತಕ ನೋಡಿ ಉತ್ಪನ್ನಗಳನ್ನು ಆರಿಸುವ ಈ ಹೊಸ ಮಾರುಕಟ್ಟೆ ವ್ಯವಸ್ಥೆಗೆ ಭವಿಷ್ಯವಿಲ್ಲ ಎಂದು ಟೈಮ್‌ ಮ್ಯಾಗಜಿನ್‌ ಹೇಳಿತ್ತು.

ಆದರೆ ಇಂಟರ್‌ನೆಟ್‌ ಆವಿಷ್ಕಾರಗೊಂಡ ಮೇಲೆ ಪುಸ್ತಕದ ಕೆಟಲಾಗ್‌ ಜಾಗದಲ್ಲಿ ಆನ್‌ಲೈನ್‌ ಶಾಪಿಂಗ್‌ ತಾಣಗಳು ತಲೆ ಎತ್ತಿದ್ದು. ವರ್ಷದಿಂದ ವರ್ಷಕ್ಕೆ ಆನ್‌ಲೈನ್‌ ವಹಿವಾಟು ಹೆಚ್ಚುತ್ತಿದೆ.

 7 ಇಂಚಿನ ಟ್ಯಾಬ್ಲೆಟ್‌ಗಳಿಗೆ ಭವಿಷ್ಯವಿಲ್ಲ!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


ಸ್ಟಿವ್‌ ಜಾಬ್ಸ್‌ 2010 ರಲ್ಲಿ ಸ್ಮಾರ್ಟ್‌ಫೋನ್‌ ಮತ್ತು ದೊಡ್ಡ ಗಾತ್ರದ ಟ್ಯಾಬ್ಲೆಟ್‌ ನಡುವೆ 7 ಇಂಚಿನ ಟ್ಯಾಬ್ಲೆಟ್‌ಗಳಿಗೆ ಭವಿಷ್ಯವಿಲ್ಲ ಎಂದಿದ್ದರು.ಈ ಮಾತನ್ನು ಸ್ಯಾಮ್‌ಸಂಗ್‌ ಟ್ಯಾಬ್ಲೆಟ್‌ಗಳನ್ನು ಉದ್ದೇಶಿಸಿ ಜಾಬ್ಸ್‌ ಹೇಳಿದ್ದರೂ ಸದ್ಯದ ಮಾರುಕಟ್ಟೆಯಲ್ಲಿ ಈ ಗಾತ್ರದ ಟ್ಯಾಬ್ಲೆಟ್‌ಗಳ ಬೇಡಿಕೆ ಕಡಿಮೆಯಾಗಿಲ್ಲ.ಸ್ಟಿವ್‌ ಜಾಬ್ಸ್‌ ನಿಧನವಾದ ಒಂದು ವರ್ಷದ ಬಳಿಕ 2012 ರಲ್ಲಿ ಆಪಲ್‌ 7.9 ಇಂಚಿನ ಐಪ್ಯಾಡ್‌ ಮಿನಿಯನ್ನು ಬಿಡುಗಡೆ ಮಾಡಿತ್ತು.

ಎರಡು ವರ್ಷದಲ್ಲಿ ಸ್ಪಾಮ್‌ ಮೇಲ್‌‌ಗಳಿಗೆ ಮುಕ್ತಿ!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


ಇಂಟರ್‌ನೆಟ್‌ ಬಳಕೆದಾರರಿಗೆ ಕಿರಿಕಿರಿಯಾಗುವ ಸ್ಪಾಮ್‌ ಮೇಲ್‌‌ಗಳ ಸಮಸ್ಯೆಯನ್ನು ಮುಂದಿನ ಎರಡು ವರ್ಷದೊಳಗೆ ನಿವಾರಣೆ ಮಾಡುವುದಾಗಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ 2004ರಲ್ಲಿ ಹೇಳಿದ್ದರು. ಈ ಹೇಳಿಕೆ ನೀಡಿ ಒಂಭತ್ತು ವರ್ಷವಾದರೂ ಸ್ಪಾಮ್‌ ಮೇಲ್‌ ಸಮಸ್ಯೆಗೆ ಪರಿಹಾರ ಇನ್ನೂ ಸಿಕ್ಕಿಲ್ಲ.ಪ್ರಪಂಚದಾದ್ಯಂತ ಸ್ಪಾಮ್‌ ಮೇಲ್‌ ವಿತರಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ.

 ಟ್ಯಾಬ್ಲೆಟ್‌‌ ಖರೀದಿಸುವುದು ವೇಸ್ಟ್‌!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು

ಬ್ಲ್ಯಾಕ್‌ಬೆರಿಯ ಮಾಜಿ ಸಿಇಒ ಹೆನ್ನಿಸ್‌‌ ಮೇ 2013ರ ಸಂದರ್ಶನದಲ್ಲಿ ಮುಂದಿನ ಐದು ವರ್ಷದಲ್ಲಿ ಟ್ಯಾಬ್ಲೆಟ್‌ ಬೇಡಿಕೆ ಕಡಿಮೆಯಾಗಿ ಕಂಪೆನಿಗಳು ಉತ್ಪಾದನೆ ನಿಲ್ಲಿಸಲಿದೆ ಎಂದು ಭವಿಷ್ಯ ನುಡಿದಿದ್ದರು.ಇವರ ಹೇಳಿಕೆಯ ಒಂದು ತಿಂಗಳ ಒಳಗೆ ಬ್ಲ್ಯಾಕ್‌ಬೆರಿ ಟ್ಯಾಬ್ಲೆಟ್‌ ನಿರ್ಮಾಣಕ್ಕೆ ಆಸಕ್ತಿಯನ್ನು ತೋರಿಸಿತ್ತು.ಹೆನ್ನಿಸ್‌ ಹೇಳಿಕೆ ನೀಡಿದ ಆರು ತಿಂಗಳ ಬಳಿಕ ನವೆಂಬರ್‌ನಲ್ಲಿ ಬ್ಲ್ಯಾಕ್‌ಬೆರಿ ಹೆನ್ನಿಸ್‌‌ರನ್ನು ಸಿಇಒ ಸ್ಥಾನದಿಂದ ಪದಚ್ಯುತಗೊಳಿಸಿತು.

 ಸೆಲ್‌ಫೋನ್‌, ಲ್ಯಾಂಡ್‌ಲೈನ್‌ ಫೋನ್‌ನ್ನು ಮೀರಿಸುವುದಿಲ್ಲ

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


ಮೋಟರೋಲಾ ಕಂಪೆನಿಯ ಸಂಶೋಧನಾ ಕೇಂದ್ರದ ನಿರ್ದೆಶಕ ಮಾರ್ಟಿ‌ ಕೂಪರ್‌ ಸೆಲ್‌ಫೋನ್‌, ಲ್ಯಾಂಡ್‌ಲೈನ್‌ ಫೋನ್‌ನ್ನು ಮೀರಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು.ಆದರೆ ಸದ್ಯ ಸ್ಮಾರ್ಟ್‌ಫೋನ್‌ ಭರಾಟೆಯಲ್ಲಿ ಲ್ಯಾಂಡ್‌ ಲೈನ್‌ ಫೋನ್‌ ಬಳಕೆ ಕಡಿಮೆಯಾಗಿದ್ದು,ವರ್ಷ ವರ್ಷ‌ವು ಸ್ಮಾರ್ಟ್‌ಫೋನ್‌ ಮಾರಾಟ ದ್ವಿಗುಣಗೊಳ್ಳುತ್ತಿದೆ.

 ಮನೆಯಲ್ಲಿ ಪರ್ಸ‌ನಲ್‌ ಕಂಪ್ಯೂಟರ್‌ ಬಳಸುವುದಕ್ಕೆ ಅರ್ಥ‌ವಿಲ್ಲ!

ವಿಶ್ವದ ಅತ್ಯಂತ ಕೆಟ್ಟ ಟೆಕ್ ಭವಿಷ್ಯವಾಣಿಗಳು


ಡಿಇಸಿ ಸಂಸ್ಥಾಪಕ(ಡಿಜಿಟಲ್‌ ಇಕ್ವಿಪ್‌ಮೆಂಟ್‌ ಕಾರ್ಪೋರೆಷನ್‌) ಕೆನ್‌ ಒಲ್‌‌ಸೆನ್‌ ಮುಂದಿನ ದಿನದಲ್ಲಿ ಮನೆಯಲ್ಲಿ ಪರ್ಸ‌ನಲ್‌ ಕಂಪ್ಯೂಟರ್‌ ಬಳಸುವುದಕ್ಕೆ ಅರ್ಥ‌ವಿಲ್ಲ ಎಂದು ಹೇಳಿದ್ದರು.2011 ರಲ್ಲಿ ನಡೆದ ವಿಶ್ವ ಭವಿಷ್ಯ ಸಮಾಜ ಸಭೆಯಲ್ಲಿ ಈ ಮಾತನ್ನು ಹೇಳಿದ್ದರೂ ಪರ್ಸ‌ನಲ್‌ ಕಂಪ್ಯೂಟರ್‌ಗಳನ್ನು ಮನೆಯಲ್ಲಿ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ.ಲ್ಯಾಪ್‌ಟಾಪ್‌ ಟ್ಯಾಬ್ಲೆಟ್‌ಗಳ ಮಧ್ಯೆಯೂ ತನ್ನ ಬೇಡಿಕೆಯನ್ನು ಪರ್ಸ‌ನಲ್‌ ಕಂಪ್ಯೂಟರ್‌ ಉಳಿಸಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot