ICC World Cup 2023: ಭಾರತ vs ಪಾಕಿಸ್ತಾನ... ಡೇಟಾ ಸಮಸ್ಯೆ ಇಲ್ಲದೆ ಮ್ಯಾಚ್ ನೋಡಲು ಇಲ್ಲಿದೆ ಟ್ರಿಕ್ಸ್!
ಐಸಿಸಿ ವಿಶ್ವಕಪ್ 2023 (ICC World Cup 2023) ಹಿನ್ನೆಲೆ ಇದೇ ಶನಿವಾರದಂದು ಭಾರತ ಹಾಗೂ ಪಾಕಿಸ್ತಾನ (India-Pakistan) ಪಂದ್ಯ ಆಡಲಿವೆ. ಈ ನಡುವೆ ಭಾರತದ ಕ್ರೀಡಾಭಿಮಾನಿಗಳು ಬಹಳ ಕುತೂಹಲದಿಂದ ಈ ಮ್ಯಾಚ್ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ಬ್ಲ್ಯಾಕ್ ಮಾರ್ಕೆಟ್‌ನಲ್ಲಿಯೇ ಕೆಲವು ಟಿಕೆಟ್‌ಗಳು ಭಾರೀ ಮೊತ್ತಕ್ಕೆ ಸೇಲ್ ಆಗಿವೆಯಂತೆ.
ಹೌದು, ಯಾವುದೇ ಮ್ಯಾಚ್ ಆದರೂ ಸರಿಯೇ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಎದುರಾದರೆ ಇಡೀ ಜಗತ್ತೇ ಅದನ್ನು ಕುತೂಹಲದ ಕಣ್ಣಿನಿಂದ ನೋಡುತ್ತದೆ. ಅದರಲ್ಲೂ ಭಾರತೀಯರು ಮಾತ್ರ ಇದನ್ನು ಪಂದ್ಯವನ್ನಾಗಿಯಷ್ಟೇ ವೀಕ್ಷಣೆ ಮಾಡದೆ ದೇಶದ ಪ್ರತಿಷ್ಟೆಯನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಮುಂಬರುವ ಪಂದ್ಯ ಸುಮಾರು 8 ಗಂಟೆಗಳ ವರೆಗೆ ನಡೆಯಲಿದ್ದು, ನೀವು ಮೊಬೈಲ್ ನಲ್ಲಿ ಏನಾದರೂ ಇದನ್ನು ವೀಕ್ಷಣೆ ಮಾಡುವವರಾಗಿದ್ದರೆ ಹೆಚ್ಚಿನ ಡೇಟಾ ಅಗತ್ಯವಾಗಿದೆ. ಆದರೆ, ಇರುವ ಡೇಟಾದಲ್ಲೇ ಪ್ರತಿ ಕ್ಷಣವನ್ನೂ ಮಿಸ್ ಮಾಡಿಕೊಳ್ಳದೆ ವೀಕ್ಷಣೆ ಮಾಡಲು ಇಲ್ಲಿದೆ ನೋಡಿ ಸರಳ ಟ್ರಿಕ್ಸ್.

ರೆಸಲ್ಯೂಶನ್ ಸರಿಯಾಗಿರಲಿ: ನೀವು ಕ್ರಿಕೆಟ್ ಪಂದ್ಯವನ್ನು ಅಥವಾ ಯಾವುದೇ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ (Online stream) ಮಾಡುತ್ತಿರುವ ರೆಸಲ್ಯೂಶನ್ ಅನ್ನು ಡೇಟಾ ಬಳಕೆ ಅವಲಂಬಿಸಿರುತ್ತದೆ. ಅಂದರೆ ಫುಲ್ ಹೆಚ್‌ಡಿ ಗುಣಮಟ್ಟದಲ್ಲಿ ಸ್ಟ್ರೀಮಿಂಗ್ ಮೂರು ಗಂಟೆಗಳ ಹೊಂದಾಣಿಕೆಗಾಗಿ ಸುಮಾರು 3GB ಡೇಟಾವನ್ನು ಬಳಸುತ್ತದೆ ಮತ್ತು ಅದನ್ನು ಹೆಚ್‌ಡಿ ಗುಣಮಟ್ಟಕ್ಕೆ ಕಡಿಮೆ ಮಾಡುವುದರಿಂದ ಡೇಟಾ ಬಳಕೆ 3 ಗಂಟೆಗೆ 1.8GB ಸಾಕು. ಪರಿಣಾಮ ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ.
ಡೇಟಾ ಸೇವರ್ ಮೋಡ್ ಆಕ್ಟಿವ್ ಮಾಡಿ: ಐಫೋನ್‌ಗಳು ಮತ್ತು ಐಪ್ಯಾಡ್‌ಗಳು ಸೇರಿದಂತೆ ಹೆಚ್ಚಿನ ಡಿವೈಸ್‌ಗಳು ಕಡಿಮೆ ಡೇಟಾ ಮೋಡ್ ಅಥವಾ ಡೇಟಾ ಸೇವರ್ ಮೋಡ್‌ನೊಂದಿಗೆ (Data saver mode) ಬರುತ್ತವೆ. ಇದನ್ನು ಸಕ್ರಿಯಗೊಳಿಸುವುದರಿಂದ ಆಪ್‌ನಲ್ಲಿ ವಿಶೇಷವಾಗಿ ಹಿನ್ನೆಲೆಯಲ್ಲಿ ರನ್ ಆಗುವ ಮತ್ತು ಡೇಟಾವನ್ನು ಸೇವಿಸುವ ಆಪ್‌ಗಳಿಗೆ ಕಡಿವಾಣ ಹಾಕಬಹುದು.
ಆಟೋ ಸಿಂಕ್ ಅನ್ನು ಆಫ್ ಮಾಡಿ: ಆಂಡ್ರಾಯ್ಡ್ ಡಿವೈಸ್‌ಗಳು ಬಳಕೆದಾರರಿಗೆ ಆಟೋ ಸಿಂಕ್ ಫೀಚರ್ಸ್ (Auto sync feature) ಅನ್ನು ನೀಡುತ್ತವೆ. ಆದರೆ ನೀವು ಈ ವೇಳೆ ಇದನ್ನು ಸಂಪೂರ್ಣವಾಗಿ ಆಫ್ ಮಾಡಿ. ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಡೇಟಾ ಹೀರಿಕೆ ಕಡಿಮೆ ಆಗುತ್ತದೆ. ನೀವು ಅದನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಮತ್ತು ಹಸ್ತಚಾಲಿತವಾಗಿ ಮಾಡಲು ಇಚ್ಚೆ ಇಲ್ಲ ಎಂದಾದರೆ ವೈ-ಫೈ ಓನ್ಲಿ ಮೋಡ್ (Wi-Fi only mode)ಅನ್ನು ಸಕ್ರಿಯಗೊಳಿಸಿ.
ಆಟೋ ಡೌನ್‌ಲೋಡ್ ಅನ್ನು ನಿಷ್ಕ್ರಿಯಗೊಳಿಸಿ: ಒಂದು ಕಡೆ ಅಪ್‌ಡೇಟ್ ಉದ್ದೇಶಕ್ಕೆ ಆಪ್‌ಗಳು ಡೇಟಾವನ್ನು ಬಳಸಿದರೆ ಇತ್ತ ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್‌ಗಳು ಸಹ ಹೆಚ್ಚಿನ ಡೇಟಾವನ್ನು ಬಳಕೆ ಮಾಡುತ್ತವೆ ಎಂಬುದು ನಿಮಗೆ ತಿಳಿದಿರಲಿ. ಸಾಮಾನ್ಯವಾಗಿ ಅವು GB ಗಳಲ್ಲಿರುತ್ತವೆ ಪರಿಣಾಮ ನೀವು ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಹೆಚ್ಚಿನ ಡೇಟಾವನ್ನು ಉಳಿಸಬಹುದು.
ಆಟೋ ಪ್ಲೇ ನಿಷ್ಕ್ರಿಯಗೊಳಿಸಿ: ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಟೋ ಪ್ಲೇ (Auto play) ಅನ್ನು ನಿಷ್ಕ್ರಿಯಗೊಳಿಸಿ. ಇದೇನಾದರೂ ಆನ್ ಆಗಿದ್ದರೆ ಬಹಳಷ್ಟು ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತದೆ. ಅಂದರೆ ಕ್ಲಿಪ್‌ಗಳನ್ನು ಆಟೋಮ್ಯಾಟಿಕ್ ಆಗಿ ಪ್ಲೇ ಮಾಡುತ್ತದೆ. ಇದನ್ನು ತಡೆಯುವ ಮೂಲಕ ಈ ಮ್ಯಾಚ್ ಅನ್ನು ಯಾವುದೇ ಸಮಸ್ಯೆ ಇಲ್ಲದೆ ವೀಕ್ಷಣೆ ಮಾಡಿ.

ಆಪ್ ಅಪ್‌ಡೇಟ್ ಸ್ಟಾಪ್ ಮಾಡಿ: ಹೆಚ್ಚಿನ ಡೇಟಾ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿನ ಆಪ್ ಅಪ್‌ಡೇಟ್‌ಗೆ ಸೀಮಿತವಾಗಿಬಿಡುತ್ತದೆ. ಪರಿಣಾಮ ಗೂಗಲ್ ಪ್ಲೇ ಸ್ಟೋರ್ (Google Play Store) ಹಾಗೂ ಆಪಲ್ ಸ್ಟೋರ್ ಗೆ ಹೋಗಿ ಅಲ್ಲಿ ಸೆಟ್ಟಿಂಗ್ ವಿಭಾಗಕ್ಕೆ ಹೋದರೆ ಮೊಬೈಲ್ ಡೇಟಾ ಬಳಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ನಿಷ್ಕ್ರಿಯಗೊಳಿಸಿ. ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರೆ, ಫೋನ್ ವೈ-ಫೈ ಗೆ ಸಂಪರ್ಕಗೊಂಡಾಗ ಮಾತ್ರ ಆಪ್‌ಗಳು ಅಪ್‌ಡೇಟ್ ಆಗಲಿವೆ.


Click it and Unblock the Notifications








